
Rashtrotthana Sahitya, a prime wing of Rashtrotthana Parishat was honoured by Kannada Pustaka Pradhikara, Bengaluru for its phenomenal service in the field of literature for 5 decades.
Rashtrotthana sahitya was felicitated at the Publisher’s Second Conference organised by Kannada Pustaka Pradhikara at Maharaja College, Mysore on 15th of March, recognising its exceptional contribution to the Kannada literary world and for successfully continuing the legacy of Kannada literature.
The honours and felicitations help the organisation to enhance their potential in their vision of strengthening the roots of Kannada literature and enriching the oceanic heritage of the literary world.
Book your titles here – https://www.sahityabooks.com/
—
ರಾಷ್ಟ್ರೋತ್ಥಾನ ಸಾಹಿತ್ಯಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಪುರಸ್ಕಾರ
ರಾಷ್ಟ್ರೋತ್ಥಾನ ಪರಿಷತ್ತಿನ ಮಹತ್ತ್ವದ ಯೋಜನೆಗಳಲ್ಲಿ ಒಂದಾದ ರಾಷ್ಟ್ರೋತ್ಥಾನ ಸಾಹಿತ್ಯವು ಕಳೆದ ಐದು ದಶಕಗಳಿಂದ ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಸಲ್ಲಿಸಿದ ಅನನ್ಯ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರವು ಪುರಸ್ಕರಿಸಿದೆ.
ಕನ್ನಡ ಪುಸ್ತಕ ಪ್ರಾಧಿಕಾರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಮಾರ್ಚ್ 15ರಂದು ಆಯೋಜಿಸಿದ್ದ ಪ್ರಕಾಶಕರ ದ್ವಿತೀಯ ಸಮ್ಮೇಳನದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಸಲ್ಲಿಸಿದ ಅನರ್ಘ್ಯ ಸೇವೆಗಾಗಿ ರಾಷ್ಟ್ರೋತ್ಥಾನ ಸಾಹಿತ್ಯಕ್ಕೆ ಪುರಸ್ಕಾರವನ್ನು ನೀಡಿ ಗೌರವಿಸಿದೆ. ರಾಷ್ಟ್ರೋತ್ಥಾನ ಸಾಹಿತ್ಯಕ್ಕೆ ಲಭಿಸುವ ಪ್ರಶಸ್ತಿ ಮತ್ತು ಗೌರವ ಪುರಸ್ಕಾರಗಳು ಸಂಸ್ಥೆಯು ಗುರಿ ಮತ್ತು ಧ್ಯೇಯಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತದೆ ಹಾಗೂ ಸಾಹಿತ್ಯ ಜಗತ್ತಿನ ಶ್ರೇಷ್ಠ ಪರಂಪರೆಯನ್ನು ಮುಂದುವರೆಸಲು, ಸಾಹಿತ್ಯದ ಬೇರನ್ನು ಸದೃಢಗೊಳಿಸಲು ಪ್ರಶಸ್ತಿಗಳು ಉತ್ತೇಜನದ ಮೆಟ್ಟಿಲುಗಳಾಗಿವೆ.
ಪುಸ್ತಕಗಳನ್ನು ಇಲ್ಲಿ ಖರೀದಿಸಬಹುದು – https://www.sahityabooks.com/