Call Us Now
+91 94482 84602
Email Us
info@rashtrotthana.org

ದೇವನೂರಿನ ಶ್ರೀ ಲಕ್ಷ್ಮೀಶ ವಿದ್ಯಾನಿಕೇತನದಲ್ಲಿ ಶಿಕ್ಷಕರ ದಿನಾಚರಣೆ

ಚಿಕ್ಕಮಗಳೂರು ಜಿಲ್ಲೆಯ ದೇವನೂರಿನ ಶ್ರೀ ಲಕ್ಷ್ಮೀಶ ವಿದ್ಯಾನಿಕೇತನದಲ್ಲಿ ಇಂದು (ಸೆಪ್ಟೆಂಬರ್ 5) ಶಿಕ್ಷಕರ ದಿನಾಚರಣೆ ನಡೆಯಿತು. ಪ್ರೌಢಶಾಲಾ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದರು. ಸ್ಥಳೀಯ ಕಾರೇಹಳ್ಳಿ ಸರ್ಕಾರೀ ಶಾಲೆಯ ನಿವೃತ್ತ ಶಿಕ್ಷಕರಾದ ಚನ್ನಬಸಪ್ಪ ಹಾಗೂ ದೇವನೂರು ಪಿಯು ಕಾಲೇಜಿನ ಪ್ರಾಂಶುಪಾಲರಾದ ಪರಮೇಶ್ವರಪ್ಪ ಅವರು ಅತಿಥಿಗಳಾಗಿ ಆಗಮಿಸಿ ಗುರುವಿನ ಮಹತ್ವವನ್ನು ತಿಳಿಸಿಕೊಟ್ಟರು.