ಮೈಸೂರು, ಮಾರ್ಚ್ 15: ರಾಷ್ಟ್ರೋತ್ಥಾನ ಪರಿಷತ್ತಿನ ಮಹತ್ತ್ವದ ಯೋಜನೆಗಳಲ್ಲಿ ಒಂದಾದ ರಾಷ್ಟ್ರೋತ್ಥಾನ ಸಾಹಿತ್ಯವು ಕಳೆದ ಐದು ದಶಕಗಳಿಂದ ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರವು ಪುರಸ್ಕಾರ ನೀಡಿದೆ.
ಕನ್ನಡ ಪುಸ್ತಕ ಪ್ರಾಧಿಕಾರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಮಾರ್ಚ್ 15ರಂದು ಆಯೋಜಿಸಿದ್ದ ಪ್ರಕಾಶಕರ ದ್ವಿತೀಯ ಸಮ್ಮೇಳನದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಸಲ್ಲಿಸಿದ ಅನರ್ಘ್ಯ ಸೇವೆಗಾಗಿ ರಾಷ್ಟ್ರೋತ್ಥಾನ ಸಾಹಿತ್ಯಕ್ಕೆ ಪುರಸ್ಕಾರವನ್ನು ನೀಡಿ ಗೌರವಿಸಿದೆ.
ರಾಷ್ಟ್ರೋತ್ಥಾನ ಸಾಹಿತ್ಯ ಬೆಳೆಸಿದ ಅವಿಚ್ಛಿನ ಸಾಹಿತ್ಯ ಪರಂಪರೆ:
ಡಿಸೆಂಬರ್ 5, 1965ರಂದು ಭಾರತದ ವೀರ ಯೋಧರ ಕುರಿತಾದ ‘ರಣವೀಳ್ಯ’ ಕಥಾ ಸಂಕಲನದ ಬಿಡುಗಡೆಯೊಂದಿಗೆ ರಾಷ್ಟ್ರೋತ್ಥಾನ, ಸಾಹಿತ್ಯಿಕ ಪ್ರಕಟಣೆಗಳಿಗೆ ನಾಂದಿ ಹಾಡಿತು.
ರಾಷ್ಟ್ರೋತ್ಥಾನ ಸಾಹಿತ್ಯ, ಸಾಹಿತ್ಯ ಸಿಂಧು ಸೇರಿದಂತೆ ಒಟ್ಟು 250ಕ್ಕೂ ಹೆಚ್ಚು ಪುಸ್ತಕಗಳು ಈವರೆಗೆ ಪ್ರಕಟವಾಗಿವೆ.
‘ಅಜೇಯ’, ‘ಅದಮ್ಯ’, ‘ತೋರಬೆರಳು’, ‘ಶತಮಾನದ ತಿರುವಿನಲ್ಲಿ ಭಾರತ’ ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
‘ಉತ್ಕರ್ಷಪಥ’ ಕೃತಿಗೆ ಸಿದ್ಧವನಹಳ್ಳಿ ಕೃಷ್ಣಶರ್ಮ ಸ್ಮಾರಕ ಪ್ರಶಸ್ತಿ ಲಭಿಸಿದೆ.
‘ಸಾಮಾಜಿಕ ಕ್ರಾಂತಿಸೂರ್ಯ ಡಾ. ಬಾಬಾಸಾಹೇಬ್ ಅಂಬೇಡ್ಕರ್’ ಪುಸ್ತಕವು 2011 ರಲ್ಲಿ ರಾಜ್ಯ ಸಾಹಿತ್ಯ ಪ್ರಶಸ್ತಿಗಳಿಂದ ಅತ್ಯುತ್ತಮ ಅನುವಾದಿತ ಪ್ರಕಟಣೆ ಎಂದು ಗುರುತಿಸಲ್ಪಟ್ಟಿದೆ.
ಸ್ವಾಮಿ ವಿವೇಕಾನಂದರ 150 ನೇ ಜನ್ಮ ವಾರ್ಷಿಕೋತ್ಸವದ ಪ್ರಯುಕ್ತ ಹೊರತಂದ ‘ಏಳಿ, ಎದ್ದೇಳಿ’ ಪ್ರಕಟಣೆಯು 40,000 ಪ್ರತಿಗಳ ದಾಖಲೆಯ ಮಾರಾಟವನ್ನು ಖಂಡಿದೆ.
ರಾಷ್ಟ್ರೋತ್ಥಾನ ಸಾಹಿತ್ಯಕ್ಕೆ ಲಭಿಸುವ ಪ್ರಶಸ್ತಿ ಮತ್ತು ಗೌರವ ಪುರಸ್ಕಾರಗಳು ಸಂಸ್ಥೆಯು ಗುರಿ ಮತ್ತು ಧ್ಯೇಯಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತದೆ ಹಾಗೂ ಸಾಹಿತ್ಯ ಜಗತ್ತಿನ ಶ್ರೇಷ್ಠ ಪರಂಪರೆಯನ್ನು ಮುಂದುವರೆಸಲು, ಸಾಹಿತ್ಯದ ಬೇರನ್ನು ಸದೃಢಗೊಳಿಸಲು ಪ್ರಶಸ್ತಿಗಳು ಉತ್ತೇಜನದ ಮೆಟ್ಟಿಲುಗಳಾಗಿವೆ.
Kannada Pustaka Pradhikara felicitates Rashtrotthana Sahitya
Mysuru, March 15: Rashtrotthana Sahitya, a prime wing of Rashtrotthana Parishat was honoured by Kannada Pustaka Pradhikara, Bengaluru for its phenomenal service in the field of literature for the last 5 decades.
Rashtrotthana Sahitya was felicitated at the Publisher’s Second Conference organised by Kannada Pustaka Pradhikara at Maharaja College, Mysore on 15th of March, recognising its exceptional contribution to the Kannada literary world and for successfully continuing the legacy of Kannada literature.
The Literary Milestones of Rashtrotthana Sahitya:
The publication pioneered its journey through its maiden publication ‘Ranaveelya’ (A book based on the saga of brave warriors of India) on 5th Dec 1965.
More than 250 publications from 5 decades.
‘Ajeya’, ‘Adamya’, ‘Torberalu’, ‘Shatamanada Tiruvinalli Bharata’ books have received the Rajya Sahitya Academy Award.
‘Utkarshapatha’, bagged the Siddavanahalli Krishna Sharma Memorial Award.
‘Samajika Krantisurya Dr. Babasaheb Ambedkar’ was recognised as the best translated publication in 2011 by the State Literary Awards.
On the eve of the 150th Birth Anniversary of Swami Vivekananda, a publication named ‘Yeli, Yeddeli’ (Arise, Awake) hit record sales of 40,000 copies all around the state.
The honours and felicitations help the organisation to enhance their potential in their vision of strengthening the roots of Kannada literature and enriching the oceanic heritage of the literary world.
https://www.facebook.com/rashtrotthanaparishath/
https://rashtrotthana.org/
https://www.sahityabooks.com/