Call Us Now
+91 94482 84602
Email Us
info@rashtrotthana.org

It’s a ‘Golden Era’ at Rashtrotthana Yoga

The golden bells are resonating the legacy of Rashtrotthana Yoga as it has reached a milestone of 50 years. Rashtrotthana Yogic Sciences and Research Institute has accomplished 50 successful years in nurturing the health and sustainability of the society through its wide spectrum of unique activities. On this joyous occasion and as we celebrated International Day of Yoga recently, here is a look into the history of Yoga, its importance and the gamut of Rashtrotthana Yoga.

Yoga is an epitome of knowledge with a history of thousands of years. Yoga is a science that unfolds the infinite potentials of the human body, mind and soul. Yoga is a spiritual discipline which is an art, as well as a science that helps a spiritual aspirant to ultimately unite his individual soul (Jeevatma) with the supreme soul (Paramatma).

Yoga through the ages

  • Rigveda, the first literature of the human race mentions the word ‘Kshema’ along with Yoga which refers to harmony and peace. Yoga has always been regarded as one of the six systems of Vedic philosophy. The great pioneers in Yoga belong to the early Vedic age such as Vasishta, Yajnavalkya, Jaigishavya.
  • Post Vedic literatures such as Upanishads, speak about Yoga. It describes Yoga as-
    Na tasya rogo na jara na mrityu
    Praptasya Yogagnimayam shareeram ||
    “No sickness nor old age nor death can capture a body made from the fire of Yoga”. (Shwethashvatara Upanishad 2-12).
    Yajnavalkya smriti describes Vedic Mantras along with the Yogic practices such as Asana and Pranayama.
    Maitri Upanishad includes more specific references to the 6 Angas or limbs of Yoga.
  • Yoga in the Indus Valley Civilization
    The Indus valley civilization dates back to 3300B.C. to 1800 B.C. The archaeological surveys undertaken in 1921-22, provides evidence for the practice of Yoga in the ancient civilization. One of its famous seals depicts a male figure seated in the lotus position surrounded by animals. Evidence suggests that it is Lord Pashupathi, a form of Lord Shiva.
  • Patanjali’s Yoga Sutras
    Yogena chittasya padena vacham
    Malam sharirasya cha vaidyakena |
    Yopakarottam pravaram muneenam
    Patanjalim pranjali ranatosmi ||

    Maharshi Patanjali, who is known as the father of Yoga removes the impurities of mind through Yoga, of speech through grammar and of the body through medicine.
    Yoga already existed in this universe in various forms. But, it was too diversified and complex for anyone to understand in any meaningful way. So, Maharshi Patanjali assimilated and included all the aspects in a certain form called ‘Yogasutras’.
    Sage Patanjali in the Yogasutra has systematised all the available Yoga doctrines in 195 formulas spread over four chapters which are Samadhipaada (51 sutras), Saadhanapaada (55 sutras), Vibhutipaada (55 sutras), Kaivalyapaada (34 sutras).
  • Yoga in Bhagavadgita
    The sacred scripture Bhagavadgita defines Yoga as ‘Yogaha karmasu kaushalam’ which means that skilful performance of actions is Yoga.
  • Yoga in the Modern India
    If we glance through the pages of history we find numerous illustrations where great sages, monks have practised, preached and propagated Yoga. Swami Vivekananda introduced Yoga to the western world through his address at the World Religious Parliament at Chicago. Sri Aurobindo was the founder of integral Yoga.Sri Ramana Maharshi was the peerless master of Jnana Yoga. Today, Ramanashram is a place for pilgrimage for practitioners of Yoga and other Indian spiritual traditions.Sri B K S Iyengar is the most celebrated modern yogi. The yogic scholars book. ‘Light on Yoga’ demonstrates hundreds of Yoga postures.Swami Rama, Neem Karoli Baba, Maharshi ಂahesh Yogi, Krishna Pattabhi Jois, Paramahamsa YoganandaTirumalai Krishnamacharya and thousands of great personalities have created a legacy of Yoga in India and have ignited the spark of Yoga in the human consciousness so that it shines beyond the dawn.

Rashtrotthana Yogic Sciences and Research Institute

Healthy society is possible only through healthy individuals. With this philosophy, Rashtrotthana started its Yoga activities in 1972. Late Sri Ajith Kumar, Karyakarta of RSS took the initiative to train the teachers for this purpose.

Presently Yoga classes are conducted in 16 centres across Bangalore and 1 centre in Davangere. There are 150 Yoga instructors and more than 3000 people are beneficiaries of Rashtrotthana Yoga Centre.

Rashtrotthana Yogic Sciences and Research Institute also conducts monthly lecture series on various topics to promote health awareness among the public. It also conducts Yoga therapy classes thereby to cure various ailments and disorders.

ರಾಷ್ಟ್ರೋತ್ಥಾನ ಯೋಗಕ್ಕೆ ಸುವರ್ಣ ಸಂಭ್ರಮ

ಯೋಗವು ಸಾವಿರಾರು ವರ್ಷಗಳ ಇತಿಹಾಸವುಳ್ಳ ಜ್ಞಾನಭಂಡಾರ. ಸಾಮಾನ್ಯವಾಗಿ ಯೋಗವೆಂದರೆ ತಿರುಗುವ, ಬಾಗುವ, ಚಾಚುವ ಮತ್ತು ಉಸಿರಾಟದ ವ್ಯಾಯಾಮವೆಂದು ಜನರು ತಿಳಿದಿದ್ದಾರೆ. ಆದರೆ ಇವೆಲ್ಲ ಮೇಲ್ನೋಟಕ್ಕೆ ಕಂಡುಬರುವ ಸಂಗತಿಗಳು. ನಿಜವಾಗಿಯೂ ಯೋಗ ಎಂದರೆ ವ್ಯಕ್ತಿಯ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೊರಹೊಮ್ಮಿಸುವ ಒಂದು ವಿಜ್ಞಾನ.

ಯೋಗ ಎಂಬ ಶಬ್ದವನ್ನು ಬೇರೆ ಬೇರೆ ಅರ್ಥಗಳನ್ನು ಅನ್ವಯಿಸಿ ಉಪಯೋಗಿಸುತ್ತಾರೆ. ‘ಯುಜ್ ಸಮಾಧೌ’ ಎಂಬ ಧಾತುರೂಪವನ್ನು ಅನ್ವಯಿಸಿದಾಗ ಅದು ‘ಮನಸ್ಸಿನ ಏಕಾಗ್ರತೆ’ ಎಂಬ ಅರ್ಥವನ್ನು ನೀಡುತ್ತದೆ. ‘ಯುಜಿರ್ ಯೋಗೇ’ ಎಂಬ ಧಾತುರೂಪವನ್ನು ಅನ್ವಯಿಸಿದಾಗ ಅದು ಒಂದರಲ್ಲಿ ಇನ್ನೊಂದು ಲೀನವಾಗುವುದು ಎಂಬ ಅರ್ಥವನ್ನು ನೀಡುತ್ತದೆ. ಈ ಎರಡು ಭಾಗಗಳನ್ನು ಅನ್ವಯಿಸಿ ನೋಡಿದಾಗ ಯೋಗ ಎಂಬ ಶಬ್ದಕ್ಕೆ ಸಾಧಕನು ತನ್ನ ಆತ್ಮವನ್ನು ಪರಮಾತ್ಮನ ಜೊತೆ ಒಂದಾಗಿಸುವ ಆಧ್ಯಾತ್ಮಿಕ ಅಭಿಲಾಷೆಯನ್ನು ಈಡೇರಿಸಿಕೊಳ್ಳಲು ಸಹಾಯವಾಗುವ ಒಂದು ವೈಜ್ಞಾನಿಕ ಕಲೆ ಎಂದು ಅರ್ಥೈಸಬಹುದು.

ಸಾಮಾನ್ಯವಾಗಿ ಯೋಗ ಎಂಬ ಈ ಶಬ್ದವನ್ನು ಆಧ್ಯಾತ್ಮಿಕ ಸಂಯಮ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ.

ಭಾರತೀಯ ಯೋಗ ಪರಂಪರೆ:

ಆದಿಯೋಗಿ ಶಿವ: ಶಿವನನ್ನು ಆದಿಯೋಗಿ – ಯೋಗ ಪ್ರವರ್ತಕ ಎಂದೇ ಗುರುತಿಸಿ ಪೂಜಿಸಲಾಗುತ್ತದೆ. ಸಪ್ತರ್ಷಿಗಳಿಗೆ ಶಿವನು ಕೇದಾರನಾಥದ ಬಳಿಯಿರುವ ಕಾಂತಿ ಸರೋವರದ ಸಮೀಪ ಯೋಗವನ್ನು ಉಪದೇಶಿಸಿದ; ಪ್ರತಿಯೊಬ್ಬ ಋಷಿಯೂ ಯೋಗದ ಒಂದೊಂದು ಮಾರ್ಗವನ್ನು ಕಲಿತು ಪ್ರಪಂಚದ ವಿಭಿನ್ನ ಭಾಗಗಳಲ್ಲಿ ಅದನ್ನು ಪ್ರಚುರಪಡಿಸಿದರು ಎಂಬ ನಂಬಿಕೆಯಿದೆ.

ಯೋಗೇಶ್ವರ ಶ್ರೀಕೃಷ್ಣ: ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಯೋಗದ ವಿವಿಧ ಮಾರ್ಗಗಳ ಬಗ್ಗೆ ವಿವರವಾಗಿ ಚರ್ಚಿಸಿದ್ದಾನೆ. “ಓ ಅರ್ಜುನ, ನಾನು ಯೋಗವನ್ನು ಕಲ್ಪದ ಆರಂಭದಲ್ಲಿ ಸೂರ್ಯದೇವನಿಗೆ ತಿಳಿಸಿದ್ದೆ, ಸೂರ್ಯನು ಇದನ್ನು ತನ್ನ ಮಗ ಮನುವಿಗೆ ಹೇಳಿಕೊಟ್ಟನು. ಮನುವು ಇಕ್ಷ್ವಾಕುವಿಗೆ ತಿಳಿಸಿದನು. ಹೀಗೆಯೇ ಇದು ರಾಜರ್ಷಿಗಳಿಗೆ ಪಾರಂಪರಿಕವಾಗಿ ತಿಳಿಯುತ್ತಿತ್ತು. ಆದರೆ ಕಾಲಕ್ರಮೇಣ ಈ ನಮ್ಮ ಭೂಮಿಯಲ್ಲಿ ಯೋಗವಿಜ್ಞಾನವು ನಶಿಸಿತು. ಈಗ ನಾನು ಆ ಜ್ಞಾನವನ್ನು ನಿನ್ನ ಒಳಿತಿಗಾಗಿ ಉಪದೇಶಿಸುತ್ತಿದ್ದೇನೆ.” ಎಂದು ಶ್ರೀಕೃಷ್ಣ ಹೇಳಿದ್ದಾನೆ.

ವೇದಗಳಲ್ಲಿ ಯೋಗ: ಋಗ್ವೇದದಲ್ಲಿ ಯೋಗಕ್ಕೆ ಕ್ಷೇಮ ಎಂಬ ಪದವನ್ನೂ ಬಳಸಲಾಗಿದೆ. ಇಲ್ಲಿ ಕ್ಷೇಮ ಎಂದರೆ ಶಾಂತಿ ಮತ್ತು ಸಾಮರಸ್ಯ ಎಂದು ಅರ್ಥ. ಅಥರ್ವವೇದದಲ್ಲಿ ಯೋಗಕ್ಕೆ ಸಂಬಂಧಪಟ್ಟ ಬಹಳಷ್ಟು ಸಂಗತಿಗಳ ಉಲ್ಲೇಖವಿದೆ. ಇದರಲ್ಲಿ ಅಷ್ಟಯೋಗ, ಷಟ್ ಯೋಗ, ಬ್ರಹ್ಮಯೋಗ ಮತ್ತು ಕ್ಷಾತ್ರಯೋಗಗಳ ಪ್ರಸ್ತಾವವಿದೆ.

ಯೋಗವಾಸಿಷ್ಠ: ಶ್ರೀರಾಮ ಮತ್ತು ವಸಿಷ್ಠ ಮಹರ್ಷಿಗಳ ನಡುವಿನ ಸಂಭಾಷಣೆಯಾದ ಯೋಗವಾಸಿಷ್ಠದಲ್ಲಿ ಪರಬ್ರಹ್ಮನ ಸ್ವರೂಪ, ಅದ್ವಿತೀಯವಾದ ಪರಮಾತ್ಮಪ್ರಜ್ಞೆ ಮತ್ತು ಆತ್ಮಾವಲೋಕನದ ವಿವಿಧ ಬಗೆಗಳನ್ನು ವಿವರಿಸಲಾಗಿದೆ.

ಮಹರ್ಷಿ ಪತಂಜಲಿ: ಯೋಗವು ಮೊದಲೇ ಇದ್ದರೂ ಸಹ ವಿಭಿನ್ನ ದಿಕ್ಕುಗಳಲ್ಲಿ ಹರಿದು, ಸಂಕೀರ್ಣಗೊಂಡು ಯಾರಿಗೂ ಅರ್ಥವಾಗದಂತೆ ಕಗ್ಗಂಟಾಗಿತ್ತು. ಇಂತಹ ಯೋಗವನ್ನು ಪತಂಜಲಿ ಮಹರ್ಷಿಯು ಜೀರ್ಣಿಸಿಕೊಂಡು ಅದರ ಎಲ್ಲಾ ಪ್ರಕಾರಗಳೂ ಒಳಗೊಳ್ಳುವಂತೆ ಅರ್ಥಪೂರ್ಣವಾಗಿ ವಿಂಗಡಿಸಿ ಯೋಗಸೂತ್ರಗಳನ್ನು ರಚಿಸಿದ್ದಾರೆ.

ಸಿಂಧೂ ಕಣಿವೆಯ ನಾಗರಿಕತೆಯಲ್ಲಿ ಯೋಗ: 1921-22ರಲ್ಲಿ ಈಗಿನ ಪಾಕಿಸ್ತಾನದ ಪ್ರದೇಶದಲ್ಲಿ ನಡೆದ ಪುರಾತತ್ವ ಸರ್ವೇಕ್ಷಣೆಯಲ್ಲಿ ಅತಿ ಪ್ರಸಿದ್ಧ ಮುದ್ರೆಗಳಲ್ಲಿ ಪದ್ಮಾಸನದಲ್ಲಿ ಕುಳಿತ ಪಶುಪತಿನಾಥನ ಆಕೃತಿ ಸಿಕ್ಕಿತು. ಇದು ಸಿಂಧೂ ಕಣಿವೆ ನಾಗರಿಕತೆಯ ಕಾಲದ್ದು ಎನ್ನಲಾಗಿದೆ.

ಆಧುನಿಕ ಭಾರತದಲ್ಲಿ ಯೋಗ:

ಭಾರತೀಯ ಇತಿಹಾಸವನ್ನು ಗಮನಿಸಿದರೆ ಅನೇಕ ಸಾಧು-ಸಂತರು, ಸನ್ಯಾಸಿಗಳು, ಸಮಾಜ ಸುಧಾರಕರು ಯೋಗದ ಪಥವನ್ನು ಅನುಸರಿಸಿದ ಉದಾಹರಣೆಗಳು ಸಿಗುತ್ತವೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತ್ವದ ಪಾತ್ರವಹಿಸಿದ ಶ್ರೀ ಅರವಿಂದರು ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡು ಅತ್ಯುನ್ನತ ಹಂತದ ಯೌಗಿಕ ಅನುಭವಗಳನ್ನು ಪಡೆದರು. 1910ರಲ್ಲಿ ಆಶ್ರಮವೊಂದನ್ನು ಸ್ಥಾಪಿಸಿದರು. ಶ್ರೀ ಅರವಿಂದರೇ ಹೆಸರಿಸಿರುವ ‘ಪೂರ್ಣಯೋಗ’ದ ಅಭ್ಯಾಸವು ಅಸ್ತಿತ್ವದ ಎರಡು ತುದಿಗಳಾದ ಚೇತನ ಮತ್ತು ಅಚೇತನಗಳ ಸಂಯೋಜನೆಗೆ ಸಹಾಯಕವಾಗುತ್ತವೆ.

ಜ್ಞಾನಯೋಗದ ಮಹೋನ್ನತ ಗುರುಗಳೆಂದು ರಮಣ ಮಹರ್ಷಿಗಳನ್ನು ಗೌರವಿಸಲಾಗಿದೆ. ಅವರು ‘ನಾನು ಯಾರು? ಎಂಬುದರ ಕುರಿತಾಗಿ ಧ್ಯಾನಿಸು’ ಎಂಬ ಅತ್ಯಂತ ಸರಳ ಹಾಗೂ ನೇರ ಉಪದೇಶವನ್ನು ಮಾಡುತ್ತಿದ್ದರು. ಇಂದು ರಮಣಾಶ್ರಮವು ಭಾರತೀಯ ಆಧ್ಯಾತ್ಮಿಕ ಹಾಗೂ ಯೋಗ ಸಾಧಕರ ತೀರ್ಥಕ್ಷೇತ್ರವಾಗಿದೆ. ಸ್ವಾಮಿ ಕುವಲಯಾನಂದ, ಸ್ವಾಮಿ ಶಿವಾನಂದ, ತಿರುಮಲೈ ಕೃಷ್ಣಮಾಚಾರ್ಯ, ಮಲ್ಲಾಡಿ ರಾಘವೇಂದ್ರ ಸ್ವಾಮಿಜೀ, ಪರಮಹಂಸ ಯೋಗಾನಂದ, ನಿಸರ್ಗದತ್ತ ಮಹಾರಾಜ್, ಬಿಷ್ಣು ಘೋಷ್, ಕೃಷ್ಣ ಪಟ್ಟಾಭಿ ಜೋಯಿಸ್, ಮಹರ್ಷಿ ಮಹೇಶ್ ಯೋಗಿ, ಬಿ. ಕೆ. ಎಸ್. ಅಯ್ಯಂಗಾರ್ ಮುಂತಾದವರು ಯೋಗಮಾರ್ಗದಲ್ಲಿ ಸಾಗಿ ಮಹತ್ಸಾಧನೆಗೈದವರಾಗಿದ್ದಾರೆ. ಪ್ರತಿಯೊಬ್ಬನೂ ತನ್ನ ಮೋಕ್ಷದ ಜೊತೆಗೆ ಜಗತ್ತಿನ ಹಿತವನ್ನೂ ಸಾಧಿಸುವ ಜೀವನದ ಧ್ಯೇಯವು ಯೋಗಕ್ಕೆ ಚೆನ್ನಾಗಿ ಒಪ್ಪುತ್ತದೆ. ಇದನ್ನೇ ‘ಸಮಾಜ ಯೋಗ’ ಎಂದು ಖ್ಯಾತ ಚಿಂತಕ ದಿವಂಗತ ಹೊ. ವೆ. ಶೇಷಾದ್ರಿ ಕರೆದಿದ್ದಾರೆ.

ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆ:

ರಾಷ್ಟೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯು 1972ರಲ್ಲಿ ಆರಂಭಗೊಂಡಿತು. ಕಳೆದ 50 ವರ್ಷಗಳಿಂದ ಯೋಗ ಸಂಬಂಧಿತ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುವ ರಾಷ್ಟ್ರೋತ್ಥಾನ ಯೋಗ ವಿಭಾಗವು ಒಟ್ಟು 17 ಯೋಗಕೇಂದ್ರಗಳನ್ನು ನಡೆಸುತ್ತಿದೆ. ಪ್ರತಿನಿತ್ಯ ಬೇರೆ ಬೇರೆ ಅವಧಿಗಳಲ್ಲಿ, ಬೇರೆ ಬೇರೆ ಸ್ತರಗಳಲ್ಲಿ ತರಗತಿಗಳು (ಪ್ರವೇಶ, ಅಭ್ಯಾಸ, ಪ್ರಗತ, ಯೋಗ ಚಿಕಿತ್ಸೆ, ವಾರಾಂತ್ಯದ ಯೋಗ ತರಗತಿ, ಮಕ್ಕಳ ಯೋಗ ತರಗತಿಗಳು) ನಡೆಯುತ್ತಿವೆ. ಪ್ರಸ್ತುತ 3,000 ಜನ ಯೋಗಬಂಧುಗಳು ನಿತ್ಯ ಯೋಗಾಭ್ಯಾಸ ಮಾಡುತ್ತಿದ್ದಾರೆ. ಪ್ರತಿದಿನ 150 ತರಗತಿಗಳು ನಡೆಯುತ್ತಿವೆ. 130 ಜನ ಗೌರವಶಿಕ್ಷಕರು ಮತ್ತು 22 ಜನ ಪೂರ್ಣಾವಧಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.