Call Us Now
+91 94482 84602
Email Us
info@rashtrotthana.org

A reflection of Nationalism: Utthana

Utthana monthly magazine is a pride in the crown of Rashtrotthana Parishat. It is an encyclopedia for nationalism, and a knowledge hub for Bharatiya philosophy and principles. Utthana is the brand ambassador for Bharatiya culture and tradition in Kannada journalism for decades. Every month Utthana offers its readers a wide variety of articles and awakens the masses of Karnataka towards nationalistic views.

In the April edition of the Utthana monthly magazine, the cover story encompasses the spellbound crimes committed by the wave of Christianity in India and other religions towards converting lakhs of people for an alien religion. The article puts forth a wide perspective about the actual duties of a religious leader in nurturing the society which doesn’t have any hidden selfish motives. The article also asks a question: why can’t knowledge and morals be taught without religious interference and why have people who have rendered service on such mere humanitarian ground not been recognised well in the society? The article opens up the horrors of religious conversion! The magazine also provides an in-depth analysis about the Ukraine War. It also has articles of tribute to Kannada poet Channaveera Kanavi and Nightingale of India, Latha Mangeshkar whose demise has left a void in the Kannada literature and Indian music world. It also has heart-warming stories, essays and episodes.

In the May edition of the Utthana monthly magazine, the cover story narrates the exceptionally well-designed foreign policies of the Government of India under the leadership of Honourable Prime Minister Sri Narendra Modi from the past 8 years during the moments of geopolitical catastrophes that has raised the pride and dignity of the nation in the global platform. An article written by Sri Satyanarayana Shanbagh about the genocide of Kashmiri Pandits is an eye-opener. It also has an article about the merits and demerits of the OTT platforms which is the need of the hour.

In the June edition of the Utthana monthly magazine, the cover story and various other articles are penned down on account of world environment day. It presents the hazardous impact of the exhaustive use of nature. It also narrates the environmental system management of Karnataka and measures towards sustainable development. It also gives measures to check pollution, rising temperature of the earth’s surface and global warming, melting of Himalayan glaciers, depleting groundwater table, steps to boost agriculture, articulating a wise waste management system, rainwater harvesting, shift to renewable sources of energy and a mindful shift in our food habits to adapt ourselves to the changing atmosphere etc. An article about the unplanned city of Bengaluru and is it fit to live exposes us to the harsh realities of the unplanned city development project and the challenges, problems posed by it.

Utthana is a perfect blend with unique flavours of articles which is appealing to all age groups and all sections of society, pouring an ocean of knowledge to the society every month.

ಭಾರತೀಯತೆಯ ಪ್ರತಿಫಲನ: ಉತ್ಥಾನ

ಉತ್ಥಾನ ಮಾಸಪತ್ರಿಕೆಯ ಏಪ್ರಿಲ್ ಸಂಚಿಕೆಯ ಮುಖಪುಟ ಲೇಖನ ಮತಾಂತರದ ಭೀಕರತೆಯ ಕುರಿತು ಬೆಳಕು ಚೆಲ್ಲಿದೆ. ಪೋಪರಿಂದ ಹಿಡಿದು ಇಂದಿನ ಪಾದ್ರಿಗಳ ವರೆಗೆ, ಪ್ರಾಚೀನ ಗ್ರೀಸ್‍ನಿಂದ ಆರಂಭಿಸಿ ಆಧುನಿಕ ಕೊರಿಯಾದ ವರೆಗೆ ಇತಿಹಾಸ ತಿಳಿಸುವುದು ಒಂದೇ. ಅದು ಕ್ರೈಸ್ತ ಮತಾಂತರದ ಗುರಿ ರಾಜ್ಯವಿಸ್ತಾರವಲ್ಲದೇ ಬೇರೇನೂ ಅಲ್ಲ ಎಂಬುದು. ಈಗ ಅದು ಭಾರತವನ್ನು ತನ್ನ ಸಮರಕ್ಷೇತ್ರವನ್ನಾಗಿ ನೋಡುತ್ತಿದೆ. ಇದನ್ನು ತಡೆಯದಿದ್ದಲ್ಲಿ ಭಾರತದ ಸ್ವಾತಂತ್ರ್ಯ ಮತ್ತು ಸಂಸ್ಕೃತಿ ಎರಡೂ ನಾಶವಾಗುವುದರಲ್ಲಿ ಸಂಶಯವಿಲ್ಲ ಎಂದು ಲೇಖಕ ಶ್ರೀ ಎಚ್. ಮಂಜುನಾಥ ಭಟ್ ತಮ್ಮ ಲೇಖನದ ಮೂಲಕ ತಿಳಿಸಿದ್ದಾರೆ. ಈ ಸಂಚಿಕೆಯಲ್ಲಿ ನಾಡೋಜ ಶ್ರೀ ಎಸ್. ಆರ್. ರಾಮಸ್ವಾಮಿಯವರ ರಷ್ಯಾ-ಉಕ್ರೇನ್ ಯುದ್ಧದ ಕುರಿತ ಸಂಪೂರ್ಣ ಮಾಹಿತಿಯುಳ್ಳ ಲೇಖನ ಆಸಕ್ತಿ ಮೂಡಿಸುವಂತಿದೆ. ಕೆಲ ದಿನಗಳ ಹಿಂದೆ ನಡೆದ, ದೇಶದಲ್ಲಿ ಬಹಳ ಚರ್ಚೆಗೊಳಗಾದ ಹಿಜಾಬ್ ಪ್ರಕರಣದ ಹಿಂದಿರುವ ಪ್ರತ್ಯೇಕತೆಯ ಧೋರಣೆ, ಸ್ವಾತಂತ್ರ್ಯಸಮರಕ್ಕೆ ವ್ಯೂಹಾತ್ಮಕ ತಿರುವು ಕೊಟ್ಟ ವೀರ ಸಾವರ್ಕರ್, ಕವಿ ಚೆನ್ನವೀರ ಕಣವಿ ಹಾಗೂ ಲತಾ ಮಂಗೇಶ್ಕರ್ ರ ಕುರಿತು ವಿಶೇಷ ಲೇಖನಗಳನ್ನು ಪ್ರಕಟಿಸಲಾಗಿದೆ. 

ಮೇ ಸಂಚಿಕೆಯಲ್ಲಿ ಮೋದಿ ಸರ್ಕಾರದ ಪ್ರಬಲ ವಿದೇಶಾಂಗ ನೀತಿಯ ಕುರಿತು ಮುಖಪುಟ ಲೇಖನವನ್ನು ಪ್ರಕಟಿಸಲಾಗಿದೆ. ಪ್ರಧಾನಿ ಮೋದಿ ಮೊದಲ ಬಾರಿಗೆ ತಮ್ಮ ಎನ್ ಡಿಎ ಸರ್ಕಾರದ ಪ್ರಮಾಣವಚನಕ್ಕೆ ಸಾರ್ಕ್ ದೇಶಗಳ ನಾಯಕರನ್ನು ಆಮಂತ್ರಿಸುವ ಮೂಲಕ ನೆರೆರಾಷ್ಟ್ರಗಳ ಸಂಬಂಧಕ್ಕೆ ಮಹತ್ತ್ವ ನೀಡುತ್ತಾರೆನ್ನುವ ಸೂಚನೆಯನ್ನು ಜಗತ್ತಿಗೆ ನೀಡಿದರು. ಈ ಸಾಂಕೇತಿಕ ನಡೆಯನ್ನು ಪ್ರಾಯೋಗಿಕ ಹಂತಕ್ಕೆ ಏರಿಸಿ ಒಂದೊಂದು ದೇಶದ ಜೊತೆಗೂ ದ್ವಿಪಕ್ಷೀಯ ಸಂಬಂಧವನ್ನು ಬೆಳೆಸಿದರು. ಅದರಿಂದ ಭಾರತದ ಹಿತಾಸಕ್ತಿಗೆ ಪೂರಕವಾದ ಕ್ರಮವನ್ನು ಅನುಸರಿಸುತ್ತಾ ಹೋದರು ಎಂದು ಮೋದಿ ಸರ್ಕಾರದ ವಿದೇಶಾಂಗ ನೀತಿಯ ಕುರಿತು ವಿಶ್ಲೇಷಣೆ ನೀಡಲಾಗಿದೆ. ಇತ್ತೀಚೆಗೆ ವಿಶ್ವಾದ್ಯಂತ ಸುದ್ದಿಯಾದ ಸಂಗತಿಗಳಲ್ಲಿ ಪಾಕಿಸ್ತಾನದ ರಾಜಕೀಯ ವಿಪ್ಲವದ ಕುರಿತು ನಾಡೋಜ ಎಸ್. ಆರ್. ರಾಮಸ್ವಾಮಿವಯರ ಬರೆಹ ಪ್ರಕಟವಾಗಿದೆ. ಕಾಶ್ಮೀರದಲ್ಲಿ ನಡೆದ ಹಿಂದೂ ನರಮೇಧದ ಕಥೆ, ಸಾವರ್ಕರ್ ರ ವ್ಯಕ್ತಿತ್ವದ ಒಳನೋಟ, ಶ್ರೀ ಮನ್ನಾರ್ ಕೃಷ್ಣರಾವ್ ಬರೆದ ರಾಜಾಜಿಯವರ ಜೀವನಚರಿತ್ರೆಗಳ ಕುರಿತು ವಿಶೇಷ ಲೇಖನಗಳನ್ನು ಪ್ರಕಟಿಸಲಾಗಿದೆ. 

ಜೂನ್ 5 ವಿಶ್ವ ಪರಿಸರ ದಿನ. ಪರಿಸರದ ಬಗ್ಗೆ ಕಾಳಜಿ ತೋರಿ, ನಮ್ಮ ಉತ್ತಮ ನಾಳೆಗಳನ್ನು ರೂಪಿಸಿಕೊಳ್ಳುವ ಹೊಣೆ ನಮ್ಮದೇ. ಈ ನಿಟ್ಟಿನಲ್ಲಿ ಉತ್ಥಾನದ ಜೂನ್ ತಿಂಗಳ ಸಂಚಿಕೆಯಲ್ಲಿ ಪರಿಸರ ಸಂಬಂಧಿ ವಿಶೇಷ ಲೇಖನಗಳನ್ನು ಪ್ರಕಟಿಸಲಾಗಿದೆ. ಸ್ವದೇಶಿ ಸಂಹಿತೆ ಮತ್ತು ಪರಿಸರ ಸ್ವಾಸ್ಥ್ಯ ಎಂಬ ಲೇಖನದಲ್ಲಿ, ನಮ್ಮ ಸುತ್ತಲಿನ ಪರಿಸರವನ್ನು ನಮ್ಮ ಭೋಗದ ಸಾಧನವೆಂದು ಪರಿಗಣಿಸುತ್ತಿರುವುದೂ ನಮ್ಮ ಆಂತರಿಕ ಶಿಥಿಲತೆಯ ಸೂಚಕ. ಇದಕ್ಕೆ ಪರಿಹಾರವೆಂದರೆ – ನಷ್ಟವಾಗಿರುವ ಸಹಜ ದೃಷ್ಟಿಯನ್ನು ಮರಳಿ ಪಡೆಯುವುದು. ಪ್ರಕೃತಿಯನ್ನು ಗೌರವಿಸುವುದು ಎಂದರೆ ವಿಶ್ವಸೃಷ್ಟಿಯ ಶಾಶ್ವತ ನಿಯಮಗಳನ್ನು ಗೌರವಿಸುವುದು ಎಂದು ಶ್ರೀ ಎಸ್. ಆರ್. ರಾಮಸ್ವಾಮಿಯವರು ತಿಳಿಸಿದ್ದಾರೆ. ಕರ್ನಾಟಕದ ಪರಿಸರ ವ್ಯವಸ್ಥೆಯ ಸೇವೆಗಳು, ಪರಿಸರ ಸಂರಕ್ಷಣೆಯ ಜೊತೆಗೆ ತಳುಕು ಹಾಕಿಕೊಂಡ ಆಹಾರ ಕ್ಷೇತ್ರ, ತಾಪಮಾನ ಏರಿಕೆಗೆ ಪರಿಹಾರ, ಯೋಜನಾರಹಿತ ಬೆಂಗಳೂರಿನ ಭವಿಷ್ಯ ಮುಂತಾದ ವಿಷಯಗಳ ಕುರಿತು ಲೇಖನಗಳನ್ನು ಪ್ರಕಟಿಸಲಾಗಿದೆ.

ಇತ್ತೀಚೆಗೆ ಬಹಳಷ್ಟು ಚರ್ಚೆಗೆ ಒಳಗಾದ ಪಠ್ಯಪುಸ್ತಕ ಪರಿಷ್ಕರಣೆಯ ಕುರಿತು ವಿಶೇಷ ಲೇಖನವನ್ನು ಉತ್ಥಾನದ ಜುಲೈ ತಿಂಗಳ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಗೆ ಶ್ರೀ ರೋಹಿತ್ ಚಕ್ರತೀರ್ಥರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದಾಗಲೇ ಅನೇಕರು ವಿರೋಧಿಸಲಾರಂಭಿಸಿದರು. ಅದು ಪೂರ್ವಾಗ್ರಹಜನ್ಯ ವಿರೋಧವಾಗಿತ್ತು. ಪರಿಷ್ಕಾರದ ಕೆಲಸ ಪೂರ್ಣವಾಗಿ ಇನ್ನೇನು ಪಠ್ಯಪುಸ್ತಕಗಳು ಮುದ್ರಣಕ್ಕೆ ಹೋಗುತ್ತಿವೆ ಎಂದಾಗ ಹಲವರು ‘ಕೇಸರೀಕರಣ’ದ ಆರೋಪ ಮಾಡತೊಡಗಿದ್ದರು. ಈ ಆರೋಪಗಳ ಹಿಂದಿನ ಉದ್ದೇಶವೇನು? ಅವುಗಳ ಸತ್ಯಾಸತ್ಯತೆ ಏನು? ಎಂಬುದನ್ನು ಶ್ರೀ ರೋಹಿಣಾಕ್ಷ ಶಿರ್ಲಾಲು ವಿವರಿಸಿದ್ದಾರೆ.  ಆಗಸ್ಟ್ ತಿಂಗಳ ಸಂಚಿಕೆಯಲ್ಲಿ ಸ್ವಾತಂತ್ರ್ಯೋತ್ಸವದ ನಿಮಿತ್ತ ವಿಶೇಷ ಲೇಖನಗಳ ಗುಚ್ಛವನ್ನು ಓದುಗರ ಕೈಗಿಡಲಾಗಿದೆ. ಈ ವರ್ಷ ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ಸುಸಂದರ್ಭದಲ್ಲಿ ‘ಸ್ವಾತಂತ್ರ್ಯದ ಪರಿಕಲ್ಪನೆ’ಯ ಬಗ್ಗೆ ಹಿರಿಯರಾದ ಶ್ರೀ ನಾರಾಯಣ ಶೇವಿರೆಯವರು ಲೇಖನವನ್ನು ಬರೆದಿದ್ದಾರೆ. ಅಜ್ಞಾತರಾಗಿ ಉಳಿದುಹೋದ ಅಸಂಖ್ಯ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಶ್ರೀ ದು. ಗು. ಲಕ್ಷ್ಮಣ ವಿವರಿಸಿದ್ದಾರೆ. ಸಾವರ್ಕರರ ರಾಷ್ಟ್ರಭಕ್ತಿ, ಸ್ವಾತಂತ್ರ್ಯದ ಸ್ಪೂರ್ತಿ ತಂದ ಐಎನ್‍ಎ ವಿಚಾರಣೆ ಮೊದಲಾದ ವಿಷಯಗಳ ಕುರಿತು ವಿಶೇಷ ಲೇಖನಗಳನ್ನು ಪ್ರಕಟಿಸಲಾಗಿದೆ.