Call Us Now
+91 94482 84602

Jagadguru Sri Sri Vidhushekharabharati Mahaswamiji visited Rashtrotthana

Bengaluru, June 29: Jagadguru Sri Sri Vidhushekharabharati Mahaswamiji of Dakshinamnaya Sringeri Sri Sharada Peeth, gave a visit to the head office of Rashtrotthana Parishat herein Kempagowda Nagar, appreciated the social welfare activities undertaken and blessed all the staff and volunteers.

ರಾಷ್ಟ್ರೋತ‍್ಥಾನಕ್ಕೆ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳ ಭೇಟಿ
ಬೆಂಗಳೂರು, ಜೂನ್ 29, ಬೆಂಗಳೂರು: ದಕ್ಷಿಣಾಮ್ನಾಯ ಶೃಂಗೇರಿ ಶ್ರೀಶಾರದಾಪೀಠದ 37ನೆಯ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳು ಬುಧವಾರ ಕೇಶವಶಿಲ್ಪದ ರಾಷ್ಟ್ರೋತ್ಥಾನ ಪರಿಷತ್ತಿಗೆ ಆಗಮಿಸಿದರು. ಸ್ವಾಮೀಜಿಗಳನ್ನು ಪೂರ್ಣಕುಂಭದೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಆಶೀರ್ವಚನ ನೀಡಿದ ಸ್ವಾಮೀಜಿ, ಸನಾತನಧರ್ಮ ಅವಿನಾಶಿಯಾದದ್ದು. ಯಾವುದೇ ವ್ಯಕ್ತಿ ಈ ಧರ್ಮದಿಂದ ಹೊರಹೋಗುತ್ತೇನೆ ಎಂಬುದು ಆತನ ಭ್ರಮೆ. ನಮ್ಮ ರಕ್ತದಲ್ಲಿ ಮಿಳಿತವಾಗಿರುವ ಸನಾತನತೆಯನ್ನು ಹೋಗಲಾಡಿಸುವುದು ಅಸಾಧ್ಯ ಎಂದು ತಿಳಿಸಿದರು. ರಾಷ್ಟ್ರೋತ್ಥಾನ ಪರಿಷತ್ತಿನ ಸಮಾಜಹಿತ ಕಾರ್ಯಗಳನ್ನು ಶ್ಲಾಘಿಸಿದ ಅವರು, ದೇಶಕ್ಕಾಗಿ ಬದುಕುವ ಪ್ರತಿಜ್ಞೆಯನ್ನು ಪ್ರತಿಯೊಬ್ಬ ವ್ಯಕ್ತಿಯೂ ಮಾಡಬೇಕು. ಇದು ನನ್ನ ದೇಶ ಎಂಬ ಅಭಿಮಾನ ಮತ್ತು ಜವಾಬ್ದಾರಿ ಪ್ರತಿಯೊಬ್ಬರಲ್ಲೂ ಒಡಮೂಡಬೇಕು. ಆಗ ಮಾತ್ರ ಎಲ್ಲ ಸಂಘರ್ಷಗಳ ಹೊರತಾಗಿ ರಾಷ್ಟ್ರನಿರ್ಮಿತಿಯ ಕಾರ್ಯ ಸಫಲವಾಗಲು ಸಾಧ್ಯ ಎಂದು ನುಡಿದರು.
ಶೃಂಗೇರಿ ಶಾರದಾಪೀಠದ ಆಡಳಿತಾಧಿಕಾರಿಗಳಾದ ಡಾ. ವಿ. ಆರ್. ಗೌರಿಶಂಕರ್ ಮಾತನಾಡಿ, ಆದಿಶಂಕರಾಚಾರ್ಯರು ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಯಾತ್ರೆ ನಡೆಸಿ ಸನಾತನಧರ್ಮದ ಉಳಿವಿಗಾಗಿ ಹೋರಾಡಿದ್ದರು. ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಆಮ್ನಾಯ ಪೀಠಗಳನ್ನು ಸ್ಥಾಪಿಸುವ ಮೂಲಕ ಇಡೀ ರಾಷ್ಟ್ರ ಒಂದು ಎಂಬ ಸಂದೇಶವನ್ನು ಪ್ರಪಂಚಕ್ಕೆ ನೀಡಿದ್ದರು. ಅವರ ಆದೇಶದಂತೆ ಶಾರದಾಪೀಠ ಅನೇಕ ರಾಷ್ಟ್ರಹಿತ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ. ಇಂದು ಸನಾತನಧರ್ಮದ ಶ್ರೇಷ್ಠತೆಯನ್ನು ಸಾರುವ ಅನೇಕ ಕಾರ್ಯಕ್ರಮಗಳು ಶ್ರೀಗಳ ಅನುಗ್ರಹದಿಂದ ನೆರವೇರುತ್ತಿವೆ. ರಾಷ್ಟ್ರೋತ್ಥಾನ ಪರಿಷತ್ ಆದಿಶಂಕರರ ಆಣತಿಯಂತೆಯೇ ದೇಶ ಮತ್ತು ಸಮಾಜದ ಉನ್ನತಿಗಾಗಿ ಅನೇಕ ಮುಖಗಳಲ್ಲಿ ಪ್ರಯತ್ನಿಸುತ್ತಿದೆ. ಶಾರದಾದೇವಿಯ ಮತ್ತು ಶ್ರೀಗಳ ಅನುಗ್ರಹದಿಂದ ಇದರ ಕಾರ್ಯಚಟುವಟಿಕೆಗಳ ವ್ಯಾಪ್ತಿ ಇನ್ನಷ್ಟು ವಿಸ್ತರಿಸಲಿ ಎಂದು ಹಾರೈಸಿದರು.
ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ದಿನೇಶ್ ಹೆಗ್ಡೆಯವರು ಸಂಸ್ಥೆಯ ಪರಿಚಯ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ನಾಡೋಜ ಎಸ್. ಆರ್. ರಾಮಸ್ವಾಮಿ, ಖಜಾಂಚಿ ಶ್ರೀ ಕೆ. ಎಸ್. ನಾರಾಯಣ, ಪರಿಷತ್ತಿನ ಕಾರ್ಯಕರ್ತರು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishat
https://www.instagram.com/rashtrotthanaparishat/
https://twitter.com/Rashtrotthana_P

Rashtrotthana #RashtrotthanaParishat #SringeriJagadguru #Shankaracharya #VidhushekharaBharatiMahaswamiji