Bengaluru: ‘Seva Vasati’ is one of the significant projects of Rashtrotthana Parishat. As an initiative of ‘Seva Vasati’ prakalpa, a one day educational excursion was organised for the students of various Seva Vasatis of Bengaluru on February 13.
Nearly 75 students were taken to ‘Madhava Srushti’, Rashtrotthana Gaushala, near Ghati Subrahmanya in order to expose them to empirical learning. The students who hail from the Seva Vasati’s of Netaji Nagar, Janata Colony and Anandapur in Mysore Road and VV Giri Colony involved in various pro-environmental activities, thus joining hands for the protection of natural habitat.
A member of Rashtrotthana Parishat and Software engineer, Sri Guru Basavaraj enlightened the students about career guidance and higher education. Also, various activities were conducted to the students which are vital to their holistic development.
The educational excursion will be organised for the students of variuous other Seva vasti of Bengaluru in the forthcoming days in perspective of their educational and personality development.
ಸೇವಾ ವಸತಿ ಮಕ್ಕಳಿಗೆ ಕಲಿಕಾ ಪ್ರವಾಸ
ಬೆಂಗಳೂರು: ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಮುಖ ಪ್ರಕಲ್ಪಗಳಲ್ಲಿ ಒಂದಾದ ‘ಸೇವಾ ವಸತಿ’ ಯೋಜನೆಯ ವತಿಯಿಂದ ಫೆಬ್ರವರಿ 13ರಂದು ಬೆಂಗಳೂರಿನ ವಿವಿಧ ಸೇವಾ ವಸತಿಗಳ ಮಕ್ಕಳಿಗೆ ಏಕದಿನದ ಕಲಿಕಾ ಪ್ರವಾಸವನ್ನು ಆಯೋಜಿಸಲಾಗಿತ್ತು.
ಮಕ್ಕಳಲ್ಲಿ ಪ್ರಾಯೋಗಿಕ ಕಲಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಘಾಟಿ ಸುಬ್ರಮಹ್ಮಣ್ಯ ಸಮೀಪದ ‘ಮಾಧವ ಸೃಷ್ಟಿ’ ರಾಷ್ಟ್ರೋತ್ಥಾನ ಗೋಶಾಲೆಗೆ ಸುಮಾರು 75 ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲಾಗಿತ್ತು.
ನೇತಾಜಿ ನಗರ, ಮೈಸೂರು ರಸ್ತೆಯ ಜನತಾ ಕಾಲೋನಿ ಮತ್ತು ಆನಂದಪುರ ಹಾಗೂ ವಿ.ವಿ. ಗಿರಿ ಕಾಲೋನಿಯ ಸೇವಾ ವಸತಿಗಳ ವಿದ್ಯಾರ್ಥಿಗಳು ‘ಮಾಧವ ಸೃಷ್ಟಿ’ಗೆ ತೆರಳಿ ವಿವಿಧ ನೈಸರ್ಗಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೋತ್ಥಾನದ ಸದಸ್ಯರು ಹಾಗೂ ಸಾಫ್ಟ್ವೇರ್ ಇಂಜಿನಿಯರ್ ಶ್ರೀ ಗುರು ಬಸವರಾಜ್ ಉನ್ನತ ಮತ್ತು ವೃತ್ತಿಪರ ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು ಹಾಗೂ ವಿದ್ಯಾರ್ಥಿಗಳ ವ್ಯಕ್ತಿತ್ತ್ವ ವಿಕಸನಕ್ಕೆ ಪೂರಕವಾಗಿ ಹಲವು ಚಟುವಟಿಕೆಗಳನ್ನು ನಡೆಸಲಾಯಿತು.
ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗಾಗಿ ಕಲಿಕಾ ಪ್ರವಾಸವನ್ನು ಮುಂಬರುವ ದಿನಗಳಲ್ಲಿ ಬೆಂಗಳೂರಿನ ಇತರೆ ಸೇವಾ ವಸತಿಗಳಲ್ಲೂ ಆಯೋಜಿಸಲಾಗುತ್ತದೆ.
https://www.facebook.com/rashtrotthanaparishath/
https://rashtrotthana.org/