Call Us Now
+91 94482 84602
Email Us
info@rashtrotthana.org

Holistic development initiatives for the students of Rashtrotthana Schools

The hallmark of true education is instigating moral values in children, developing scientific temper, globalised vision, patriotism and thereby accomplishing the goals of a welfare society. Rashtrotthana Schools pioneers unique programmes with this backdrop for student’s holistic development through ‘Panchamuki Shikshana’.

World Environment Day celebrations at Rashtrotthana Schools

The students have to be educated about protecting our environment and conserving the rich natural heritage. With this intention, various schools of Rashtrotthana celebrated World Environment Day on 5th June.

  • Sri Beereshwara Swamy Rural High School, Abborudhoddi in Ramanagar District celebrated the world environment day. Sri Javaregowda, Headmaster of the school, Sri Shivaramaiah, Horticultural teacher, students and parents participated in the programme.
  • World Environment Day was celebrated at Jaigopal Garodia Rashtrotthana Vidya Kendra, Kalyan Nagar. The students of class X planted medicinal saplings in the school playground premises.
    Students of class X sang the song “Manegondu mara oorigondu vana”.
    A video on “Save Soil” by Sadguru ji, was played which created an awareness among the students. Students of class X performed a Mime show based on the concept of ‘save tree’.

School Reopening Ceremony

Rashtrotthana Vidya Kendra, Davangere celebrated the school reopening ceremony (Shala Prarambhotsava). The programme took place in the divine presence of H.H. Sri Sri Varasadyojata Shivacharya Swamiji of Harappanahalli, Taggina Mutt. The students who marked great achievements in the sports field were felicitated in the programme. Sri Raghavendra Ambekar, Secretary of the school, Dr. Anitha Rai, Principal of the school and other dignitaries were present in the programme.

School Reopening ceremony through moral classes

Rashtrotthana Vidyalaya, Holehonnuru began the academic year through moral classes. Sri Madhukar Kanetkar, member of the governing committee of the Taruna Bharati school, Bhadravati taught moral lessons to children by narrating a story. He explained the importance of the mother through a story. He suggested the teachers, to play a vital role in the development. Sri Rajaram, Secretary of the school, administered the oath to the students.

Programmes at JGRV

Parents’ Orientation

An interactive, parent orientation program was conducted for the parents and students of class 9 and 10 on 14th May 2022. Smt. Asha Mataji said that students should reduce the time spent on mobile and TV for effective learning. She encouraged students to follow the 3D formula i.e., Discipline, Determination and Dedication.

Sri Ravi Kiran who was selected for the first batch of TAPAS in the year 2012 shared his experiences during the TAPAS programme and how this initiative is immensely helpful for the children from poor economic background.

Teachers’ Orientation

Teachers’ orientation programme was conducted from 6th to 13th May. Smt. Gayatri Mataji gave a brief introduction to the New Education Policy.

A session was held on the topic ‘What makes a great teacher?’. The session was facilitated by Sri Colonel Kumar. The second session was on the topic ‘New learnings’. Secretary of JGRV Smt. Asha Ashok Mataji conducted group games and activities based on the theme of team bonding.

On 11th May, Academic Head, Smt. Ashwini Mataji took a session on ‘Learning Disabilities in children’. On 12th May, a Yoga session was organised for teachers.

On 13th May, the session was on ‘Gitanjali’, a composition of poems by Sri. Rabindranath Tagore. Smt. Deepa Joshi Mataji (HOD of English Department) gave a presentation on ‘Gitanjali’.

Sankalpa 2021-22 at JGRV, Kalyan Nagar

‘Sankalpa’, a unique initiative of Rashtrotthana Vidyalaya, aims at holistic development of students and to build a strong foundation for their future endeavours. ‘Sankalpa’ was celebrated at Jai Gopal Garodia Rashtrotthana Vidyalaya, Kalyan Nagar on April 12, Tuesday.

Sri Praveen Kumar H S, Product Manager, IBM was the Chief Guest of the event. He addressed the student community and said that students should always remember the moral values and contribute to the society.

Vice President of Rashtrotthana Parishat, Sri A R Dwaraknath ji appreciated the students for inculcating the values that were taught in the school and encouraged them to take part in pro-societal activities.

The event witnessed felicitation of winners in Art and Craft, Rangoli, making of Ganesha idols etc. Under the guidance of Pradhanacharya, Smt. Gayatri Kulkarni Mathaji, students took pledge to serve the country throughout their life.

Secretary, Smt. Asha Mathaji explained about ‘Love of self’, ‘Love for our family’ and ‘Love for the country’. She guided the students about how to fulfil the three Runas viz., Pitru runa, Acharya runa and Deva runa.

Sneha Milan at JGRV

Jaigopal Garodia Rashtrotthana Vidyalaya, Kalyan Nagar conducted ‘Sneha Milan’ programme for the students of 2019-20 batch.

School toppers in SSLC Public Examination were felicitated by the dignitaries. Sankalpa Certificates and Mementos were presented to all the students. Later, all the students took pledge to serve our country throughout their life with the guidance of Pradhanacharya, Smt. Gayatri Kulkarni Mathaji.

Samvit Katha Bharathi Orientation Program

Samvit Katha Bharathi is one of the Samvit modules which focuses on the emotional and social development of children through the means of storytelling. Samvit stories are designed to develop various personality aspects of children.

On May 25th, JGRV Kalyan Nagar School organised an orientation program for teachers in the art of storytelling.

Smt. Geetha Srinivasan mataji, experienced teacher, freelance journalist and life skill trainer, Sri Thyagaraja ji who has worked with S-VYASA, Amrita School of Engineering and is associated with Utsava and Katha Bharathi; Sri Manjunath Shinde ji who has worked with Toyota Kirloskar Motors and has been with Samvit team as implementation team member; were the resource persons.

Sri Manjunath ji explained the steps of narrating stories through presentation and activities. Teachers were engaged in an activity, wherein they were given a small narrative and asked to present it as a skit.

Gold Medal in Shooting

Prithiviraj, a student of class 8 from Rashtrotthana Vidya Kendra, Dharwad bagged gold medal in the national level 10 metre group shooting organised by Hubli shooting academy. He has also bagged 3rd place (bronze medal) in the individual category for junior level.

ರಾಷ್ಟ್ರೋತ್ಥಾನ ಶಾಲೆಗಳ ಪ್ರಮುಖ ಕಾರ್ಯಚಟುವಟಿಕೆಗಳು

ರಾಷ್ಟ್ರೋತ್ಥಾನ ಶಾಲೆಗಳಲ್ಲಿ ವಿಶ್ವ ಪರಿಸರ ದಿನಾಚರಣೆ

ನಮ್ಮ ನಿಸರ್ಗ ಸಂಪತ್ತನ್ನು ಸಂರಕ್ಷಿಸುವ ಅಗತ್ಯದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ರಾಷ್ಟ್ರೋತ್ಥಾನದ ವಿವಿಧ ಶಾಲೆಗಳಲ್ಲಿ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ರಾಮನಗರ ಜಿಲ್ಲೆಯ ಅಬ್ಬೂರದೊಡ್ಡಿ ಶ್ರೀ ಬೀರೇಶ್ವರ ಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಜವರೇಗೌಡ, ತೋಟಗಾರಿಕಾ ಶಿಕ್ಷಕರಾದ ಶ್ರೀ ಶಿವರಾಮಯ್ಯ, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.

ಕಲ್ಯಾಣನಗರದ ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಪರಿಸರ ದಿನವನ್ನು ಆಚರಿಸಲಾಯಿತು. ಹತ್ತನೆಯ ತರಗತಿಯ ವಿದ್ಯಾರ್ಥಿಗಳು ಶಾಲೆಯ ಆಟದ ಮೈದಾನದ ಆವರಣದಲ್ಲಿ ಔಷಧೀಯ ಸಸಿಗಳನ್ನು ನೆಟ್ಟರು. ಸದ್ಗುರು ಅವರ ‘ಮಣ್ಣು ಉಳಿಸಿ’ ಎಂಬ ವಿಷಯದ ಕುರಿತ ವಿಡಿಯೋವನ್ನು ಪ್ರದರ್ಶಿಸಲಾಯಿತು. ಇದು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿತು. ಹತ್ತನೆಯ ತರಗತಿಯ ವಿದ್ಯಾರ್ಥಿಗಳು ‘ಮರ ಉಳಿಸಿ’ ಪರಿಕಲ್ಪನೆಯ ಆಧಾರದ ಮೇಲೆ ಮೂಕಾಭಿನಯ ಮಾಡಿದರು.

ಶಾಲಾ ಪುನಾರಂಭ ಸಮಾರಂಭ

ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಆಚರಿಸಲಾಯಿತು. ತಗ್ಗಿನಮಠದ ಹರಪ್ಪನಹಳ್ಳಿಯ ಶ್ರೀ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲೆಯ ಕಾರ್ಯದರ್ಶಿ ಶ್ರೀ ರಾಘವೇಂದ್ರ ಅಂಬೇಕರ್, ಶಾಲಾ ಪ್ರಾಂಶುಪಾಲೆ ಡಾ. ಅನಿತಾ ರೈ ಹಾಗೂ ಗಣ್ಯರು ಉಪಸ್ಥಿತರಿದ್ದರು.

ಹೊಳೆಹೊನ್ನೂರು ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ಮಕ್ಕಳಿಗೆ ನೀತಿಪಾಠಗಳನ್ನು ಹೇಳುವ ಮೂಲಕ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಲಾಯಿತು. ಭದ್ರಾವತಿಯ ತರುಣ ಭಾರತಿ ಶಾಲೆಯ ಆಡಳಿತ ಸಮಿತಿ ಸದಸ್ಯರಾದ ಶ್ರೀ ಮಧುಕರ ಕಾನಿಟ್ಕರ್ ಮಕ್ಕಳಿಗೆ ಕಥೆ ಹೇಳುವ ಮೂಲಕ ತಾಯಿಯ ಮಹತ್ತ್ವವನ್ನು ವಿವರಿಸಿದರು. ಶಾಲಾ ಅಭಿವೃದ್ಧಿಯಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು. ಶಾಲಾ ಕಾರ್ಯದರ್ಶಿ ಶ್ರೀ ರಾಜಾರಾಮ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಜೆ. ಜಿ. ಆರ್‌. ವಿ. ಲ್ಲಿ ನಡೆದ ವಿವಿಧ ಕಾರ್ಯಕ್ರಮಗಳು

ಪೋಷಕರು ಮತ್ತು ಶಿಕ್ಷಕರಿಗಾಗಿ ಮಾಹಿತಿ ಕಾರ್ಯಾಗಾರ

14ನೇ ಮೇ 2022ರಂದು 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ವಿಶೇಷ ಕಾರ್ಯಕ್ರಮವನ್ನು ನಡೆಸಲಾಯಿತು. ಶ್ರೀಮತಿ ಆಶಾ ಮಾತಾಜಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್, ಟಿವಿಗಳಲ್ಲಿ ಸಮಯ ಕಳೆಯದೆ ಓದಿನ ಕಡೆ ಹೆಚ್ಚಿನ ಗಮನ ಕೊಡಬೇಕು ಎಂದರು. ಅವರು ಶಿಸ್ತು, ನಿರ್ಣಯ ಮತ್ತು ಸಮರ್ಪಣೆ ಎಂಬ 3D ಸೂತ್ರವನ್ನು ಅನುಸರಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 2012ರಲ್ಲಿ ತಪಸ್‌ನ ಮೊದಲ ಬ್ಯಾಚ್‌ಗೆ ಆಯ್ಕೆಯಾಗಿದ್ದ ಶ್ರೀ ರವಿಕಿರಣ್ ಜೀ ತಮ್ಮ ಅನುಭವವನ್ನು ಹಂಚಿಕೊಂಡರು.

ಶಿಕ್ಷಕರ ಮಾಹಿತಿ ಕಾರ್ಯಾಗಾರ

ಮೇ 6ರಿಂದ 13ರ ವರೆಗೆ ಶಿಕ್ಷಕರ ಮಾಹಿತಿ ಕಾರ್ಯಾಗಾರವನ್ನು ನಡೆಸಲಾಯಿತು. ಶ್ರೀಮತಿ ಗಾಯತ್ರಿ ಮಾತಾಜಿ ನೂತನ ಶಿಕ್ಷಣ ನೀತಿಯ ಪರಿಚಯ ಮಾಡಿದರು. ಕರ್ನಲ್ ಕುಮಾರ್ ಜೀ ‘ಯಾವುದು ಶ್ರೇಷ್ಠ ಶಿಕ್ಷಕರನ್ನು ರೂಪಿಸುತ್ತದೆ?’ ಎಂಬ ವಿಷಯದ ಕುರಿತು ಅವಧಿಯನ್ನು ನಡೆಸಿಕೊಟ್ಟರು. ಎರಡನೇ ಅವಧಿಯು ‘ಹೊಸ ಕಲಿಕೆಗಳು’ ವಿಷಯದ ಮೇಲೆ ನಡೆಯಿತು. ಜೆ. ಜಿ. ಆರ್‌.ವಿ.ಯ ಕಾರ್ಯದರ್ಶಿ ಶ್ರೀಮತಿ ಆಶಾ ಅಶೋಕ್ ಗುಂಪು ಆಟಗಳು ಮತ್ತು ಚಟುವಟಿಕೆಗಳನ್ನು ನಡೆಸಿಕೊಟ್ಟರು. ಮೇ 11ರಂದು ಶ್ರೀಮತಿ ಅಶ್ವಿನಿ ‘ಮಕ್ಕಳ ಕಲಿಕೆಯಲ್ಲಿ ಅಸಮರ್ಥತೆ’ಯ ಎಂಬ ವಿಷಯದ ಕುರಿತು ಅವಧಿ ತೆಗೆದುಕೊಂಡರು. ಮೇ 12ರಂದು ಶಿಕ್ಷಕರಿಗಾಗಿ ಯೋಗಾಭ್ಯಾಸ ಏರ್ಪಡಿಸಲಾಯಿತು. ಮೇ 13ರಂದು ಶ್ರೀಮತಿ ದೀಪಾ ಜೋಶಿಯವರು ರವೀಂದ್ರನಾಥ ಟ್ಯಾಗೋರರ ಕವಿನ ಸಂಕಲನ ‘ಗೀತಾಂಜಲಿ’ಯ ಕುರಿತು ಅವಧಿ ತೆಗೆದುಕೊಂಡರು.

ಸಂಕಲ್ಪ ಕಾರ್ಯಕ್ರಮ

ರಾಷ್ಟ್ರೋತ್ಥಾನ ವಿದ್ಯಾಲಯದ ವಿಶಿಷ್ಟ ಉಪಕ್ರಮವಾದ ‘ಸಂಕಲ್ಪ’ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಗುರಿ ಹೊಂದಿದೆ. ಏಪ್ರಿಲ್ 12ರಂದು ಕಲ್ಯಾಣನಗರದ ಜೈ ಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ಸಂಕಲ್ಪ ಕಾರ್ಯಕ್ರಮವನ್ನು ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಐ. ಬಿ. ಎಂ. ನ ಪ್ರಾಡಕ್ಟ್ ಮ್ಯಾನೇಜರ್ ಶ್ರೀ ಪ್ರವೀಣ್ ಕುಮಾರ್ ಎಚ್. ಎಸ್. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.

ರಾಷ್ಟ್ರೋತ್ಥಾನ ಪರಿಷತ್ತಿನ ಉಪಾಧ್ಯಕ್ಷರಾದ ಶ್ರೀ ಎ. ಆರ್. ದ್ವಾರಕಾನಾಥ್ ವಿದ್ಯಾರ್ಥಿಗಳು ಸಮಾಜಪರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಧಾನಾಚಾರ್ಯೆ ಶ್ರೀಮತಿ ಗಾಯತ್ರಿ ಕುಲಕರ್ಣಿಯವರ ಮಾರ್ಗದರ್ಶನದಲ್ಲಿ ಕಲೆ ಮತ್ತು ಕರಕುಶಲ, ರಂಗೋಲಿ, ಗಣೇಶ ಮೂರ್ತಿಗಳ ತಯಾರಿಕೆ ಇತ್ಯಾದಿ ಸ್ಪರ್ಧೆಗಳ ವಿಜೇತರನ್ನು ಸನ್ಮಾನಿಸಲಾಯಿತು. ಶ್ರೀಮತಿ ಆಶಾ ಸ್ವಯಂಪ್ರೇಮ, ಕುಟುಂಬಪ್ರೇಮ ಮತ್ತು ದೇಶಪ್ರೇಮದ ಕುರಿತು ವಿವರಿಸಿದರು. ಪಿತೃಋಣ, ಆಚಾರ್ಯಋಣ ಮತ್ತು ದೇವಋಣ ಎಂಬ ಮೂರು ಋಣಗಳನ್ನು ಹೇಗೆ ಪೂರೈಸಬೇಕು ಎಂಬುದರ ಕುರಿತು ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಸ್ನೇಹಮಿಲನ

ಕಲ್ಯಾಣನಗರದ ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಲಯವು 2019-20ನೇ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ‘ಸ್ನೇಹ ಮಿಲನ’ ಕಾರ್ಯಕ್ರಮವನ್ನು ನಡೆಸಿತು. ಗಣ್ಯರು ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ನೆನಪಿನ ಕಾಣಿಕೆಗಳನ್ನು ವಿತರಿಸಲಾಯಿತು. ಅನಂತರ, ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ದೇಶಕ್ಕೆ ಸೇವೆ ಸಲ್ಲಿಸುವುದಾಗಿ ಪ್ರತಿಜ್ಞೆ ಮಾಡಿದರು.

ಸಂವಿತ್ ಕಥಾಭಾರತಿ ಮಾಹಿತಿ ಕಾರ್ಯಾಗಾರ

ಸಂವಿತ್ ಮಾಡ್ಯೂಲ್‌ಗಳಲ್ಲಿ ಸಂವಿತ್ ಕಥಾಭಾರತಿಯೂ ಒಂದು. ಕಥೆ ಹೇಳುವ ಮೂಲಕ ಮಕ್ಕಳಲ್ಲಿ ಭಾವನಾತ್ಮಕ ಮತ್ತು ಸಾಮಾಜಿಕ ಬೆಳವಣಿಗೆಯನ್ನು ತರುವ ಉದ್ಧೇಶದಿಂದ ಈ ಯೋಜನೆಯನ್ನು ನಡೆಸಲಾಗುತ್ತಿದೆ.

ಮೇ 25 ರಂದು, ಜೆ.ಜಿ.ಆರ್‌.ವಿ. ಕಲ್ಯಾಣ ನಗರ ಶಾಲೆಯಲ್ಲಿ ಶಿಕ್ಷಕರಿಗೆ ಕಥೆ ಹೇಳುವ ಕಲೆಯ ಬಗ್ಗೆ ಮಾಹಿತಿ ನೀಡುವ ಕಾರ್ಯಾಗಾರವನ್ನು ನಡೆಸಲಾಯಿತು. ಶ್ರೀಮತಿ ಗೀತಾ ಶ್ರೀನಿವಾಸನ್, ಶ್ರೀ ತ್ಯಾಗರಾಜ ಮತ್ತು ಶ್ರೀ ಮಂಜುನಾಥ್ ಶಿಂಧೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಶೂಟಿಂಗ್‌ನಲ್ಲಿ ಚಿನ್ನದ ಪದಕ ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರಮಟ್ಟದ 10 ಮೀಟರ್‌ ಗ್ರೂಪ್‌ ಶೂಟಿಂಗ್‌ನಲ್ಲಿ ಧಾರವಾಡದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ 8ನೆಯ ತರಗತಿಯ ವಿದ್ಯಾರ್ಥಿ ಪೃಥ್ವಿರಾಜ್‌ ಚಿನ್ನದ ಪದಕ ಪಡೆದಿದ್ದಾರೆ. ಅವರು ಜೂನಿಯರ್ ಮಟ್ಟದ ವೈಯಕ್ತಿಕ ವಿಭಾಗದಲ್ಲಿ 3ನೇ ಸ್ಥಾನವನ್ನೂ (ಕಂಚಿನ ಪದಕ) ಗಳಿಸಿದ್ದಾರೆ.