
The world admires the knowledge and intellect of the Indian youth. But, numerous youths of the country are unable to utilise the skills and knowledge to their fullest potential due to social and economic barriers. In this pretext, Rashtrotthana Parishat has started ‘Tapas’ (for boys) and ‘Saadhana’ (for girls). Students who hail from underprivileged and marginalised sections of society are provided free education and coaching to successfully crack various competitive exams, thereby giving wings for students’ dream of accomplishing higher education goals.
Exceptional performance of ‘Saadhana’ students in PUC exams
The students of Rashtrotthana Pre-University College, Thanisandra have performed exceptionally well in the second PUC exams and have come out in flying colours. The second PUC result for the academic year 2021-22 has been declared and the 70 girl students who were trained under ‘Saadhana’ initiative of Rashtrotthana Parishat have cracked the exam successfully. Kum. Madhuri H.R. has gained the position of college topper by scoring 591 out of 600. 63 students have scored distinction marks and 7 students have passed in first class. The college administration, teachers and the parents have expressed their appreciation for the students’ achievement and have wished them the best for all their future endeavours.
JEE Main 2022 – Remarkable Achievement by Tapas Students
In the JEE Main 2022, Tapas Students – 9th Batch, made a remarkable achievement. Out of 39 Students 37 are Qualified for JEE-Advanced Exam. Hearty Congratulations to all the achievers from Rashtrotthana family.
Final Selection Camp for Tapas and Saadhana
The final selection camp for Tapas was held from March 24 to 27 at Rashtrotthana PU College, Thanisandra in order to select the meritorious students for the initiative.
The final selection camp for Saadhana was held from April 17 to 22 at Rashtrotthana PU College, Thanisandra in order to select students for the ‘Saadhana’ medical and Saadhana teaching. In the camp, 102 girls participated for Saadhana medical and 107 girls participated for Saadhana teaching.
In both the camps faculties of BASE institution conducted classes and an exam was given to the students on the last day of the camp, based on which final selection was done.
40 students were ultimately selected to Saadhana and Tapas respectively. The criteria for selection was students’ academic progress, behaviour, interest, economic status etc. The results were declared on 10th May. Selected students will gain 2 years PUC education and coaching for other competitive exams at free of cost.
‘Vidyarambha’ Programme for Tapas Students
The ‘Vidyarambha’ programme was conducted for the 11th batch of Tapas students at ‘Tapas Parisara’ in Banashankari. Sri Vasanth Kumar, Pradhanacharya of Rashtrotthana Vidya Kendra, Banashankari explained about the CBSE system of education and the importance of Panchamukhi Shikshana. Sri Sonar Maruthi, Chief of BASE Institutions spoke about the various levels of selection process for Tapas. Sri Ravikumar, Member of Governing Council in Rashtrotthana Parishat, described the importance of Bramhacharya, strong resolve in one’s life and the importance of studies. Smt. Rukminiji explained the norms and rules of Tapas. Newly arrived students of Tapas performed Saraswathi Pooja.
Matru Sangama in Tapas Prakalpa
Matru Sangama, a uniquely themed event was organised on April 14 and 15 for the mothers of Tapas students. Sri N Dinesh Hegde, General Secretary of Rashtrotthana Parishat inaugurated the programme and introduced the activities of the Parishat to the gathering. In the event, Sri Ravikumar spoke about Samskara and Culture, Sri Satish of Kutumba Prabodhana Parivara spoke about ‘Hindu Family’, Smt. Sharadakka spoke about Health and Yoga and Dr. Suvarnini Konale spoke about, how our lifestyle should be!
Smt. Chaya Prabhu gave information about, through the aid of Laghu Udyoga Bharati, how women can earn a living by being at home by indulging in activities such as embroidery work, cooking, pickles and papad manufacturing etc. Smt. Yashodha Mataji and a team from the Art of Living conducted a Satsanga session on 14th April for the parents.
Saraswathi Pooja
Saraswathi Puja was celebrated for the success of 2nd PUC students who were studying under Tapas and were preparing to write exams in the current academic year. Saraswathi Puja was celebrated on 3rd May, on the auspicious occasion of Akshaya Tritiya to wish them the best for one of the milestones of their life.
A Seminar on Healthy Lifestyle for ‘Tapas’ Students
Tapas, recently conducted a seminar for the pre-university students on healthy lifestyle, good food habits and vitality of moral conduct among students. Dr. Suvarnini Konale, Head of the Lifestyle Department of Rashtrotthana Parishat addressed the students and enlightened them about the importance of healthy food habits, sound health, sound sleep etc. She also explained about the importance of practising Yoga and prayers for the students in reaching their goal. Students interacted with the resource person and resolved their queries regarding practising a healthy lifestyle.
—
ಕನಸಿನ ಶಿಕ್ಷಣಕ್ಕೆ ಭರವಸೆಯ ಮೆಟ್ಟಿಲು: ತಪಸ್ ಮತ್ತು ಸಾಧನಾ
ಪಿಯುಸಿಯಲ್ಲಿ ‘ಸಾಧನಾ’ ವಿದ್ಯಾರ್ಥಿನಿಯರ ಸಾಧನೆ
ಥಣಿಸಂದ್ರದ ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ರಾಷ್ಟ್ರೋತ್ಥಾನ ಪರಿಷತ್ತಿನ ‘ಸಾಧನಾ’ ಉಪಕ್ರಮದಡಿ ತರಬೇತಿ ಪಡೆದ 70 ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ. ಕುಮಾರಿ ಮಾಧುರಿ ಎಚ್. ಆರ್. 600ಕ್ಕೆ 591 ಅಂಕ ಗಳಿಸುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. 63 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು 7 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಪಸ್ ಮತ್ತು ಸಾಧನಾ ಅಂತಿಮ ಆಯ್ಕೆ ಶಿಬಿರ
ತಪಸ್ ಯೋಜನೆಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ಅಂತಿಮ ಆಯ್ಕೆ ಶಿಬಿರವು ಮಾರ್ಚ್ 24 ರಿಂದ 27ರ ವರೆಗೆ ಹಾಗೂ ಸಾಧನಾ ಯೋಜನೆಯ ಅಂತಿಮ ಆಯ್ಕೆ ಶಿಬಿರವು ಏಪ್ರಿಲ್ 17 ರಿಂದ 22ರ ವರೆಗೆ ಥಣಿಸಂದ್ರದ ರಾಷ್ಟ್ರೋತ್ಥಾನ ಪಿಯು ಕಾಲೇಜಿನಲ್ಲಿ ನಡೆಯಿತು.
ಎರಡೂ ಶಿಬಿರಗಳಲ್ಲಿ ಬೇಸ್ ಸಂಸ್ಥೆಯ ಅಧ್ಯಾಪಕರು ತರಗತಿಗಳನ್ನು ನಡೆಸಿದರು. ಶಿಬಿರದ ಕೊನೆಯ ದಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ, 40 ವಿದ್ಯಾರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಯಿತು. ಆಯ್ಕೆಯ ಮಾನದಂಡವೆಂದರೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ನಡವಳಿಕೆ, ಆಸಕ್ತಿ, ಆರ್ಥಿಕ ಸ್ಥಿತಿ ಇತ್ಯಾದಿ.
ಫಲಿತಾಂಶಗಳನ್ನು ಮೇ 10ರಂದು ಪ್ರಕಟಿಸಲಾಯಿತು. ಆಯ್ಕೆಯಾದ ವಿದ್ಯಾರ್ಥಿಗಳು 2 ವರ್ಷಗಳ ಪಿಯುಸಿ ಶಿಕ್ಷಣ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ಉಚಿತವಾಗಿ ಪಡೆಯುತ್ತಾರೆ.
ತಪಸ್ ವಿದ್ಯಾರ್ಥಿಗಳಿಗಾಗಿ ‘ವಿದ್ಯಾರಂಭ’ ಕಾರ್ಯಕ್ರಮ
ಬನಶಂಕರಿಯ ‘ತಪಸ್ ಪರಿಸರ’ದಲ್ಲಿ 11ನೇ ಬ್ಯಾಚ್ ನ ತಪಸ್ ವಿದ್ಯಾರ್ಥಿಗಳಿಗೆ ‘ವಿದ್ಯಾರಂಭ’ ಕಾರ್ಯಕ್ರಮವನ್ನು ನಡೆಸಲಾಯಿತು. ಬನಶಂಕರಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಪ್ರಧಾನಾಚಾರ್ಯ ಶ್ರೀ ವಸಂತಕುಮಾರ್, CBSE ಶಿಕ್ಷಣ ಪದ್ಧತಿ ಮತ್ತು ಪಂಚಮುಖಿ ಶಿಕ್ಷಣದ ಮಹತ್ತ್ವದ ಬಗ್ಗೆ ವಿವರಿಸಿದರು. ಬೇಸ್ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀ ಸೋನಾರ್ ಮಾರುತಿ ತಪಸ್‌ನ ವಿವಿಧ ಹಂತದ ಆಯ್ಕೆ ಪ್ರಕ್ರಿಯೆಯ ಕುರಿತು ಮಾತನಾಡಿದರು. ರಾಷ್ಟ್ರೋತ್ಥಾನ ಪರಿಷತ್ತಿನ ಆಡಳಿತ ಮಂಡಳಿ ಸದಸ್ಯರಾದ ಶ್ರೀ ರವಿಕುಮಾರ್ ಬ್ರಹ್ಮಚರ್ಯದ ಮಹತ್ತ್ವ, ಜೀವನದಲ್ಲಿ ದೃಢ ಸಂಕಲ್ಪ ಮತ್ತು ಅಧ್ಯಯನದ ಮಹತ್ತ್ವವನ್ನು ತಿಳಿಸಿದರು. ಶ್ರೀಮತಿ ರುಕ್ಮಿಣಿ ತಪಸ್ ನ ನಿಯಮಗಳನ್ನು ವಿವರಿಸಿದರು. ನೂತನವಾಗಿ ಆಗಮಿಸಿದ ತಪಸ್ ವಿದ್ಯಾರ್ಥಿಗಳು ಸರಸ್ವತಿ ಪೂಜೆ ನೆರವೇರಿಸಿದರು.
ತಪಸ್ ಪ್ರಕಲ್ಪದಲ್ಲಿ ಮಾತೃಸಂಗಮ ಕಾರ್ಯಕ್ರಮ
ಮಾತೃಸಂಗಮ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಏಪ್ರಿಲ್ 14 ಮತ್ತು 15ರಂದು ತಪಸ್ ವಿದ್ಯಾರ್ಥಿಗಳ ತಾಯಂದಿರಿಗಾಗಿ ಆಯೋಜಿಸಲಾಯಿತು. ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶ್ರೀ ಎನ್. ದಿನೇಶ್ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ರಾಷ್ಟ್ರೋತ್ಥಾನದ ಚಟುವಟಿಕೆಗಳನ್ನು ಪರಿಚಯಿಸಿದರು. ಕಾರ್ಯಕ್ರಮದಲ್ಲಿ ‘ಸಂಸ್ಕಾರ ಮತ್ತು ಸಂಸ್ಕೃತಿ’ಯ ಕುರಿತು ಶ್ರೀ ರವಿಕುಮಾರ್, ‘ಹಿಂದೂ ಕುಟುಂಬ’ದ ಕುರಿತು ಕುಟುಂಬ ಪ್ರಬೋಧನ ಪರಿವಾರದ ಶ್ರೀ ಸತೀಶ್, ‘ಆರೋಗ್ಯ ಮತ್ತು ಯೋಗ’ದ ಕುರಿತು ಶ್ರೀಮತಿ ಶಾರದಾ ಹಾಗೂ ‘ನಮ್ಮ ಜೀವನಶೈಲಿ ಹೇಗಿರಬೇಕು?’ ಎಂಬುದರ ಕುರಿತು ಡಾ. ಸುವರ್ಣಿನೀ ಕೊಣಲೆ ಮಾತನಾಡಿದರು.
ಶ್ರೀಮತಿ ಛಾಯಾ ಪ್ರಭು ಲಘು ಉದ್ಯೋಗ ಭಾರತಿಯ ಕುರಿತು ಮಾಹಿತಿ ನೀಡಿ, ಮಹಿಳೆಯರು ಮನೆಯಲ್ಲಿಯೇ ಕಸೂತಿ ಕೆಲಸ, ಉಪ್ಪಿನಕಾಯಿ ಮತ್ತು ಹಪ್ಪಳ ತಯಾರಿಕೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿ ಸ್ವಾವಲಂಬಿಗಳಾಗಬೇಕೆಂದು ತಿಳಿಸಿದರು. ಆರ್ಟ್ ಆಫ್ ಲಿವಿಂಗ್‍ನ ಯಶೋಧಾ ಮಾತಾಜಿ ಮತ್ತು ತಂಡವು ಏಪ್ರಿಲ್ 14ರಂದು ಪೋಷಕರಿಗಾಗಿ ಸತ್ಸಂಗವನ್ನು ನಡೆಸಿತು.
ಸರಸ್ವತಿ ಪೂಜೆ
ತಪಸ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಯಶಸ್ಸಿಗಾಗಿ, ಮೇ 3ರಂದು ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಸರಸ್ವತಿ ಪೂಜೆಯನ್ನು ಆಚರಿಸಲಾಯಿತು.
‘ತಪಸ್’ ವಿದ್ಯಾರ್ಥಿಗಳಿಗೆ ಆರೋಗ್ಯಕರ ಜೀವನಶೈಲಿ ಕುರಿತು ವಿಚಾರ ಗೋಷ್ಠಿ ಇತ್ತೀಚೆಗೆ ಪಿಯುಸಿ ವಿದ್ಯಾರ್ಥಿಗಳಿಗೆ ಆರೋಗ್ಯಕರ ಜೀವನಶೈಲಿ, ಉತ್ತಮ ಆಹಾರ ಪದ್ಧತಿ ಮತ್ತು ನೈತಿಕ ಮೌಲ್ಯಗಳ ಕುರಿತು ವಿಚಾರ ಸಂಕಿರಣವನ್ನು ನಡೆಸಲಾಯಿತು. ರಾಷ್ಟ್ರೋತ್ಥಾನ ಪರಿಷತ್ತಿನ ಜೀವನಶೈಲಿ ವಿಭಾಗದ ಮುಖ್ಯಸ್ಥೆ ಡಾ. ಸುವರ್ಣಿನಿ ಕೊಣಲೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಆರೋಗ್ಯಕರ ಆಹಾರ ಪದ್ಧತಿ, ಉತ್ತಮ ಆರೋಗ್ಯ, ಉತ್ತಮ ನಿದ್ದೆ ಮುಂತಾದವುಗಳ ಮಹತ್ತ್ವವನ್ನು ತಿಳಿಸಿಕೊಟ್ಟರು.