Call Us Now
+91 94482 84602
Email Us
info@rashtrotthana.org

73rd Republic Day (Jan 26) 73ನೇ ಗಣರಾಜ್ಯೋತ್ಸವ ದಿನ (ಜನವರಿ 26)

India is the largest democracy in the world. It is one of the superlative republican systems of the globe. The unique administrative reforms of India were the hallmark, which made Bharat to triumph as a progressive developing country in the international arena.
India, after being freed from the cage of British imperialism, achieved huge momentum and reached its highest potential in social, economic and geo-political dimensions. The rationale behind these accomplishments are India’s firm constitutional provisions and privileges. Bharat’s constitution is one of the most successful and efficient constitutions of the world.
The day when the constitution was adopted as an integral part of India and Indians, the day when the constitution came into effect is observed as Republic Day. Today marks the glorious 73rd Republic day of Bharat. On 26th January, 1950 the constitution of India came into effect. But, the constitution was adopted on November 26th 1950 on the floor of Parliament on behalf of the millions of people of the nation.

The chronicle behind January 26:
A significant event which occurred in the pages of the Indian freedom struggle is a prominent reason to bring the constitution into effect on January 26.
On January 26, 1930 at the All India Congress (INC)’s Lahore conference in the undivided dominion of India (Akhand Bharat), Jawaharlal Nehru who presided over the Lahore session exclaimed about the concept of ‘Purna Swaraj’ (complete Independence) for the first time and awakened the nation to fight for complete freedom to escape from the web of British imperialism and pledged to gain complete freedom for the nation and its citizens. To commemorate the significance of the historic day of the Lahore session and Purna swaraj, the constitution was brought into effect on January 26, 1950.
The Indian constitution is a symbol of democracy and its institutions. It is the essence of republic and parliamentary system of governance. The nation owes to the architects of the constitution for giving a priceless and precious asset for the nation and its future generations. It is the duty of every citizen to uphold the dignity and nobility of the constitution. It is the utmost responsibility of every citizen of Bharat to respect the constitution, which is a magical lamp having the light and spirit of democracy.

https://rashtrotthana.org/
https://www.sahityabooks.com/

ಭಾರತ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ. ವಿಶ್ವದ ಶ್ರೇಷ್ಠ ಗಣತಂತ್ರ ವ್ಯವಸ್ಥೆಗಳಲ್ಲಿ ಒಂದು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ದೇಶವು ಅಭಿವೃದ್ಧಿದಾಯಕ ರಾಷ್ಟ್ರವಾಗಿ ಜಾಗತಿಕ ಮಟ್ಟದಲ್ಲಿ ಹೊರಹೊಮ್ಮಲು ಕಾರಣವಾದ ಪ್ರಮುಖ ಅಸ್ತ್ರ ಇಲ್ಲಿನ ವಿಶಿಷ್ಟ ಆಡಳಿತ ವೈಖರಿ.
ಬ್ರಿಟೀಷರ ವಸಾಹತುಶಾಹಿ ಆಡಳಿತದ ಸಂಕೋಲೆಯಿಂದ ಹೊರಬಂದ ಭಾರತ ವಿಶ್ವ ಭೂಪಟದಲ್ಲಿ ಮಿಂಚಲು ಮುಖ್ಯ ಕಾರಣ ಭಾರತದ ಸಂವಿಧಾನ. ದೇಶದ ಆಡಳಿತ, ಅಭಿವೃದ್ಧಿಯ ಬುನಾದಿ ಸಂವಿಧಾನ. ವಿಶ್ವದ ಅತ್ಯಂತ ಯಶಸ್ವಿ ಮತ್ತು ಸಮರ್ಪಕ ಸಂವಿಧಾನಗಳಲ್ಲಿ ಭಾರತದ ಸಂವಿಧಾನ ಅಗ್ರ ಸ್ಥಾನದಲ್ಲಿದೆ.
ಸಂವಿಧಾನವನ್ನು ಭಾರತದ ಹಾಗೂ ಭಾರತೀಯರ ಅವಿಭಾಜ್ಯ ಅಂಗವಾಗಿ ಸ್ವೀಕರಿಸಿದ ದಿನವೇ ಗಣರಾಜ್ಯೋತ್ಸವ. ಇಂದು ದೇಶವು 73ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದೆ. ಜನವರಿ 26, 1950ರಂದು ಸಂವಿಧಾನವನ್ನು ಕಾರ್ಯರೂಪಕ್ಕೆ ತರಲಾಯಿತು. ಆದರೆ, ಇದಕ್ಕೂ ಮೊದಲೇ ಅಂದರೆ, 1949ರ ನವೆಂಬರ್ 26ರಂದು ಸಂವಿಧಾನವನ್ನು ಸಂಸತ್ತಿನಲ್ಲಿ ರಾಷ್ಟ್ರದ ನಾಗರಿಕರ ಪರವಾಗಿ ಸ್ವೀಕರಿಸಲಾಯಿತು.

ಜನವರಿ 26ರ ಹಿಂದಿನ ಕುತೂಹಲಕಾರಿ ಕಥೆ:
ಜನವರಿ 26ರಂದೇ ಸಂವಿಧಾನವನ್ನು ಕಾರ್ಯರೂಪಕ್ಕೆ ತರಲು ಇತಿಹಾಸದಲ್ಲೊಂದು ಪ್ರಮುಖ ಕಾರಣವಿದೆ. 1930 ರಲ್ಲಿ ಜನವರಿ 26ರಂದು ಅಂದಿನ ಅಖಂಡ (ಅವಿಭಜಿತ) ಭಾರತದ ಲಾಹೋರ್ ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಭಾರತದ ಮೊದಲ ಪ್ರಧಾನಮಂತ್ರಿ ಜವಹರ್ ಲಾಲ್ ನೆಹರು ವಹಿಸಿದ್ದರು. ಲಾಹೋರ್ ಅಧಿವೇಶನದ ಭಾಷಣದಲ್ಲಿ ನೆಹರು ‘ಪೂರ್ಣ ಸ್ವರಾಜ್’ (ಸಂಪೂರ್ಣ ಸ್ಸ್ವಾತಂತ್ರ್ಯ) ಪರಿಕಲ್ಪನೆಯನ್ನು ಪ್ರಥಮ ಬಾರಿಗೆ ಸಾರ್ವಜನಿಕರಿಗೆ ತಿಳಿಸಿದರು ಹಾಗೂ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಭಾರತವನ್ನು ಆಂಗ್ಲರ ಕಪಿಮುಷ್ಠಿಯಿಂದ ಕಳಚುವಂತೆ ಮತ್ತು ಪರಿಪೂರ್ಣ ಸ್ವಾತಂತ್ರ್ಯವನ್ನು ಭಾರತಕ್ಕೆ ತಂದುಕೊಡುವಂತೆ ಪಣತೊಟ್ಟರು. ಲಾಹೋರ್ ಸಭೆಯ ಈ ಮಹತ್ತ್ವದ ದಿನದ ನೆನಪಿಗಾಗಿ ಜನವರಿ 26ರಂದೇ ಸಂವಿಧಾನವನ್ನು ಜಾರಿಗೊಳಿಸಲಾಯಿತು.
ಭಾರತದ ಸಂವಿಧಾನ ಈ ನೆಲದ ಪ್ರಜಾಸತ್ತೆಯ ಸಂಕೇತ. ಇಂತಹ ಶ್ರೇಷ್ಠ ಸಂಹಿತೆಯನ್ನು ನೀಡಿದ ಸಂವಿಧಾನ ಶಿಲ್ಪಿಗಳಿಗೆ ಸಮಸ್ತ ದೇಶ ಸದಾ ಆಭಾರಿ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ದೇಶವನ್ನು ಕೊಂಡೊಯ್ಯುವುದು ಪ್ರತಿ ಭಾರತೀಯನ ಜವಾಬ್ದಾರಿ. ಪ್ರಜಾಪ್ರಭುತ್ವದ ಕೈಗನ್ನಡಿಯಾದ ಸಂವಿಧಾನದ ಗೌರವವನ್ನು ಬಾನೆತ್ತರಕ್ಕೆ ಹಾರಿಸುವುದು ಪ್ರಬುದ್ಧ ನಾಗರಿಕರ ಜವಾಬ್ದಾರಿ.