Call Us Now
+91 94482 84602

Holistic Development Initiatives for the Students of Rashtrotthana Vidyalaya

The hallmark of true education is instigating moral values in children, developing scientific temper, globalised vision, patriotism and thereby accomplishing the goals of a welfare society. Rashtrotthana Vidyalaya pioneers unique programmes with this backdrop for student’s holistic development through ‘Panchamuki Shikshana’.

New Rashtrotthana Schools to come up in Mysore

Official Launch @ Sri Sutturu Math, Mysore

Rashtrotthana Parishat which has a legacy of running 21 educational institutions across Karnataka which is guiding and enlightening the lives of 19 thousand students and 1100 teachers is coming up with 2 new schools in Mysore.

With the divine blessing of Jagadguru Sri Sri Shivaratri Deshikendra Mahaswamiji of Sri Sutturu Mutt, the school has started the admission for the upcoming academic year 2022-23. 2 new Rashtrotthana Vidya Kendra in Mysore is affiliated to C.B.S.E board.

Rashtrotthana Vidya Kendra
Vijayanagara, 4th Stage, Belawadi, Mysore – 570 032
Ph: 99020 36338, 70220 39491
Email: [email protected]
http://rvkcbsemys.in/vijaynagar/

Rashtroothana Vidya Kendra
Srinagar, Mandakalli, Mysore-570 008
Ph: 96635 89823, 70220 39491
Email: [email protected]
http://rvkcbsemys.in/srinagar/

Mega Aksharabhyasa event at Rashtrotthana Vidyalaya, Holehonnuru

On the eve of Vasanta Panchami i.e. on 5th of February, Rashtrotthana Vidyalaya, Holehonnuru organised a mega Aksharabhyasa for the children of surrounding region who have completed 4 months 4 days as of 5th February.

Sri Vinayananda Saraswathi Swamiji of Sri Ramakrishna Ashrama, Shivamogga blessed the occasion with their divine presence. The aksharabhyasa ritual was performed to 114 children. The swamiji gave a message to the teachers’ community regarding their work criteria for the well-being of students and the educational institution.

Series of events at JGRV School for comprehensive growth of students

Teachers’ Orientation Programme at JGRV

Empowering teachers with efficient knowledge and equipping them with successful methods of transferring knowledge are crucial. With this motive, Jaigopal Garodia Rashtrotthana Vidyalaya in Kalyan Nagar, Bengaluru organised an orientation programme for teachers on 12th February at JGRV campus.

Schools have a vital role in the safety and security of students against sexual abuse and exploitation. Hence, a session was presented on the POCSO Act. The salient features of the act, ways of identification and reporting, providing counselling at different levels and its implementation in the school and other information was provided to teachers and other administrative members.

A session about the Indian knowledge system was presented. The New Education Policy has 25 Indian knowledge system themes such as handicrafts, textiles, yoga and meditation, classical music forms, Bhartiya engineering, medicine, agriculture etc. The session focused on how these learning concepts can be implemented at the classroom level.

JGRV Students felicitated with ‘Inspire Awards – MANAK’

The students of JGRV, Kalyan Nagar were honoured with ‘Inspire Awards – MANAK’ for innovative ideas in science and technology. The award is given by the Department of Science and Technology, Government of India with an aim of motivating the young minds in the field of science and technology. Kum. Aditya Kumar, Kum. Bhama Patel, Kum. Preetham and Kum. Hemeshwaran of JGRV received a cash prize of ten thousand rupees for their exceptional creativity. The school also felicitated the young achievers on the eve of National Science Day.

https://rashtrotthana.org/jgrv-students-felicitated-with-inspire-awards-manak/

Science Fest at JGRV

Science fest was organised at the school on account of the National Science Day from 24th to 28th of February. The week-long fest encompassed lectures, exhibitions, workshops and live demonstrations.

The students spoke about adopting the ‘3 R’s viz., Reduce, Reuse and Recycle which are vital to maintain ecological balance. They also enacted skits based on Vikram Sarabhai and Dr. APJ Abdul Kalam, who initiated space research and nuclear power in India.

The science fest had an interesting activity of making science diagrams through the medium of rangoli. The human brain, simple electric motor, digestive system, and biogas plant were depicted in colourful rangolis. The showstopper was the black and white portrait of Dr.APJ Abdul Kalam.

‘Career in Indian Defence’: A session at JGRV

The Indian Armed Forces are the emblem of the country’s pride and it is the duty of every social institution to encourage the children of the present generation to join the Indian defence for the service of the motherland. With this motive, JGRV organised a session on ‘Career Opportunities in Indian Defence’ on 15th March.

Former Serviceman Colonel Ranjith Chitale, currently working as flight test engineer at Hindustan Aeronautics Limited (HAL) addressed the students and spoke about the process to join the Indian Defence under Permanent Commission and Short Service Commission. He explained about the qualifications required to join the Indian Defence and guided the students regarding entrance examinations and other criteria for selection processes.

https://rashtrotthana.org/career-in-indian-defence-a-session-at-jgrv/

Sankalpa Programme for S.S.L.C. Students

S.S.L.C. exam is a key milestone in students life. It constructs a robust foundation for further education and career. But, students are generally prone to stress during their preparation. Hence, Jnanabharathi Vidyamandira in Chitradurga organised Sankalpa programme for the students of class 10 to motivate and guide them to excel in exams.

Smt. Chaitanyamai Sri Sharada mataji was the chief guest of the event. She enlightened the students by saying, “stress and panic among students is common during exams. But, one should develop self-confidence gradually. One should study in a peaceful environment and should pray god everyday to develop concentration. A student shouldn’t waste time in social media and other unproductive activities because time is the most precious thing for a student. A student should be devoted in his endevours and must be dedicated in his education and should evolve as a responsible citizen who upholds Bharatiya culture and protects Santana dharma”.

https://rashtrotthana.org/%e0%b2%8e%e0%b2%b8%e0%b3%8d-%e0%b2%8e%e0%b2%b8%e0%b3%8d-%e0%b2%8e%e0%b2%b2%e0%b3%8d-%e0%b2%b8%e0%b2%bf-%e0%b2%aa%e0%b2%b0%e0%b3%80%e0%b2%95%e0%b3%8d%e0%b2%b7%e0%b3%86-%e0%b2%ac%e0%b2%b0%e0%b3%86/

—–

ಮಕ್ಕಳ ಸರ್ವಾಂಗೀಣ ವಿಕಸನಕ್ಕೆ ರಾಷ್ಟ್ರೋತ್ಥಾನ ವಿದ್ಯಾಲಯಗಳಲ್ಲಿ ವಿವಿಧ ಕಾರ್ಯಕ್ರಮಗಳು

ವಿದ್ಯಾರ್ಥಿಗಳನ್ನು ಸಚ್ಚಾರಿತ್ರ್ಯ, ಸಹಾನುಭೂತಿ, ವೈಜ್ಞಾನಿಕ ಮನೋಭಾವ ಹಾಗೂ ಜಾಗತಿಕ ನೋಟಗಳನ್ನೊಳಗೊಂಡ ಪರಿಪೂರ್ಣ ವ್ಯಕ್ತಿಗಳನ್ನಾಗಿ ರೂಪಿಸುವುದು, ಅವರನ್ನು ಶೈಕ್ಷಣಿಕ ಉನ್ನತಿ ಸಾಧಿಸಲು ಸಮರ್ಥರನ್ನಾಗಿಸುವುದು ಮತ್ತು ಕಾಲಾತೀತವಾದ ಜೀವನಮೌಲ್ಯಗಳನ್ನು ಹಾಗೂ ರಾಷ್ಟ್ರಭಕ್ತಿಯನ್ನು ಅವರೊಳಗೆ ಬಿತ್ತುವುದು ರಾಷ್ಟ್ರೋತ್ಥಾನ ವಿದ್ಯಾಲಯಗಳ ಗುರಿಯಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೋತ್ಥಾನದ ಶಾಲೆಗಳು ಕಳೆದ ತ್ರೈಮಾಸಿಕದಲ್ಲಿ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಮೈಸೂರಿನಲ್ಲಿ ರಾಷ್ಟ್ರೋತ್ಥಾನದ ನೂತನ ಶಾಲೆಗಳು ಆರಂಭ

ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ, ಶ್ರೀ ನಾ. ದಿನೇಶ್ ಹೆಗ್ಡೆಯವರಿಂದ ಮೈಸೂರಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳಿಗೆ ಚಾಲನೆ

ರಾಷ್ಟ್ರೋತ್ಥಾನ ಪರಿಷತ್ತು ಪ್ರಸ್ತುತ ರಾಜ್ಯಾದ್ಯಂತ 21 ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದು, 19,000 ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ದಾರಿ ದೀಪವಾಗಿದೆ ಹಾಗೂ 1100 ಶಿಕ್ಷಕರಿಗೆ ಆಸರೆಯಾಗಿದೆ. ರಾಷ್ಟ್ರೋತ್ಥಾನದ ಈ ಶಿಕ್ಷಣ ಸೇವೆಯ ಹಿರಿಮೆಗೆ ಮತ್ತೆರಡು ಗರಿ ಸೇರ್ಪಡೆಯಾಗುತ್ತಿದೆ.

ಶ್ರೀ ಸುತ್ತೂರು ಮಠದ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜೀಯವರ ಆಶೀರ್ವಾದದೊಂದಿಗೆ ಮೈಸೂರಿನಲ್ಲಿ ಸಿ.ಬಿ.ಎಸ್.ಇ. ಪಠ್ಯಕ್ರಮದ ಎರಡು ನೂತನ ಶಾಲೆಗಳು ಪ್ರಾರಂಭವಾಗಲಿದ್ದು 2022-23 ಶೈಕ್ಷಣಿಕ ವರ್ಷಕ್ಕೆ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ.

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ
ವಿಜಯನಗರ, 4ನೇ ಹಂತ, ಬೆಳವಾಡಿ, ಮೈಸೂರು – 570 032
ದೂ: 99020 36338, 70220 39491
E mail: [email protected]
http://rvkcbsemys.in/vijaynagar/

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ
ಶ್ರೀನಗರ, ಮಂಡಕಳ್ಳಿ, ಮೈಸೂರು – 570 008
ದೂ: 96635 89823, 70220 39491
E mail: [email protected]
http://rvkcbsemys.in/srinagar/

ಹೊಳೆಹೊನ್ನೂರಿನ ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ಸಾಮೂಹಿಕ ಅಕ್ಷರಾಭ್ಯಾಸ

ವಸಂತ ಪಂಚಮಿ ಪರ್ವದ ಪ್ರಯುಕ್ತ (ಮಾಘ, ಶುದ್ಧ ಪಂಚಮಿ) ಫೆಬ್ರವರಿ 5ರಂದು 4 ವರ್ಷ 4 ತಿಂಗಳು ಹಾಗೂ 4 ದಿನ ತುಂಬಿದಂತಹ ಸುತ್ತಮುತ್ತಲಿನ ಗ್ರಾಮದ ಮಕ್ಕಳಿಗೆ ಹೊಳೆಹೊನ್ನೂರಿನ ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ಷೋಡಶ ಸಂಸ್ಕಾರಗಳಲ್ಲಿ ಪ್ರಮುಖವಾದ ಅಕ್ಷರಾಭ್ಯಾಸವನ್ನು ಮಾಡಿಸಲಾಯಿತು.

ಶಿವಮೊಗ್ಗದ ಶ್ರೀರಾಮಕೃಷ್ಣಾಶ್ರಮದ ಶ್ರೀ ವಿನಯಾನಂದ ಸರಸ್ವತೀ ಸ್ವಾಮೀಜಿ ಕಾರ್ಯಕ್ರಮಕ್ಕೆ ಆಗಮಿಸಿ ಮಕ್ಕಳಿಗೆ ಅಕ್ಷರಾಭ್ಯಾಸ ನೆರವೇರಿಸಿ, ಆಶೀರ್ವಚನ ಅನುಗ್ರಹಿಸಿದರು. ಕಾರ್ಯಕ್ರಮದಲ್ಲಿ ಒಟ್ಟು 114 ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡಿಸಲಾಯಿತು. ಇದೇ ಸಂದರ್ಭದಲ್ಲಿ ಮಕ್ಕಳ ಬೆಳವಣಿಗೆ ಮತ್ತು ಸಂಸ್ಥೆಯ ಹಿತದೃಷ್ಟಿಯಿಂದ ಶಿಕ್ಷಕರು ಯಾವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕೆಂದು ಸ್ವಾಮೀಜೀ ತಿಳಿಸಿಕೊಟ್ಟರು.

ಬೆಂಗಳೂರಿನ ಜೆ.ಜಿ.ಆರ್.ವಿ.ಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು

ಶಿಕ್ಷಕರ ತರಬೇತಿ ಕಾರ್ಯಕ್ರಮ

ಬೆಂಗಳೂರಿನ ಕಲ್ಯಾಣನಗರದಲ್ಲಿರುವ ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಲಯವು 2022ರ ಫೆಬ್ರವರಿ 12ರಂದು ಶಿಕ್ಷಕರಿಗಾಗಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯ ವಿರುದ್ಧ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆಯಲ್ಲಿ ಶಾಲೆಗಳು ಪ್ರಮುಖ ಪಾತ್ರವನ್ನು ಹೊಂದಿವೆ. ಆದ್ದರಿಂದ, ಪೋಕ್ಸೊ ಕಾಯ್ದೆಯ ಕುರಿತು ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾಯಿದೆಯ ಲಕ್ಷಣಗಳ ಗುರುತಿಸುವ ಮತ್ತು ವರದಿ ಮಾಡುವ ವಿಧಾನಗಳು, ವಿವಿಧ ಹಂತಗಳಲ್ಲಿ ಸಮಾಲೋಚನೆಗಳನ್ನು ಒದಗಿಸುವುದು ಮತ್ತು ಶಾಲೆಯಲ್ಲಿ ಅದರ ಅನುಷ್ಠಾನ ಮುಂತಾದ ಮಾಹಿತಿಯನ್ನು ಶಿಕ್ಷಕರು ಮತ್ತು ಇತರ ಆಡಳಿತ ಸದಸ್ಯರಿಗೆ ಒದಗಿಸಲಾಯಿತು.

ತರಬೇತಿಯ ಒಂದು ಅವಧಿಯಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಯ ಕುರಿತು ಮಾಹಿತಿ ನೀಡಲಾಯಿತು. ಹೊಸ ಶಿಕ್ಷಣ ನೀತಿಯು ಕರಕುಶಲ, ಜವಳಿ, ಯೋಗ ಮತ್ತು ಧ್ಯಾನ, ಶಾಸ್ತ್ರೀಯ ಸಂಗೀತ ಪ್ರಕಾರಗಳು, ಭಾರತೀಯ ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ ಇತ್ಯಾದಿಗಳಂತಹ 25 ಭಾರತೀಯ ಜ್ಞಾನ ವ್ಯವಸ್ಥೆಯ ವಿಷಯಗಳನ್ನು ಹೊಂದಿದೆ. ತರಗತಿಯ ಮಟ್ಟದಲ್ಲಿ ಈ ಕಲಿಕೆಯ ಪರಿಕಲ್ಪನೆಗಳನ್ನು ಹೇಗೆ ಕಾರ್ಯಗತಗೊಳಿಸಬಹುದು ಎಂಬುದರ ಕುರಿತು ಈ ಅವಧಿಯಲ್ಲಿ ಚಿಂತನೆ ನಡೆಸಲಾಯಿತು.

‘ಇನ್ಸ್‌ಪೈರ್ ಅವಾರ್ಡ್ಸ್ – ಮನಕ್’ ವಿಜೇತರಿಗೆ ಅಭಿನಂದನಾ ಕಾರ್ಯಕ್ರಮ

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಯುವ ಮನಸ್ಸುಗಳನ್ನು ಪ್ರೇರಿಸುವ ಉದ್ದೇಶದಿಂದ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ‘ಇನ್ಸ್‌ಪೈರ್ ಅವಾರ್ಡ್ಸ್-ಮನಕ್’ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ. ಜೆ.ಜಿ.ಆರ್.ವಿ.ಯಲ್ಲಿ ಕು. ಆದಿತ್ಯ ಕುಮಾರ್, ಕು. ಭಾಮಾ ಪಟೇಲ್, ಕು. ಪ್ರೀತಂ ಮತ್ತು ಕು. ಹೇಮೇಶ್ವರನ್ ಅವರ ಅಸಾಧಾರಣ ಸೃಜನಶೀಲತೆ ಮತ್ತು ವಿನೂತನ ಅವಿಷ್ಕಾರಗಳಿಗೆ ಹತ್ತು ಸಾವಿರ ರೂಪಾಯಿಗಳ ನಗದು ಬಹುಮಾನ ಲಭಿಸಿದೆ. ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಶಾಲೆಯಲ್ಲಿ ಯುವ ಸಾಧಕರನ್ನು ಗೌರವಿಸಲಾಯಿತು.

ಜೆ. ಜಿ. ಆರ್. ವಿ. ಯಲ್ಲಿ ಅರ್ಥಪೂರ್ಣ ವಿಜ್ಞಾನ ಉತ್ಸವ

ಫೆಬ್ರವರಿ 24 ರಿಂದ 28 ರವರೆಗೆ ರಾಷ್ಟ್ರೀಯ ವಿಜ್ಞಾನ ದಿನದ ನಿಮಿತ್ತ ಶಾಲೆಯಲ್ಲಿ ವಿಜ್ಞಾನ ಉತ್ಸವವನ್ನು ಆಯೋಜಿಸಲಾಗಿತ್ತು. ಭಾರತದಲ್ಲಿ ಬಾಹ್ಯಾಕಾಶ ಮತ್ತು ಪರಮಾಣು ಶಕ್ತಿಯ ಉತ್ಪಾದನೆಗೆ ಸಂಬಂಧಿಸಿದಂತೆ ಸಂಶೋಧನೆ ಮಾಡಿದ ವಿಕ್ರಮ್ ಸಾರಾಭಾಯ್ ಮತ್ತು ಡಾ. ಎಪಿಜೆ ಅಬ್ದುಲ್ ಕಲಾಂ ಅವರನ್ನು ಆಧರಿಸಿದ ಸ್ಕಿಟ್ ಅನ್ನು ನಿರೂಪಿಸಲಾಯಿತು. ಮಕ್ಕಳಿಂದ ‘ಆಹಾರದ ವೈವಿಧ್ಯಗಳು’ ಕುರಿತು ಕಿರುನಾಟಕ, ಆರೋಗ್ಯಕರ ಹಲ್ಲುಗಳ ಮಹತ್ತ್ವದ ಕುರಿತು ಗೀತೆಯನ್ನು ಪ್ರಸ್ತುತಪಡಿಸಲಾಯಿತು.

ವಿಜ್ಞಾನ ಉತ್ಸವವು ರಂಗೋಲಿಯ ಮೂಲಕ ವಿಜ್ಞಾನ ರೇಖಾಚಿತ್ರಗಳನ್ನು ಮಾಡುವ ಆಸಕ್ತಿದಾಯಕ ಚಟುವಟಿಕೆಯನ್ನು ಹೊಂದಿತ್ತು. ಮಾನವನ ಮೆದುಳು, ಸರಳ ವಿದ್ಯುತ್ ಮೋಟಾರು, ಜೀರ್ಣಾಂಗ ವ್ಯವಸ್ಥೆ, ಬಯೋಗ್ಯಾಸ್ ಪ್ಲಾಂಟ್ ಇತ್ಯಾದಿ ಬಣ್ಣಬಣ್ಣದ ರಂಗೋಲಿಗಳಲ್ಲಿ ಚಿತ್ರಿಸಲಾಗಿತ್ತು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಕಪ್ಪು ಬಿಳುಪು ಭಾವಚಿತ್ರ ಎಲ್ಲರ ಗಮನ ಸೆಳೆಯಿತು.

‘ಭಾರತೀಯ ರಕ್ಷಣಾ ವ್ಯವಸ್ಥೆಯಲ್ಲಿ ಉದ್ಯೋಗಾವಕಾಶ’: ಜೆ.ಜಿ.ಆರ್.ವಿ.ಯಲ್ಲೊಂದು ಮಾಹಿತಿ ಕಾರ್ಯಾಗಾರ

ಭಾರತೀಯ ಸಶಸ್ತ್ರ ಪಡೆಗಳು ದೇಶದ ಹೆಮ್ಮೆ. ಯುವ ಪೀಳಿಗೆಯನ್ನು ಮಾತೃಭೂಮಿಯ ಸೇವೆಗಾಗಿ ಭಾರತದ ರಕ್ಷಣಾ ವ್ಯವಸ್ಥೆಗೆ ಸೇರುವಂತೆ ಪ್ರೋತ್ಸಾಹಿಸುವುದು ಪ್ರತಿಯೊಂದು ಸಾಮಾಜಿಕ ಸಂಸ್ಥೆಗಳ ಕರ್ತವ್ಯ. ಈ ಉದ್ದೇಶದಿಂದ, ಬೆಂಗಳೂರಿನ ಜೆ.ಜಿ.ಆರ್.ವಿ.ಯಲ್ಲಿ ಮಾರ್ಚ್ 15 ರಂದು ‘ಭಾರತೀಯ ರಕ್ಷಣಾ ಪಡೆಗಳಲ್ಲಿ ಉದ್ಯೋಗಾವಕಾಶಗಳು’ ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಿಲಾಗಿತ್ತು.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ (ಎಚ್‌ಎಎಲ್) ಫ್ಲೈಟ್ ಟೆಸ್ಟ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಕರ್ನಲ್ ರಂಜಿತ್ ಚಿತಾಳೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಕರ್ನಲ್ ಚಿತಾಲೆ ಅವರು ಪರ್ಮನೆಂಟ್ ಕಮಿಷನ್ ಮತ್ತು ಶಾರ್ಟ್ ಸರ್ವಿಸ್ ಕಮಿಷನ್ ಅಡಿಯಲ್ಲಿ ಭಾರತೀಯ ರಕ್ಷಣೆಗೆ ಸೇರುವ ಪ್ರಕ್ರಿಯೆ, ವಿದ್ಯಾರ್ಹತೆ, ಪ್ರವೇಶ ಪರೀಕ್ಷೆ ಮತ್ತು ಆಯ್ಕೆ ಪ್ರಕ್ರಿಯೆಯ ಮಾನದಂಡಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ಮಕ್ಕಳಿಗಾಗಿ ಸಂಕಲ್ಪ ಕಾರ್ಯಕ್ರಮ

ಎಸ್.ಎಸ್.ಎಲ್.ಸಿ ಪರೀಕ್ಷೆಯು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಮತ್ತು ಉತ್ತಮ ಭವಿಷ್ಯದ ಬುನಾದಿ. ಆದರೆ, ಪರೀಕ್ಷಾರ್ಥವಾಗಿ ತಯಾರಿ ನಡೆಸುವ ಮಕ್ಕಳು ಅತಂಕ, ಭಯಕ್ಕೊಳಗಾಗುವುದು ಸಹಜ. ಆದ್ದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆಯ ತಯಾರಿ ಬಗ್ಗೆ ಮಾರ್ಗದರ್ಶನ ಮತ್ತು ಉತ್ತೇಜನ ನೀಡುವ ಉದ್ದೇಶದೊಂದಿಗೆ ಚಿತ್ರದುರ್ಗದ ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ೧೦ನೇ ತರಗತಿ ಮಕ್ಕಳಿಗೆ ಸಂಕಲ್ಪ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮಾತಾ ಚೈತನ್ಯಮಯಿ ಶ್ರೀ ಶಾರದಾ ಮಾತಾಜಿ ವಿದ್ಯಾರ್ಥಿಗಳಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡಿದರು. ಪರೀಕ್ಷೆ ಬರೆಯುವ ಮಕ್ಕಳಿಗೆ ಆತಂಕ ಸಹಜವಾಗಿ ಇರುತ್ತದೆ. ಆದರೆ, ಅವುಗಳನ್ನು ಮನಸ್ಸಿನಿಂದ ತೆಗೆದು ಹಾಕಿ ಧೈರ್ಯದಿಂದ ಪರೀಕ್ಷೆ ಬರೆಯಬೇಕು. ಪ್ರಶಾಂತವಾದ ವಾತಾವರಣದಲ್ಲಿ ಕುಳಿತು ಅಧ್ಯಯನ ಮಾಡಬೇಕು. ಪ್ರತಿನಿತ್ಯ ದೇವರ ಸ್ಮರಣೆ ಮಾಡುವುದರಿಂದ ಏಕಾಗ್ರತೆ ವೃದ್ಧಿಯಾಗುತ್ತದೆ ಹಾಗೂ ಯಾವುದೇ ಕೆಲಸವನ್ನು ಆತ್ಮವಿಶ್ವಾಸದಿಂದ ಮಡಿದಾಗ ಯಶಸ್ಸು ಲಭಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಸಮಯ ಅತ್ಯಂತ ಅಮೂಲ್ಯವಾದದ್ದು. ಹೀಗಾಗಿ ಅಂತರ್ಜಾಲ, ಸಮೂಹ ಸಂವಹನಗಳಲ್ಲಿ ಕಾಲಹರಣ ಮಾಡದೇ ನಿಷ್ಠೆಯಿಂದ ಪರೀಕ್ಷೆಗೆ ಅಭ್ಯಾಸ ಮಾಡಬೇಕು. ತನ್ಮೂಲಕ ಸನಾತನ ಧರ್ಮ, ಸಂಸ್ಕೃತಿಯನ್ನು ಸಂರಕ್ಷಿಸುವAತಹ ಪ್ರಬುದ್ಧ ಪ್ರಜೆಗಳಾಗಿ ಪ್ರತಿಯೊಬ್ಬರು ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.