ಸಸಿ ನೆಡುವ ಸಪ್ತಾಹದಲ್ಲಿ ಇಂದು (4ನೇ ದಿನ) ವಿ.ಆರ್.ಎಲ್. ಸಮೂಹ ಸಂಸ್ಥೆಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಿಜಯ ಸಂಕೇಶ್ವರ್ ಅವರು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಸಂಘಚಾಲಕರಾದ ವಿ. ನಾಗರಾಜ್ ಅವರು ಆಗಮಿಸಿ ಸಸಿ ನೆಟ್ಟರು.ರಾಷ್ಟ್ರೋತ್ಥಾನ ಪರಿಷತ್ ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ, ಖಜಾಂಚಿ ಕೆ.ಎಸ್. ನಾರಾಯಣ ಮುಂತಾದವರು ಉಪಸ್ಥಿತರಿದ್ದರು.
ರಾಷ್ಟ್ರೋತ್ಥಾನ ಪರಿಷತ್ ದೊಡ್ಡಬಳ್ಳಾಪುರದ ಘಾಟಿಸುಬ್ರಹ್ಮಣ್ಯದ 30 ಎಕರೆ ಜಾಗದಲ್ಲಿ ಕಾಡು ಬೆಳೆಸಲು ನಿರ್ಧರಿಸಿದೆ. ಇದಕ್ಕಾಗಿ ‘ಬೃಂದಾವನ – ಕೃಷಿ ಅರಣ್ಯ ಯೋಜನೆ’ ರೂಪಿಸಿದ್ದು 9ರಿಂದ 15ರ ವರೆಗೆ ಸಸಿ ನೆಡುವ ಸಪ್ತಾಹ ಕಾರ್ಯಕ್ರಮವನ್ನು ಆಯೋಜಿಸಿದೆ.



