Call Us Now
+91 94482 84602

A Seminar on Healthy Lifestyle for ‘Tapas’ Students

Bengaluru, June 16: Tapas, one of the educational initiatives of Rashtrotthana Parishat that aims at providing quality education to the students of marginalized communities, recently conducted a seminar for the pre-university students on healthy lifestyle, good food habits and vitality of moral conduct among students. Dr. Suvarnini Konale, Head of the Lifestyle Department of Rashtrotthana Parishat addressed the students and enlightened them about the importance of healthy food habits, sound health, sound sleep etc. She also explained about the importance of practising Yoga and prayers for the students in reaching their goal. Students interacted with the resource person and resolved their queries about practising a healthy lifestyle.

‘ತಪಸ್’ ಪ್ರಕಲ್ಪದಲ್ಲಿ ಜೀವನಶೈಲಿ ಕುರಿತ ವಿಚಾರ ಸಂಕಿರಣ
16 ಜೂನ್, ಬೆಂಗಳೂರು: ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಮುಖ ಚಟುವಟಿಕೆಗಳಲ್ಲಿ ಒಂದಾದ ತಪಸ್ ಪ್ರಕಲ್ಪದಡಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಸ್ವಸ್ಥ ಜೀವನಶೈಲಿ ಹಾಗೂ ಉತ್ತಮ ಆಹಾರ ಪದ್ಧತಿ, ಆರೋಗ್ಯ ಮತ್ತು ಸಚ್ಚಾರಿತ್ರ್ಯದ ಕುರಿತು ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರೋತ್ಥಾನ ಪರಿಷತ್ ನ ಜೀವನಶೈಲಿ ವಿಭಾಗದ ಮುಖ್ಯಸ್ಥೆ, ಡಾ.ಸುವರ್ಣನಿ ಕೊಣಲೆ ವಿದ್ಯಾರ್ಥಿ ಜೀವನದಲ್ಲಿ ಆರೋಗ್ಯಕರ ಆಹಾರ, ವಿಶ್ರಾಂತಿ ಇತ್ಯಾದಿ ಚಟುವಟಿಕೆಗಳ ಪ್ರಾಮುಖ್ಯವನ್ನು ತಿಳಿಸಿಕೊಟ್ಟರು. ಸತತ ಯೋಗಾಭ್ಯಾಸ ಮತ್ತು ಪ್ರಾರ್ಥನೆ ನಮ್ಮ ಗುರಿ ಮುಟ್ಟಲು ಸಹಾಯಕ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಯೊಂದಿಗೆ ಸಂವಾದ ನಡೆಸಿ ಉತ್ತಮ ಜೀವನಶೈಲಿಯನ್ನು ಪಾಲಿಸುವ ಬಗ್ಗೆ ತಮಗಿದ್ದ ಗೊಂದಲಗಳನ್ನು ಬಗೆಹರಿಸಿಕೊಂಡರು.