Call Us Now
+91 94482 84602
Email Us
info@rashtrotthana.org

ಕನ್ನಡ ಪುಸ್ತಕ ಹಬ್ಬ: ನ. 5, 6ರ ಕಾರ್ಯಕ್ರಮಗಳು

ಬೆಂಗಳೂರು, ನ.4: ಒಂದು ವಾರದ ಕೆಳಗೆ ಪ್ರಾರಂಭವಾದ ರಾಷ್ಟ್ರೋತ್ಥಾನ ಕನ್ನಡ ಪುಸ್ತಕ ಹಬ್ಬದಲ್ಲಿ ನವೆಂಬರಿನ ಮೊದಲ ವಾರಾಂತ್ಯದಲ್ಲಿ ನಾಲ್ಕು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ನ.5, ಶನಿವಾರ ಬೆಳಗ್ಗೆ 11 ಗಂಟೆಗೆ ಖ್ಯಾತ ಅಂಕಣಕಾರರು ಹಾಗೂ ವಿಜ್ಞಾನ ಲೇಖಕರಾದ ಶ್ರೀ ರೋಹಿತ್ ಚಕ್ರತೀರ್ಥ ಅವರಿಂದ ಉಪನ್ಯಾಸ, ಬ್ರಿಟಿಷ್‍ಪೂರ್ವ ಭಾರತದಲ್ಲಿ ವಿಜ್ಞಾನ-ತಂತ್ರಜ್ಞಾನ.
ಅದೇ ಸಂಜೆ 6ಕ್ಕೆ, ಖ್ಯಾತ ಲೇಖಕರು ಹಾಗೂ ಅಂಕಣಕಾರರಾದ ಡಾ. ಬಾಬು ಕೃಷ್ಣಮೂರ್ತಿಯವರಿಂದ ಉಪನ್ಯಾಸವಿದ್ದು, ಡಾ. ವಿಜಯ ಸಂಕೇಶ್ವರ, ಅಧ್ಯಕ್ಷರು, ವಿಆರ್‍ಎಲ್ ಸಮೂಹ ಸಂಸ್ಥೆಗಳು, ಇವರ ಘನ ಅಧ್ಯಕ್ಷತೆ ಇರಲಿದೆ.
ನ.6, ಭಾನುವಾರ ಬೆಳಗ್ಗೆ 11ಕ್ಕೆ ಖ್ಯಾತ ಲೇಖಕರು ಹಾಗೂ ಅಂಕಣಕಾರರಾದ ಶ್ರೀ ದು. ಗು. ಲಕ್ಷ್ಮಣ ಅವರ ಉಪನ್ಯಾಸ, ಸ್ವಾತಂತ್ರ್ಯ ಹೋರಾಟದಲ್ಲಿ ದಕ್ಷಿಣಭಾರತ.
ಅದೇ ದಿನ ಸಂಜೆ 5ಕ್ಕೆ ಶ್ರೀ ಅರಬಿಂದೊ ಸೊಸೈಟಿಯ ’ಅಖಿಲ ಭಾರತ ಪತ್ರಿಕೆ’ಯ ಸಂಪಾದಕರಾದ ಶ್ರೀ ಪುಟ್ಟು ಕುಲಕರ್ಣಿಯವರ ಉಪನ್ಯಾಸ, ರಾಷ್ಟ್ರೀಯ ಸಾಹಿತ್ಯ, ಪತ್ರಿಕಾಕ್ಷೇತ್ರ ಹಾಗೂ ಸ್ವಾತಂತ್ರ್ಯ ಹೋರಾಟ: ಅರವಿಂದರ ಕೊಡುಗೆ.
ಕರ್ನಾಟಕ ರಾಜ್ಯೋತ್ಸವದ ಸುಸಂದರ್ಭದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿರುವ ಕನ್ನಡ ಪುಸ್ತಕ ಹಬ್ಬದಲ್ಲಿ ಇದೇ ಸ್ವರೂಪದ ವಾರಾಂತ್ಯದ ಉಪನ್ಯಾಸ, ಸಂವಾದ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ನ.27ರವಗೆಗೂ ಮುಂದುವರೆಯಲಿವೆ. ಮತ್ತೆ ಪ್ರತಿದಿನ ಬೆಳಗ್ಗೆಯಿಂದ ಸಂಜೆಯವರೆಗೆ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಇರಲಿದೆ. ರಾಷ್ಟ್ರೋತ್ಥಾನ ಸಾಹಿತ್ಯ ಮಾತ್ರವಲ್ಲದೇ ಇತರೇ ಪ್ರಸಿದ್ಧ ಸಾಹಿತ್ಯಗಳೂ ಲಭ್ಯವಿರುತ್ತವೆ. 50%ವರೆಗೂ ರಿಯಾಯಿತಿ ಸಿಗಲಿದೆ.
ಪುಸ್ತಕ ಹಬ್ಬದ ಮೊದಲ ವಾರದಲ್ಲಿ ಪುಸ್ತಕಾಭಿಮಾನಿಗಳ ಪಾಲ್ಗೊಳ್ಳುವಿಕೆ ತೃಪ್ತಿಕರವಾಗಿದೆ.
ಪುಸ್ತಕ ಹಬ್ಬ ಇಲ್ಲಿ ನಡೆಯುತ್ತಿದೆ: ‘ಕೇಶವಶಿಲ್ಪ’ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು – 04
ಪುಸ್ತಕಗಳ ಆನ್‍ಲೈನ್ ಖರೀದಿಗೂ ಅವಕಾಶವಿದೆ: https://www.sahityabooks.com/