Call Us Now
+91 94482 84602
Email Us
info@rashtrotthana.org

Goushala visit by Yoga Students

Dec 19: Students of Rashtrotthana Keshavashilpa Yoga Centre visited Rashtrotthana Goushala in Ghatisubrahmanya and performed Gougrasa Seva. Smt. Anuradha and Smt. Gowri lead the team.


ಯೋಗಬಂಧುಗಳ ಗೋಶಾಲೆ ಭೇಟಿ
ಡಿಸೆಂಬರ್ 19: ರಾಷ್ಟ್ರೋತ್ಥಾನ ಕೇಶವಶಿಲ್ಪ ಯೋಗಕೇಂದ್ರದ ಯೋಗಬಂಧುಗಳು ಘಾಟಿಸುಬ್ರಹ್ಮಣ್ಯದಲ್ಲಿರುವ ರಾಷ್ಟ್ರೋತ್ಥಾನ ಗೋಶಾಲೆಗೆ ಭೇಟಿ ನೀಡಿ, ಗೋಗ್ರಾಸ ಸೇವೆಯನ್ನು ಮಾಡಿದರು. ಶ್ರೀಮತಿ ಅನುರಾಧ ಹಾಗೂ ಶ್ರೀಮತಿ ಗೌರಿಯವರು ಈ ಭೇಟಿಯ ನೇತೃತ್ವ ವಹಿಸಿದ್ದರು.


ನೀವೂ ಗೋಸೇವೆ ಮಾಡಬಹುದು:
ಗೋವನ್ನು ನಮ್ಮ ಸಂಸ್ಕೃತಿಯಲ್ಲಿ ತಾಯಿಗೆ ಹೋಲಿಸಲಾಗಿದೆ. ಆಕೆಯ ಸೇವೆ ಮಾಡುವುದು ಪುಣ್ಯದ ಕಾರ್ಯ ಎಂಬ ಭಾವನೆ ನಮ್ಮಲ್ಲಿದೆ. ಹಲವರಿಗೆ ಗೋಸೇವೆ ಮಾಡುವ ಇಚ್ಛೆಯಿದ್ದರೂ ಮಾಡುವ ಅವಕಾಶವಿರುವುದಿಲ್ಲ. ಅಂತಹವರಿಗಿಲ್ಲಿದೆ ಸುವರ್ಣಾವಕಾಶ.
ನೀವಿಲ್ಲಿ ಗೋವುಗಳ ಸಂರಕ್ಷಣೆಗಾಗಿ ಮುಕ್ತಹಸ್ತದಿಂದ ದಾನ ಮಾಡಬಹುದು. ನೇರವಾಗಿಯೂ ಗೋವುಗಳ ಪಾಲನೆ, ಪೋಷಣೆಯಲ್ಲಿ ತೊಡಗಿಕೊಳ್ಳಬಹುದು.
ಭಾರತೀಯ ಗೋವುಗಳ ಸಂರಕ್ಷಣೆ, ಸಂಗೋಪನೆ, ಸಂವರ್ಧನೆಗಳಲ್ಲಿ ಕೈಜೋಡಿಸಬಹುದು.
ರಾಷ್ಟ್ರೋತ್ಥಾನ ಗೋಶಾಲೆಯ ಚಟುವಟಿಕೆಗಳು:
ಗೋ ಸಂರಕ್ಷಣೆ ಹಾಗೂ ತಳಿ ಸಂವರ್ಧನೆ, ಕೃಷಿ ಮತ್ತು ಅರಣ್ಯ, ಸಾವಯವ ಕೃಷಿ, ಜಲ ಸಂರಕ್ಷಣೆ, ತರಬೇತಿ ಕೇಂದ್ರಗಳು, ಗವ್ಯೋತ್ಪನ್ನಗಳು
ಗೀರ್, ಸಾಹಿವಾಲ್, ಕಾಂಕ್ರೇಜ್, ಥಾರ್ ಪಾರ್ಕರ್, ದೇವನಿ, ಹಳ್ಳಿಕಾರ್, ಮಲೆನಾಡು ಗಿಡ್ಡ, ಓಂಗೋಲ್, ಅಮೃತಮಹಲ್ ಮುಂತಾದ ಹತ್ತು ಭಾರತೀಯ ಗೋ ತಳಿಗಳ ಸಂಗೋಪನೆ
ಹಸು, ಕರು, ಹೋರಿ, ಎತ್ತುಗನ್ನೊಳಗೊಂಡು ಸುಮಾರು 700ಕ್ಕೂ ಹೆಚ್ಚು ಗೋವುಗಳು ಇಲ್ಲಿ ಆಶ್ರಯ ಪಡೆದಿವೆ.

https://rashtrotthana.org/
https://www.facebook.com/hashtag/rashtrotthanagoushala