Bengaluru, Mar 6: The ‘Seva Vasati’ Prakalpa of Rashtrotthana Parishat organised an Educational Excursion for the college going students who reside in various Seva Vasatis of Bengaluru.
In order to pioneer an experience of empirical learning among students, they were taken to ‘Madhava Srushti’, Rashtrotthana Gaushala. The programme which has been conducted for the past 3 weeks witnessed 225 students from various Seva Vasati.
The General Secretary of Rashtrotthana Parishat, Sri N Dinesh Hegde was present at the excursion site and inspired the students through his motivational words. The Manager of Rashtrotthana Gaushala, Sri Jeevan Kumar introduced the students to the nature of working of the Gaushala.
The students, involved in various activities of Gaushala and pioneered in the noble cause of environmental protection. They also presented a baithak on how various activities can be implemented at their Seva Vasati in perspective of their personality development.
**
ಸೇವಾ ವಸತಿಯ ವಿದ್ಯಾರ್ಥಿಗಳಿಗೆ ಕಲಿಕಾ ಪ್ರವಾಸ
ಬೆಂಗಳೂರು, ಮಾರ್ಚ್ 6: ಬೆಂಗಳೂರಿನ ವಿವಿಧ ಸೇವಾ ವಸತಿಗಳಲ್ಲಿ ವಾಸಿಸುವ ಕಾಲೇಜು ವಿದ್ಯಾರ್ಥಿಗಳಿಗೆ ಒಂದು ದಿನದ ಕಲಿಕಾ ಪ್ರವಾಸವನ್ನು ರಾಷ್ಟ್ರೋತ್ಥಾನದ ‘ಸೇವಾ ವಸತಿ’ ಪ್ರಕಲ್ಪದ ವತಿಯಿಂದ ಆಯೋಜಿಸಲಾಗಿತ್ತು.
ಕಲಿಕಾ ಪರಿಸರವನ್ನು ಕಲ್ಪಿಸಿಕೊಡುವ ಉದ್ದೇಶದೊಂದಿಗೆ ಬೆಂಗಳೂರಿನ ಸೇವಾ ವಸತಿಗಳಲ್ಲಿ ವಾಸಿಸುವ ಮಕ್ಕಳನ್ನು ರಾಷ್ಟ್ರೋತ್ಥಾನದ ‘ಮಾಧವ ಸೃಷ್ಟಿ’ ಗೋಶಾಲೆಗೆ ಕರೆದುಕೊಂಡು ಹೋಗಲಾಯಿತು.
ಕಳೆದ ಮೂರು ವಾರಗಳಲ್ಲಿ ಸುಮಾರು 225 ವಿದ್ಯಾರ್ಥಿಗಳು ಮಾಧವ ಸೃಷ್ಟಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಉಪಸ್ಥಿತರಿದ್ದ ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆಯವರು ಮಕ್ಕಳನ್ನುದ್ದೇಶಿಸಿ ಸ್ಪೂರ್ತಿದಾಯಕ ನುಡಿಗಳನ್ನಾಡಿದರು.
ಗೋಶಾಲೆಯ ವ್ಯವಸ್ಥಾಪಕ ಶ್ರೀ ಜೀವನ್ ಕುಮಾರ್ ವಿದ್ಯಾರ್ಥಿಗಳಿಗೆ ಗೋಶಾಲೆಯ ಕಾರ್ಯವೈಖರಿಯನ್ನು ಪರಿಚಯಿಸಿದರು ಹಾಗೂ ವಿದ್ಯಾರ್ಥಿಗಳು ಗೋಶಾಲೆಯ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಭಾಗಿಯಾದರು.
ಇದೇ ವೇಳೆ ವಿದ್ಯಾರ್ಥಿಗಳು ತಮ್ಮ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಯಾವೆಲ್ಲಾ ಚಟುವಟಿಕೆಗಳನ್ನು ತಮ್ಮ ಸೇವಾ ವಸತಿಗಳಲ್ಲಿ ಆಯೋಜಿಸಬಹುದು ಎಂಬುದರ ಕುರಿತು ಬೈ-ಠೆಕ್ ಪ್ರಸ್ತುತಪಡಿಸಿದರು.
https://www.facebook.com/rashtrotthanaparishath/
https://rashtrotthana.org/