Call Us Now
+91 94482 84602
Email Us
info@rashtrotthana.org

ರಾಷ್ಟ್ರೋತ್ಥಾನ ವಿದ್ಯಾಲಯ, ಹೊಳೆಹೊನ್ನೂರು – 2022ರ ಜನವರಿ ಚಟುವಟಿಕೆಗಳು

ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗಾಗಿ
ಭಾರತೀಯ ಮೌಲ್ಯ ಮತ್ತು ತತ್ತ್ವಗಳ ಆಧಾರದ ಮೇಲೆ ಹೊಳೆಹೊನ್ನೂರಿನ ರಾಷ್ಟ್ರೋತ್ಥಾನ ವಿದ್ಯಾಲಯವು ಮಕ್ಕಳಿಗೆ ಕಳೆದ ಹಲವು ದಶಕಗಳಿಂದ ಶಿಕ್ಷಣವನ್ನು ನೀಡುತ್ತಿದೆ. ತನ್ಮೂಲಕ ಗುರು-ಶಿಷ್ಯ ಪರಂಪರೆಗೆ ಹೊಸ ಭಾಷ್ಯ ಬರೆದಿದೆ. ಪ್ರತಿ ತಿಂಗಳು ಶಾಲೆಯಲ್ಲಿ ಮಕ್ಕಳ ಕಲಿಕೆ ಮತ್ತು ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ವಿವಿಧ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.

ಜನವರಿ ತಿಂಗಳ ಕಾರ್ಯಕ್ರಮಗಳು:
ಮಕರ ಸಂಕ್ರಾಂತಿ ಕಾರ್ಯಕ್ರಮ – ಮಕರ ಸಂಕ್ರಾಂತಿಯ ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಮಹತ್ತ್ವವನ್ನು ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ಜಯಶ್ರೀ ಮಾತಾಜೀಯವರು ಸಂಕ್ರಾಂತಿಯ ಸಾಂಸ್ಕೃತಿಕ ಹಿನ್ನಲೆ ಮತ್ತು ಅದನ್ನು ಆಚರಿಸುವ ಬಗೆಯ ಕುರಿತು ಹೇಳಿದರು. ಶ್ರೀಯುತ ಪ್ರಭಾಕರ್ ಗುರೂಜಿಯವರು ಭೂಮಿಯ ದೈನಂದಿನ ಚಲನೆಯಿಂದಾಗುವ ಹಗಲು ರಾತ್ರಿಯ ಬಗ್ಗೆ, ವಾರ್ಷಿಕ ಚಲನೆಯಿಂದಾಗುವ ಋತುಮಾನಗಳ ಬಗ್ಗೆ, ವಿವಿಧ ರಾಶಿಯ ಹಿನ್ನಲೆಯಲ್ಲಿ ಸೂರ್ಯನ ಚಲನೆಯ ಬಗ್ಗೆ ಹಾಗೂ ಉತ್ತರಾಯಣ ಮತ್ತು ದಕ್ಷಿಣಾಯಣಗಳ ಬಗ್ಗೆ ಪ್ರಯೋಗ ಸಹಿತ ಮಕ್ಕಳಿಗೆ ತಿಳಿಸಿದರು. ಶಿಕ್ಷಕರು ಮತ್ತು ಪೋಷಕರ ಮನೆಗಳಿಗೆ ಭೇಟಿ ನೀಡಿ ಎಳ್ಳು-ಬೆಲ್ಲ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನೇತಾಜಿ ನೇಜಾಜಿ ಸುಭಾಷ್ ಚಂದ್ರ ಬೋಸರ ಜಯಂತಿ (ಜನವರಿ 23) – ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿಯ ಪ್ರಯುಕ್ತ ನೇತಾಜಿಯವರ ಜೀವನ, ಧ್ಯೇಯ, ಸಾಧನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾಹಿತಿ ನೀಡಿದರು.
ಸ್ವಾಮಿ ಸ್ವಾಮಿ ವಿವೇಕಾನಂದ ಜಯಂತಿ (ಜನವರಿ 12) – ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ಎರಡು ವಾರಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳಿಗೆ ವಿವೇಕಾನಂದರ ಜೀವನಾಧಾರಿತ ಸ್ಫೂರ್ತಿದಾಯಕ ಕಥೆಗಳನ್ನು ಹೇಳಲಾಯಿತು. ‘ವಿವೇಕಾನಂದರ ದೃಷ್ಟಿಯಲ್ಲಿ ಶಿಕ್ಷಣ’ ಎಂಬ ವಿಷಯದ ಬಗ್ಗೆ ಮಕ್ಕಳಿಗೆ ಉಪನ್ಯಾಸ ನೀಡಲಾಯಿತು. ವಿದ್ಯಾರ್ಥಿಗಳು ವಿವೇಕಾನಂದರ ಬಗ್ಗೆ ಭಾಷಣ, ಹಾಡು ಮತ್ತು ನಾಟಕಗಳನ್ನು ಪ್ರದರ್ಶಿಸಿದರು.
ಗಣರಾಜ್ಯೋತ್ಸವ ಸಮಾರಂಭ (ಜನವರಿ 26) – ಗಣರಾಜ್ಯೋತ್ಸವದ ಪ್ರಯುಕ್ತ ಶಾಲಾ ಆಡಳಿತ ಮಂಡಳಿ ಸದಸ್ಯರ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ಕ್ಯಾಪ್ಟನ್ ಬಿಪಿನ್ ರಾವತ್ ಸೇರಿದಂತೆ ಹುತಾತ್ಮ ಯೋಧರಿಗೆ ನiನ ಸಲ್ಲಿಸಲಾಯಿತು. ವಿದ್ಯಾರ್ಥಿ ಸಮೂಹದಿಂದ ದೇಶಭಕ್ತಿಗೀತೆ, ನೃತ್ಯ, ಸ್ವಾತಂತ್ರ್ಯ ಹೋರಾಟಗಾರರ ಕುರಿತ ನಾಟಕ ಮತ್ತು ಭಾಷಣ ಸೇರಿದಂತೆ 25ಕ್ಕೂ ಹೆಚ್ಚಿನ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಾಯಿತು.
ಪುಣ್ಯಕೋಟಿ ನೃತ್ಯ ನಾಟಕ – ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಜನವರಿ 2ರಂದು ’ಹೊಂಗಿರಣ’ ನಾಟಕ ತಂಡದಿಂದ ನಡೆದ ’ಪುಣ್ಯಕೋಟಿ’ ನೃತ್ಯನಾಟಕದಲ್ಲಿ ಶಾಲೆಯ ವಿದ್ಯಾರ್ಥಿನಿಯರು ಪಾತ್ರ ನಿರ್ವಹಿಸಿದರು. ಈ ರೀತಿ ಶಾಲೆಯ ವಿದ್ಯಾರ್ಥಿಗಳು ಔಪಚಾರಿಕ ಶಿಕ್ಷಣದೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿದ್ದಾರೆ.
ಕೋವಿಡ್ ಲಿಸಿಕಾ ಕಾರ್ಯಕ್ರಮ – ಜನವರಿ 3ರಂದು ಶಾಲೆಯಲ್ಲಿ 9 ಮತ್ತು 10ನೇ ತರಗತಿ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲಾಯಿತು.
https://www.facebook.com/rashtrotthanaparishath/
https://rashtrotthana.org/
https://www.sahityabooks.com/

Rashtrotthana #RashtrotthanaParishat #AnudinaChintana #RashtrotthanaSchool #RashtrotthanaVidyala #RashtrotthanaVidyalayaHolehonnuru #RashtrotthanaRVH