Call Us Now
+91 94482 84602

ಬೆಂಗಳೂರು: ದಿನಾಂಕ 18.07.2022ರಂದು ಥಣಿಸಂದ್ರದ ರಾಷ್ಟ್ರೋತ್ಥಾನ

ವಿದ್ಯಾಕೇಂದ್ರದಲ್ಲಿ ಸಾಧನಾ ಪ್ರಕಲ್ಪದಲ್ಲಿ ವ್ಯಾಸಂಗ ಮಾಡಿದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಹಾಗೂ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಕುಮಾರಿ ಅಕ್ಷತಾ ಸ್ವಾಗತ ಮತ್ತು ಪರಿಚಯ ಮಾಡಿದರು. ಶ್ರೀಮತಿ ರುಕ್ಮಿಣಿ ಪ್ರಾಸ್ತಾವಿಕ ನುಡಿಯಗಳನ್ನಾಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿದರು. ಸಾಧನಾ ವಿಭಾಗದ ಸಂಯೋಜಕರಾದ ಶ್ರೀಮತಿ ಜ್ಯೋತಿ ಗುಡಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕೆಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿನಿಯರು ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ ದೇಶಭಕ್ತಿಗೀತೆ ಹಾಡಿದರು. ಕುಮಾರಿ ಲೇಖನಾ, ಕುಮಾರಿ ಕೀರ್ತನಾ ಮತ್ತು ಕುಮಾರಿ ಸಿರೀಶಾ ಮಾತನಾಡಿ “ಸಾಧನಾದಲ್ಲಿ ಕಲಿತ ನಾವು ಎಲ್ಲಿಬೇಕಾದರೂ ಬದುಕುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದೇವೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಈ ರೀತಿಯ ಶೈಕ್ಷಣಿಕ ಸೌಲಭ್ಯ ಸಿಗಲು ಸಾಧ್ಯವಾಗುತ್ತಿರಲಿಲ್ಲ. ಸಾಧನಾದಂತಹ ಸಂಸ್ಥೆಗಳು ಗ್ರಾಮೀಣ ಪ್ರದೇಶದ ಮಕ್ಕಳ ಬೆಳವಣಿಗೆಗೆ ಪ್ರೇರಕ ಮತ್ತು ಪೂರಕವಾಗಿವೆ” ಎಂದರು.

ಮಕ್ಕಳನ್ನುದ್ದೇಶಿಸಿ ಮಾತನಾಡಿದ ಶ್ರೀಮತಿ ಶಾರದಾ, “ಬದುಕಿನಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗದೇ ದೃಢವಾದ ಶಕ್ತಿಯಾಗಿ ನಿಲ್ಲಿ. ವಾಮಮಾರ್ಗಗಳು ಎಂದಿಗೂ ಯಶಸ್ಸನ್ನು ತರಲಾರವು” ಎಂದರು. ಸಾಧನಾ ಪ್ರಕಲ್ಪದ ಪ್ರಮುಖರಾದ ಶ್ರೀ ರವಿಕುಮಾರ್ ಮಕ್ಕಳ ಉಜ್ವಲ ಭವಿಷ್ಯಕ್ಕೆ ಪೂರಕವಾದ ವಿವೇಕಾನಂದರ ಪುಸ್ತಕ ವಿತರಣೆ ಮಾಡಿ ಶುಭಹಾರೈಸಿದರು. ಕುಮಾರಿ ರೂಪಾ ವಂದಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

https://www.facebook.com/rashtrotthanaparishath/
https://rashtrotthana.org/

Rashtrotthana #RashtrotthanaParishat #RashtrotthanaParishatBengaluru