Call Us Now
+91 94482 84602
Email Us
info@rashtrotthana.org

A hope for underprivileged community: Seva Vasati

The Seva Vasati initiative of Rashtrotthana parishat was initialised in the year 1989 to raise the standard of living of the marginalised and underprivileged community. The aim of the Seva Vasati initiative is to bring societal transformation through individual transformation by imparting quality education, health amenities, vocational training, women empowerment etc.

The Students of ‘10th Sure Pass’ Programme succeeded with flying colours

The students of class 10 who were trained under ‘10th Sure Pass’ Programme of Rashtrotthana trust have cleared the examination with the pass percentage of 73.

341 students of ‘10th Sure Pass’ programme appeared for the examination and 249 of them have successfully cracked the exam. Narasimha of KuntiGrama Seva Vasati has scored 619 out of 625, thus has set a testimony for the students of underprivileged section. More than 5 students from various Seva Vasati of Bengaluru have scored above 600. 32 students have gained distinction marks and 155 students have cleared the exam with first class marks.

During the Covid-19 pandemic and intense lockdown, students of the government, government aided and BBMP schools were deprived of education and were even unable to access the online classes. Considering this drawback of the students of Seva Vasati, Rashtrotthana Trust initiated ‘10th Sure Pass’ programme to provide training to the children of Seva Vasatis.

The ‘10th Sure Pass’ programme for the current academic year, went on from January to March 2022. The classes were conducted for a total of 168 hours and 342 students who are appearing for the SSLC examination in the current academic year were beneficiaries (150 boys and 192 girls). The training sessions were held in 12 Seva Vasati of Bengaluru including Netaji Nagar, V.V. Giri Colony, Janata Colony. 42 teachers and 12 coordinators were involved in the noble cause of imparting knowledge to children, thereby building a robust foundation for their future.

The ‘10th Sure Pass’ Programme is operating as a guiding light among the students of marginalised communities, leading them towards a bright future. The target of the programme for the upcoming academic year (2022-23) is to reach 500 students in more than 20 Seva Vasati.

Rashtrotthana Trust was started in the year 2003 and has championed the most impactful and ambitious activities in the educational sector such as Tapas, Saadhana, holistic development of Seva Vasti, shelter to children who lack parental care, Javadev Memorial Rashtrotthana Hospital that aims to provide free or minimum cost treatment for poor people and numerous other pro-societal activities.

New Tailoring Centres inaugurated at Seva Dhama

New tailoring centres were inaugurated under the Seva Vasati initiative of Rashtrotthana Parishat at Doddanna Nagar E Block, Kavalebyrasandra, V. V. Giri Colony and Janatha Colony Seva Dhama of Bengaluru. Mr. Sanmay Dasgupta, General Manager & Director, Global Commercial Channels, Mr. Chetan Rajdev, General Manager & Director, Mr. S Nagarajan, Financial Controller, Ms. Geetha Nataraj, Deputy Manager, HR & EHS and Mr. Moh’d Shabeer Rehman, Operations Manager was present in the inaugural ceremony.

Motion Controls Private Limited supported the establishment of these tailoring centres that benefits many women and girls of Seva Vasati to become self-reliant.

ಹಿಂದುಳಿದ ಸಮುದಾಯಗಳ ಆಶಾಕಿರಣ: ಸೇವಾವಸತಿ

‘10th ಶ್ಯೂರ್ ಪಾಸ್’ ವಿದ್ಯಾರ್ಥಿಗಳ ಅಪೂರ್ವ ಸಾಧನೆ

ಕೋವಿಡ್-19 ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ಸಮಯದಲ್ಲಿ, ಸರ್ಕಾರ, ಸರ್ಕಾರಿ ಅನುದಾನಿತ ಮತ್ತು ಬಿಬಿಎಂಪಿ ಶಾಲೆಗಳ ಅನೇಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದರು. ಅವರಿಗೆ ಆನ್‌ಲೈನ್ ತರಗತಿಗಳಿಗೆ ಹಾಜರಾಗಲೂ ಸಹ ಸಾಧ್ಯವಾಗಿರಲಿಲ್ಲ. ಸೇವಾವಸತಿಯ ವಿದ್ಯಾರ್ಥಿಗಳ ಈ ಸಮಸ್ಯೆಯನ್ನು ಗಮನಿಸಿ, ರಾಷ್ಟ್ರೋತ್ಥಾನ ಟ್ರಸ್ಟ್ ಸೇವಾವಸತಿ ಮಕ್ಕಳಿಗೆ ತರಬೇತಿ ನೀಡಲು ‘10th ಶ್ಯೂರ್ ಪಾಸ್’ ಕಾರ್ಯಕ್ರಮವನ್ನು ಪ್ರಾರಂಭಿಸಿತು.

ಪ್ರಸಕ್ತ ಶೈಕ್ಷಣಿಕ ವರ್ಷದ ‘10th ಶ್ಯೂರ್ ಪಾಸ್’ ಕಾರ್ಯಕ್ರಮವು ಜನವರಿ 2022ರಿಂದ ಮಾರ್ಚ್ 2022ರ ವರೆಗೆ ನಡೆಯಿತು. ಒಟ್ಟು 168 ಗಂಟೆಗಳ ಕಾಲ ತರಗತಿಗಳನ್ನು ನಡೆಸಲಾಯಿತು. ಇಲ್ಲಿ ತರಬೇತಿ ಪಡೆದ 342 (150 ಹುಡುಗರು ಮತ್ತು 192 ಹುಡುಗಿಯರು) ವಿದ್ಯಾರ್ಥಿಗಳು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆ ಬರೆದಿದ್ದರು. ನೇತಾಜಿ ನಗರ, ವಿ. ವಿ. ಗಿರಿ ಕಾಲೋನಿ, ಜನತಾ ಕಾಲೋನಿ ಸೇರಿದಂತೆ ಬೆಂಗಳೂರಿನ 12 ಸೇವಾವಸತಿಗಳಲ್ಲಿ ತರಬೇತಿ ಕಾರ್ಯಕ್ರಮಗಳು ನಡೆದವು. 42 ಶಿಕ್ಷಕರು ಮತ್ತು 12 ಸಂಯೋಜಕರು ಮಕ್ಕಳಿಗೆ ಜ್ಞಾನವನ್ನು ನೀಡುವ ಈ ಮಹತ್ತರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಷ್ಟ್ರೋತ್ಥಾನ ಟ್ರಸ್ಟ್‌ನ ‘10th ಶ್ಯೂರ್ ಪಾಸ್’ ಕಾರ್ಯಕ್ರಮದಡಿ ತರಬೇತಿ ಪಡೆದ 10ನೆಯ ತರಗತಿಯ 341 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 249 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಕುಂತಿಗ್ರಾಮ ಸೇವಾವಸತಿಯ ಕು. ನರಸಿಂಹ 625ಕ್ಕೆ 619 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಬೆಂಗಳೂರಿನ ವಿವಿಧ ಸೇವಾವಸತಿಗಳ 5ಕ್ಕೂ ಹೆಚ್ಚು ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ. 32 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು 155 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

‘10th ಶ್ಯೂರ್ ಪಾಸ್’ ಕಾರ್ಯಕ್ರಮವು ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವನ್ನು ಕಲ್ಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ಮುಂಬರುವ ಶೈಕ್ಷಣಿಕ ವರ್ಷದಲ್ಲಿ 20ಕ್ಕೂ ಹೆಚ್ಚು ಸೇವಾವಸತಿಗಳಲ್ಲಿ 500 ವಿದ್ಯಾರ್ಥಿಗಳನ್ನು ತಲುಪುವ ಗುರಿ ಹೊಂದಲಾಗಿದೆ.

ಸೇವಾಧಾಮದಲ್ಲಿ ನೂತನ ಹೊಲಿಗೆ ಕೇಂದ್ರಗಳ ಉದ್ಘಾಟನೆ

ಬೆಂಗಳೂರಿನ ದೊಡ್ಡಣ್ಣನಗರ, ಕವಲೆಭೈರಸಂದ್ರ, ವಿ. ವಿ. ಗಿರಿ ಕಾಲೋನಿ ಮತ್ತು ಜನತಾ ಕಾಲೋನಿ ಸೇವಾಧಾಮಗಳಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಸೇವಾವಸತಿ ಉಪಕ್ರಮದಡಿ ನೂತನ ಹೊಲಿಗೆ ಕೇಂದ್ರಗಳನ್ನು ಉದ್ಘಾಟಿಸಲಾಯಿತು. ಶ್ರೀ ಸನ್ಮಯ್ ದಾಸ್‌ಗುಪ್ತ, ಶ್ರೀ ಚೇತನ್ ರಾಜ್‌ದೇವ್, ಶ್ರೀ ಎಸ್. ನಾಗರಾಜನ್, ಶ್ರೀಮತಿ ಗೀತಾ ನಟರಾಜ್, ಶ್ರೀ ರೆಹಮಾನ್ ಮತ್ತು ಶ್ರೀ ಮೊಹಮ್ಮದ್ ಶಬೀರ್ ಮುಂತಾದವರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಮೋಷನ್ ಕಂಟ್ರೋಲ್ಸ್ ಪ್ರೈವೇಟ್ ಲಿಮಿಟೆಡ್, ಸೇವಾವಸತಿಯ ಮಹಿಳೆಯರಿಗೆ ಸ್ವಾವಲಂಬಿ ಜೀವನ ಕಲ್ಪಿಸುವ ಈ ಯೋಜನೆಯನ್ನು ಬೆಂಬಲಿಸಿದೆ.