Call Us Now
+91 94482 84602
Email Us
info@rashtrotthana.org

ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ತರಕಾರಿಗಳ ಪ್ರದರ್ಶನ

ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ತರಕಾರಿಗಳನ್ನು ಪರಿಚಯಿಸುವ ಸಲುವಾಗಿ ‘ತರಕಾರಿಗಳ ಪ್ರದರ್ಶನ’ವನ್ನು ಏರ್ಪಡಿಸಲಾಯಿತು. ಪೂರ್ವಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ವಿವಿಧ ತರಕಾರಿಗಳನ್ನು ತಂದು ಪ್ರದರ್ಶನದಲ್ಲಿ ಭಾಗವಹಿಸಿ ಅವುಗಳ ಉಪಯೋಗ, ಬೆಳೆಯುವ ವಿಧಾನಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಥಣಿಸಂದ್ರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಪ್ರಾಂಶುಪಾಲರಾದ ಮಂಜುಳಾ, ಕಾರ್ಯದರ್ಶಿಗಳಾದ ಜಯಣ್ಣ ಮುಂತಾದವರು ಪ್ರದರ್ಶನವನ್ನು ವೀಕ್ಷಿಸಿದರು.

Read More

Annual Report 2017-2018

Annual Report 2017-18

Read More

Rashtrotthana Varta August 2018

Download: Vaartha August 2018a    

Read More

ದೇವನೂರಿನ ಶ್ರೀ ಲಕ್ಷ್ಮೀಶ ವಿದ್ಯಾನಿಕೇತನದಲ್ಲಿ ಶಿಕ್ಷಕರ ದಿನಾಚರಣೆ

ಚಿಕ್ಕಮಗಳೂರು ಜಿಲ್ಲೆಯ ದೇವನೂರಿನ ಶ್ರೀ ಲಕ್ಷ್ಮೀಶ ವಿದ್ಯಾನಿಕೇತನದಲ್ಲಿ ಇಂದು (ಸೆಪ್ಟೆಂಬರ್ 5) ಶಿಕ್ಷಕರ ದಿನಾಚರಣೆ ನಡೆಯಿತು. ಪ್ರೌಢಶಾಲಾ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದರು. ಸ್ಥಳೀಯ ಕಾರೇಹಳ್ಳಿ ಸರ್ಕಾರೀ ಶಾಲೆಯ ನಿವೃತ್ತ ಶಿಕ್ಷಕರಾದ ಚನ್ನಬಸಪ್ಪ ಹಾಗೂ ದೇವನೂರು ಪಿಯು ಕಾಲೇಜಿನ ಪ್ರಾಂಶುಪಾಲರಾದ ಪರಮೇಶ್ವರಪ್ಪ ಅವರು ಅತಿಥಿಗಳಾಗಿ ಆಗಮಿಸಿ ಗುರುವಿನ ಮಹತ್ವವನ್ನು ತಿಳಿಸಿಕೊಟ್ಟರು.

Read More

ಥಣಿಸಂದ್ರದ ರಾಷ್ಟ್ರೋತ್ಥಾನ ವಿದ್ಯಾಕೇ‌ಂದ್ರದಲ್ಲಿ ಶಿಕ್ಷಕರ ದಿನ

ಥಣಿಸಂದ್ರದ ರಾಷ್ಟ್ರೋತ್ಥಾನ ವಿದ್ಯಾಕೇ‌ಂದ್ರದಲ್ಲಿ ಇಂದು ಶಿಕ್ಷಕರ ದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿನಿ ಅಮೃತ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ತಿಳಿಸಿದರು. 9ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರು ಮಹತ್ವವನ್ನು ಪ್ರತಿಬಿಂಬಿಸುವ ಕಿರುನಾಟಕವನ್ನು ಪ್ರದರ್ಶಿಸಿದರು. ಶಾಲೆಯ ಕರೆಸ್ಪಾಂಡೆಂಟ್ ಮಹೇಶ್ವರಯ್ಯ ಹಾಗೂ ಪ್ರಧಾನಾಚಾರ್ಯರಾದ ಮಂಜುಳಾ ಅವರು ಡಾ.ಎಸ್. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

Read More

ನಾಗರಬಾವಿಯಲ್ಲಿ ನೂತನ ಯೋಗಕೇಂದ್ರ

ನಾಗರಬಾವಿಯ ನೂತನ ಯೋಗಕೇಂದ್ರವನ್ನು ಇಂದು (ಸೆಪ್ಟೆಂಬರ್ 3) ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಅವರು ಉದ್ಘಾಟಿಸಿದರು. ಆಡಳಿತ ಮಂಡಳಿ ಸದಸ್ಯರಾದ ಕೆ.ಎಸ್. ನಾರಾಯಣ ಹಾಗೂ ಯೋಗ ವಿಭಾಗದ ನಿರ್ದೇಶಕರಾದ ನಾಗೇಂದ್ರ ಕಾಮತ್ ಅವರು ಉಪಸ್ಥಿತರಿದ್ದರು.

Read More