Call Us Now
+91 94482 84602
Email Us
info@rashtrotthana.org

Digital Version of Rashtrotthana Sahitya dedicated by Dr. Vijay Sankeshwar

ರಾಷ್ಟ್ರೋತ್ಥಾನ ಸಾಹಿತ್ಯದ ಡಿಜಿಟಲ್ ಆವೃತ್ತಿ ಲೋಕಾರ್ಪಣೆ: ಡಾ. ವಿಜಯ ಸಂಕೇಶ್ವರರಿಂದ

ಬೆಂಗಳೂರು, ನ.5: ಇಲ್ಲಿನ ಕಂಪೇಗೌಡನಗದ ರಾಷ್ಟ್ರೋತ್ಥಾನದಲ್ಲಿ ನಡೆಯುತ್ತಿರುವ ಕನ್ನಡ ಪುಸ್ತಕ ಹಬ್ಬದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಕಟನೆಗಳ ಡಿಜಿಟಲ್ ಆವೃತ್ತಿಯನ್ನು (https://play.google.com/store/search?q=rashtrotthana%20sahitya&c=books) ವಿ.ಆರ್.ಎಲ್. ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ವಿಜಯ ಸಂಕೇಶ್ವರ ಅವರು ಲೋಕಾರ್ಪಣೆ ಮಾಡಿದರು.

ನಂತರದಲ್ಲಿ ಮಾತನಾಡುತ್ತಾ ಡಾ. ವಿಜಯ ಸಂಕೇಶ್ವರರು ನಿಜ ಪುಸ್ತಕ ಬೀರುವ ಪ್ರಭಾವ ಡಿಜಿಟಲ್ ಪುಸ್ತಕಗಳು ಉಂಟುಮಾಡುವುದಿಲ್ಲ ಎಂದು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಚಲನಚಿತ್ರಗಳು ಬಹುಭಾಷೆಯಲ್ಲಿ ಬರುತ್ತಿರುವಂತೆ ಪುಸ್ತಕಗಳೂ ಬೇರೆಬೇರೆ ಭಾಷೆಗಳಲ್ಲಿ, ಅದರಲ್ಲೂ ಪ್ರಮುಖವಾಗಿ ಇಂಗ್ಲೀಷಿನಲ್ಲಿಯೂ ಬರಬೇಕು ಹಾಗೂ ತಂತ್ರಜ್ಞಾನದ ಹೊಸಹೊಸ ಸಾಧ್ಯತೆಗಳಿಗೆ ರಾಷ್ಟ್ರೋತ್ಥಾನ ಮಾತ್ರವಲ್ಲ, ಎಲ್ಲ ಪುಸ್ತಕ ಪ್ರಕಾಶಕರೂ ತೆರೆದುಕೊಂಡಲ್ಲಿ ಸಾಹಿತ್ಯ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸಾಧ್ಯ ಎಂದರು. ಜಾಗತಿವಾಗಿ ತಲುಪುವ ಗುರಿಯನ್ನು ಸಾಹಿತ್ಯಗಳು ಹೊಂದಲೇಬೇಕು ಎಂಬ ಅಂಶವನ್ನು ಒತ್ತಿ ಹೇಳಿದರು.

ಅವರ ಮಾತಿನ ಬಳಿಕ ಖ್ಯಾತ ಲೇಖಕರು ಹಾಗೂ ಅಂಕಣಕಾರರಾದ ಡಾ. ಬಾಬು ಕೃಷ್ಣಮೂರ್ತಿಯವರು ಸಾಹಿತ್ಯ, ಪತ್ರಿಕಾಕ್ಷೇತ್ರ, ಸ್ವಾತಂತ್ರ್ಯ ಹೋರಾಟಕ್ಕೆ ತಿರುಮಲೆ ತಾತಾಚಾರ್ಯ ಶರ್ಮರ ಕೊಡುಗೆ ಎಂಬ ವಿಷಯವಾಗಿ ಉಪನ್ಯಾಸ ನೀಡಿದರು. ಪತ್ರಿಕಾ ರಂಗದ ಭೀಷ್ಮರಾಗಿದ್ದ ತೀ.ತಾ. ಶರ್ಮರು ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಹಳೇ ಮೈಸೂರು ಭಾಗದಲ್ಲಿ ವಿಶ್ವ ಕರ್ನಾಟಕ ಪತ್ರಿಕೆಯ ಮೂಲಕ ಉಂಟುಮಾಡಿದ್ದ ಸಂಚಲನವನ್ನು ನೆನೆದರು.

ಬಡತನದ ಪರಿಸ್ಥಿತಿಯಲ್ಲಿ, ಹಣವಿಲ್ಲದಿದ್ದಾಗಲೂ ಶರ್ಮರು ಪತ್ರಿಕೆಯ ಕಾರ್ಯವನ್ನು ಧ‍್ಯೇಯ, ಆದರ್ಶವಾಗಿ ಸ್ವೀಕರಿಸಿ, ಖಿಲಾಫತ್ ಚಳುವಳಿಯ ಕಾಲದಲ್ಲಿ ಬೆಂಗಳೂರಿನ ಸುಲ್ತಾನ್‍ಪೇಟೆ ಗಣೇಶ ಗಲಾಟೆಯನ್ನು ದಿಟ್ಟವಾಗಿ ವಿರೋಧಿಸಿ, ದಿವಾನ್ ಸರ್‍.ಎಂ.ವಿ.ಯವರ ಅಧ್ಯಕ್ಷತೆಯ ವಿಚಾರಣೆಗೆ ಕಾರಣ ಆಗಿದ್ದನ್ನು ತಿಳಿಸಿದರು.

ಗಾಂಧಿಯಿಂದ ಬಹಳವೇ ಪ್ರಭಾವಿತರಾಗಿದ್ದ ತೀ.ತಾ. ಶರ್ಮರು ಗಂಡು ಭಾಷೆಯ, ಸತ್ಯನಿಷ್ಠೆಯ, ಪ್ರಾಮಾಣಿಕ ದೇಶಭಕ್ತ ಎಂದು ಬಣ್ಣಿಸಿದ ಡಾ. ಬಾಬು ಅವರು ಸ್ವತಂತ್ರ ಭಾರತದ ಸಂವಿಧಾನವನ್ನು ಮನುಸ್ಮೃತಿ, ಯಾಜ್ಞವಲ್ಕ್ಯಸ್ಮೃತಿ ಸಮಾನವೆಂದು ಭಾವಿಸಿದ್ದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಪ್ರಧಾನ ಕಾರ್ಯದರ್ಶಿ, ಶ್ರೀ ನಾ. ದಿನೇಶ್ ಹೆಗ್ಡೆ, ಉತ್ಥಾನದ ಗೌರವ ಸಂಪಾದಕರಾದ ನಾಡೋಜ ಶ‍್ರೀ ಎಸ್.ಆರ್. ರಾಮಸ್ವಾಮಿ, ಸಾಹಿತ್ಯ ಭಂಡಾರ ಪ್ರಕಾಶನದ ಶ್ರೀ ಸುಬ್ರಹ್ಮಣ್ಯ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ನವೆಂಬರ್-ನ ಕರ್ನಾಟಕ ರಾಜ್ಯೋತ್ಸವದ ಸುಸಂದರ್ಭದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ಕನ್ನಡ ಪುಸ್ತಕ ಹಬ್ಬ ಅಕ್ಟೋಬರ್ 29ರಿಂದ ಆರಂಭಿಸಿ ನವೆಂಬರ್ 27ರ ವರೆಗೆ 1 ತಿಂಗಳ ಕಾಲ ನಡೆಯಲಿದೆ. ಹಬ್ಬದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಪುಸ್ತಕ ಬಿಡುಗಡೆ, ವಿಶೇಷ ಉಪನ್ಯಾಸ ಹಾಗೂ ಸಂವಾದ ಇರಲಿದೆ. ರಾಷ್ಟ್ರೋತ್ಥಾನ ಸಾಹಿತ್ಯ ಮಾತ್ರವಲ್ಲದೇ ಇತರೇ ಪ್ರಸಿದ್ಧ ಸಾಹಿತ್ಯಗಳೂ ಲಭ್ಯವಿದ್ದು, 50%ವರೆಗೂ ರಿಯಾಯಿತಿ ಸಿಗಲಿದೆ.

ಅಂತರ್ಜಾಲ ಖರೀದಿಯ ಕೊಂಡಿ: https://www.sahityabooks.com/

https://rashtrotthana.org/
https://www.facebook.com/rashtrotthanaparishath
#Rashtrotthana#RashtrotthanaParishat#KannadaPustakaHabba2022#KannadaPustakaHabba#RashtrotthanaSahitya#BookFair#50Discount#BookFairBengaluru#babukrishnamurthy#Vijaysankeshwar