
ಬೆಂಗಳೂರು, ನ.11: ಎರಡು ವಾರದ ಕೆಳಗೆ ಪ್ರಾರಂಭವಾದ ರಾಷ್ಟ್ರೋತ್ಥಾನ ಕನ್ನಡ ಪುಸ್ತಕ ಹಬ್ಬದಲ್ಲಿ ನವೆಂಬರಿನ ಎರಡನೇ ವಾರಾಂತ್ಯದಲ್ಲಿ ಮೂರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ನ.12, ಶನಿವಾರ ಬೆಳಗ್ಗೆ 11 ಗಂಟೆಗೆ ಖ್ಯಾತ ಲೇಖಕರು ಹಾಗೂ ಉಪನ್ಯಾಸಕರಾದ ಶ್ರೀ ಸಂದೀಪ್ ಬಾಲಕೃಷ್ಣ ಅವರ ಉಪನ್ಯಾಸ, ‘ಮೋಪ್ಲಾ’ ನೂರು; ಸಮಸ್ಯೆಗಳು ಸಾವಿರ, ಇರಲಿದೆ.
ನ.13, ಭಾನುವಾರ ಬೆಳಗ್ಗೆ 11ಕ್ಕೆ ವಿಜಯಪುರದ ಪ್ರಾಧ್ಯಾಪಕರು ಹಾಗೂ ಲೇಖಕರಾದ ಡಾ. ಮಲ್ಲಿಕಾರ್ಜುನ ಮೇತ್ರಿಯವರಿಂದ ಸಾಹಿತ್ಯ, ಪತ್ರಿಕಾಕ್ಷೇತ್ರ, ಸ್ವಾತಂತ್ರ್ಯ ಹೋರಾಟಕ್ಕೆ ಹರ್ಡೇಕರ್ ಮಂಜಪ್ಪನವರ ಕೊಡುಗೆ ವಿಚಾರವಾಗಿ ಉಪನ್ಯಾಸವಿರುತ್ತದೆ.
ಅದೇ ದಿನ ಸಂಜೆ 5ಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಸಿನೆಮ ನಿರ್ದೇಶಕರಾದ ಶ್ರೀ ಪಿ. ಶೇಷಾದ್ರಿಯವರೊಂದಿಗೆ ಕನ್ನಡ ಕಾದಂಬರಿಗಳು ಮತ್ತು ಸಿನೆಮ ಕುರಿತಾಗಿ ಸಂವಾದ ಕಾರ್ಯಕ್ರಮವಿರುತ್ತದೆ ಹಾಗೂ ಸಂವಾದವನ್ನು ಲೇಖಕರು ಹಾಗೂ ರಂಗಕರ್ಮಿ, ಶ್ರೀ ಸುಘೋಷ್ ನಿಗಳೆಯವರು ನಡೆಸಿಕೊಡಲಿದ್ದಾರೆ.
ಕರ್ನಾಟಕ ರಾಜ್ಯೋತ್ಸವದ ಸುಸಂದರ್ಭದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿರುವ ಕನ್ನಡ ಪುಸ್ತಕ ಹಬ್ಬದಲ್ಲಿ ಇದೇ ಸ್ವರೂಪದ ವಾರಾಂತ್ಯದ ಉಪನ್ಯಾಸ, ಸಂವಾದ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ನ.27ರವಗೆಗೂ ಮುಂದುವರೆಯಲಿವೆ. ಮತ್ತೆ ಪ್ರತಿದಿನ ಬೆಳಗ್ಗೆಯಿಂದ ಸಂಜೆಯವರೆಗೆ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಇರಲಿದೆ. ರಾಷ್ಟ್ರೋತ್ಥಾನ ಸಾಹಿತ್ಯ ಮಾತ್ರವಲ್ಲದೇ ಇತರೇ ಪ್ರಸಿದ್ಧ ಸಾಹಿತ್ಯಗಳೂ ಲಭ್ಯವಿರುತ್ತವೆ. 50%ವರೆಗೂ ರಿಯಾಯಿತಿ ಸಿಗಲಿದೆ.
ಪುಸ್ತಕ ಹಬ್ಬದ ಎರಡನೇ ವಾರದಲ್ಲಿ ಪುಸ್ತಕಾಭಿಮಾನಿಗಳ ಪಾಲ್ಗೊಳ್ಳುವಿಕೆ ಪ್ರೋತ್ಸಾಹಕರವಾಗಿತ್ತು.
ಪುಸ್ತಕ ಹಬ್ಬ ಇಲ್ಲಿ ನಡೆಯುತ್ತಿದೆ: ‘ಕೇಶವಶಿಲ್ಪ’ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು – 04
ಪುಸ್ತಕಗಳ ಆನ್‍ಲೈನ್ ಖರೀದಿಗೂ ಅವಕಾಶವಿದೆ: https://www.sahityabooks.com/

