ಬೆಂಗಳೂರು, ನ.27: ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಥಣಿಸಂದ್ರದಲ್ಲಿ ರಾಷ್ಟ್ರೋತ್ಥಾನ ಸೇವಾವಸತಿ ಪ್ರಕಲ್ಪದ ಮಹಿಳಾ ಸ್ವಸಹಾಯ ಸಂಘಗಳ ಒಂದು ದಿನದ ವಿಶೇಷ ಸಮಾವೇಶವನ್ನು ಆಯೋಜಿಸಲಾಗಿತ್ತು.
ಸಮಾವೇಶದಲ್ಲಿ 81 ಮಹಿಳಾ ಸ್ವಸಹಾಯ ಸಂಘಗಳ 696 ಸದಸ್ಯರು ಭಾಗವಹಿಸಿದ್ದರು. ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ, ಶ್ರೀ ನಾ. ದಿನೇಶ್ ಹೆಗ್ಡೆ ಮತ್ತು ಆಡಳಿತ ಮಂಡಳಿ ಸದಸ್ಯರಾದ ಶ್ರೀ ರವಿಕುಮಾರ್ ಉಪಸ್ಥಿತರಿದ್ದರು.
ಶ್ರೀ ನಾ. ದಿನೇಶ್ ಹೆಗ್ಡೆಯವರು ಮಹಿಳೆಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಶಕ್ತರಾಗುವ ಅಗತ್ಯತೆಯ ಬಗ್ಗೆ ಮಾರ್ಗದರ್ಶನ ಮಾಡಿದರು. ಸಮಾವೇಶಕ್ಕೆ ಆಗಮಿಸಿದ್ದ ಬಿ.ಬಿ.ಎಂ.ಪಿ. ಕಲ್ಯಾಣ ವಿಭಾಗದ ದಕ್ಷಿಣ ವಲಯದ ಅಧಿಕಾರಿಗಳಾದ ಶ್ರೀ ಸೋಮಣ್ಣ ಮತ್ತು ಶ್ರೀಮತಿ ಲತಾ ಅವರನ್ನು ಗೌರವಿಸಲಾಯಿತು.
ನಂತರದ ಅವಧಿಯಲ್ಲಿ ಸ್ವಸಹಾಯ ಸಂಘಗಳ ಸದಸ್ಯರು ಸಂಘದ ಸಹಕಾರದಿಂದ ತಾವು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿದ ಅನುಭವಗಳನ್ನು ಹಂಚಿಕೊಂಡರು ಹಾಗೂ ಸಂಘದ ಸದಸ್ಯರುಗಳಿಂದ ಜಾನಪದ ನೃತ್ಯ ಪ್ರದರ್ಶನ ನಡೆಯಿತು.
ಸಮಾರೋಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್ಯವಾಹರಾದ ಡಾ|| ಜಯಪ್ರಕಾಶ್ ಅವರು ಮಾತೃಶಕ್ತಿಯ ಜಾಗೃತಿಯಿಂದ ಮಾತ್ರ ದೇಶ ಸಮರ್ಥವಾಗುತ್ತದೆ ಎಂದರು.
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaTrust #SevaVasathi #WomenSelfHelpGroup #WomenConvention









