Call Us Now
+91 94482 84602
Email Us
info@rashtrotthana.org

Best Publisher Award in the crown of Rashtrothana Sahitya

Rashtrotthana Sahitya has been streaming an ocean of knowledge to the society for decades. It scripts books based on history, philosophy, Bharatiya culture, ideal lifestyle etc. and thereby rekindles the Bharatiya consciousness among the masses. Rashtrotthana sahitya has been honoured as the best publisher from Kannada Pustaka Pradhikara.

It has also added two new works to its infinite collection of knowledge recently and has championed the cause of enriching the roots of literature.

A recognition for the literary service of the Rashtrotthana Sahitya

Rashtrotthana Sahitya was honoured as the best publisher of the year 2021 by the Kannada Pustaka Pradhikara. The recognition has further strengthened our resolve to publish books that have the essence of nationality and nurtures the society with abundant knowledge.

New flowers bloomed in the bouquet of Rashtrotthana Sahitya
‘Rashtra Tapasvi Sri Guruji’ book released
Author: Sri Ranga Hari
Translated by: Sri Chandrashekar Bhandari
Publisher: Rashtrotthana Sahitya

The book ‘Rashtra Tapasvi Sri Guruji’ that encompasses the life and message of the second Sarsanghchalaka of Rashtriya SwayamSevak Sangh Sri Guruji was released on 11th June. The book is a guiding force and a motivational source for the youth of Bharat for the service of mankind, humanity and the motherland. Guruji, strengthened the roots of the Sangh and has rendered immeasurable contribution to the society in eradicating the various social evils.

H.H. Sri Sri Immadi Siddharameshwara Swamiji of Sri Siddharameshwara Bhovi Guru Peetha Mutt, Bagalkot, made his divine presence in the event. Sri Vishweshwara Bhat, Editor-in-chief of Vishwavani Kannada Daily was the chief guest of the event. Sri Su. Ramanna, Jyeshta Pracharak of RSS, Sri Chandrashekar Bhandari, Jyeshta Pracharak of RSS and author of the book in Kannada, Sri M P Kumar, President of Rashtrotthana Parishat and other dignitaries were present on the occasion.

Prakshubdha Kashmira’: A book to speak the saga of Kashmir and its politics
Source book: My frozen turbulence in Kashmir
Author: Sri Jagamohan
(A collective translation to Kannada)

Between the Pages:

  • Reasons for uncontrollable turbulence in Kashmir
  • What was the move of Farooq Abdulla and Rajiv Gandhi? Why did they have a soft attitude towards terrorists?
  • What is the mystery behind the release of the terrorists from the prison before Farooq Abdulla presenting his resignation?
  • The support of INC and NCP (National Conference) towards the terrorists was a manifestation of vote bank politics. Is it true?
  • Who posed an obstacle to the governor of Kashmir Sri Jagamohan, who was striving hard to maintain law and order stability in the valley?
  • Why did Farooq Abdhulla and Rajiv Gandhi defame the governor Jagamohan repeatedly?
  • Who was the mastermind behind the exodus of Kashmiri Pandits?

ಅತ್ಯುತ್ತಮ ಪ್ರಕಾಶನ ಪ್ರಶಸ್ತಿ: ರಾಷ್ಟ್ರೋತ್ಥಾನ ಸಾಹಿತ್ಯಕ್ಕೆ ಮತ್ತೊಂದು ಗರಿ

ರಾಷ್ಟ್ರೋತ್ಥಾನ ಸಾಹಿತ್ಯದ ಸಾಹಿತ್ಯಸೇವೆಗೆ ಸಂದ ಗೌರವ

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಕೊಡಲ್ಪಡುವ 2021ನೆಯ ಸಾಲಿನ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಗೆ ರಾಷ್ಟ್ರೋತ್ಥಾನ ಸಾಹಿತ್ಯ ಭಾಜನವಾಗಿದೆ. ರಾಷ್ಟ್ರೀಯತೆಯ ಗಂಧವನ್ನು ಹೊರಸೂಸುವ ಮತ್ತು ಹೇರಳವಾದ ಜ್ಞಾನಭಂಡಾರದಿಂದ ಕೂಡಿದ ಪುಸ್ತಕಗಳನ್ನು ಪ್ರಕಟಿಸುವ ನಮ್ಮ ಸಂಕಲ್ಪಕ್ಕೆ ಇದರಿಂದ ಇನ್ನಷ್ಟು ಪ್ರೋತ್ಸಾಹ ದೊರೆತಂತಾಗಿದೆ.

ರಾಷ್ಟ್ರೋತ್ಥಾನ ಸಾಹಿತ್ಯದ ಹೊಸ ಪುಸ್ತಕಗಳ ಲೋಕಾರ್ಪಣೆ
‘ರಾಷ್ಟ್ರತಪಸ್ವಿ ಶ್ರೀಗುರೂಜಿ’: ಶ್ರೀ ಗುರೂಜಿ ಗೋಳ್ವಲ್ಕರ್ ರ ಜೀವನ ಕಥನ
ಲೇಖಕರು: ಶ್ರೀ ರಂಗಾ ಹರಿ
ಅನುವಾದಕರು: ಶ್ರೀ ಚಂದ್ರಶೇಖರ ಭಂಡಾರಿ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೇ ಸರಸಂಘಚಾಲಕರಾದ ಶ್ರೀ ಗುರೂಜಿಯವರ ಜೀವನ ಮತ್ತು ಸಂದೇಶವನ್ನು ಒಳಗೊಂಡಿರುವ ‘ರಾಷ್ಟ್ರತಪಸ್ವಿ ಶ್ರೀ ಗುರೂಜಿ’ ಪುಸ್ತಕವನ್ನು ಜೂನ್ 11ರಂದು ಬಿಡುಗಡೆ ಮಾಡಲಾಯಿತು. ಶ್ರೀ ಗುರೂಜಿ ಸಂಘದ ಬೇರುಗಳನ್ನು ಬಲಪಡಿಸಿ, ಆ ಮೂಲಕ ವಿವಿಧ ಸಾಮಾಜಿಕ ಅನಿಷ್ಟಗಳನ್ನು ನಿರ್ಮೂಲನೆ ಮಾಡುವಲ್ಲಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಈ ಪುಸ್ತಕವು ಗುರೂಜಿಯ ಜೀವನ ಕಥನವಾಗಿದ್ದು, ಮಾತೃಭೂಮಿಯ ಸೇವೆಗಾಗಿ ಭಾರತದ ಯುವಕರಿಗೆ ಮಾರ್ಗದರ್ಶನ ಮತ್ತು ಪ್ರೇರಣೆಗಳನ್ನು ನೀಡುವಂಥದ್ದಾಗಿದೆ.

ಕಾರ್ಯಕ್ರಮದಲ್ಲಿ ಶ್ರೀ ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠದ ಪೂಜ್ಯ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಿದ್ದರು. ವಿಶ್ವವಾಣಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಶ್ರೀ ವಿಶ್ವೇಶ್ವರ ಭಟ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ರಾ. ಸ್ವ. ಸಂಘದ ಜ್ಯೇಷ್ಠ ಪ್ರಚಾರಕ ಶ್ರೀ ಸು. ರಾಮಣ್ಣ, ಕೃತಿಯ ಅನುವಾದಕ ಶ್ರೀ ಚಂದ್ರಶೇಖರ ಭಂಡಾರಿ, ರಾಷ್ಟ್ರೋತ್ಥಾನ ಪರಿಷತ್‌ ಅಧ್ಯಕ್ಷ ಶ್ರೀ ಎಂ. ಪಿ. ಕುಮಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಪ್ರಕ್ಷುಬ್ಧ ಕಾಶ್ಮೀರ: ಕಾಶ್ಮೀರದ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲುವ ಕೃತಿ
ಮೂಲ ಕೃತಿ: My frozen turbulence in Kashmir
ಲೇಖಕರು: ಶ್ರೀ ಜಗಮೋಹನ್
ಪ್ರಕಾಶನ: ರಾಷ್ಟ್ರೋತ್ಥಾನ ಸಾಹಿತ್ಯ

ಕೃತಿಯಲ್ಲೇನಿದೆ?

  • ಕಾಶ್ಮೀರದ ಪ್ರಕ್ಷುಬ್ಧತೆಗೆ ಕಾರಣಗಳು
  • ಕಾಶ್ಮೀರದ ರಾಜಕೀಯದಲ್ಲಿ ಫಾರೂಕ್ ಅಬ್ದುಲ್ಲಾ ಮತ್ತು ರಾಜೀವ್ ಗಾಂಧಿಯವರ ನಡೆ ಏನು? ಭಯೋತ್ಪಾದಕರ ಬಗ್ಗೆ ಅವರೇಕೆ ಮೃದು ಧೋರಣೆ ತೋರಿದರು?
  • ಫಾರೂಕ್ ಅಬ್ದುಲ್ಲಾ ರಾಜೀನಾಮೆ ಸಲ್ಲಿಸುವ ಮುನ್ನವೇ ಉಗ್ರರನ್ನು ಜೈಲಿನಿಂದ ಬಿಡುಗಡೆಗೊಳಿಸಿದ ಹಿಂದಿನ ಉದ್ದೇಶವೇನು?
  • ಭಯೋತ್ಪಾದಕರಿಗೆ INC ಮತ್ತು NCP ಬೆಂಬಲ ವೋಟ್ ಬ್ಯಾಂಕ್ ರಾಜಕೀಯದ ದ್ಯೋತಕವೇ?
  • ಕಣಿವೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸುತ್ತಿದ್ದ ಕಾಶ್ಮೀರದ ಗವರ್ನರ್ ಶ್ರೀ ಜಗಮೋಹನ್ ಅವರಿಗೆ ಅಡ್ಡಿಪಡಿಸಿದವರು ಯಾರು?
  • ಫಾರೂಕ್ ಅಬ್ದುಲ್ಲಾ ಮತ್ತು ರಾಜೀವ್ ಗಾಂಧಿ ಪದೇ ಪದೇ ರಾಜ್ಯಪಾಲ ಜಗಮೋಹನ್ ಅವರ ಮಾನಹಾನಿ ಮಾಡಲು ಮುಂದಾಗಿದ್ದೇಕೆ?
  • ಕಾಶ್ಮೀರಿ ಪಂಡಿತರ ವಲಸೆಯ ಹಿಂದಿನ ಮಾಸ್ಟರ್ ಮೈಂಡ್ ಯಾರು?