Call Us Now
+91 94482 84602
Email Us
info@rashtrotthana.org

ಸಾವರ್ಕರ್ ಜಯಂತಿ (ಮೇ 28)

ತನ್ನ ಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಸ್ವಾತಂತ್ರ್ಯಯೋಧ, ಪ್ರಖರ ಲೇಖಕ, ಮಹಾನ್ ವಾಗ್ಮಿ, ತತ್ವಶಾಸ್ತ್ರಜ್ಞ, ಮತ್ತು ಸಮಾಜಸೇವಕ ವಿನಾಯಕ ದಾಮೋದರ ಸಾವರ್ಕರ್. ಆತ ತನ್ನ ಕ್ರಾಂತಿಕಾರಿ ನಡೆಗಳಿಂದ ಬ್ರಿಟಿಷರಿಗೆ ಮೈನಡುಕ ಹುಟ್ಟಿಸಿದ ಅದ್ವಿತೀಯ ದೇಶಪ್ರೇಮಿ. ಇಂದು ಆ ಮಹಾಪುರುಷನ ಜನ್ಮದಿನ.
ಸಾವರ್ಕರ್ 1883ರ ಮೇ 28ರಂದು ಮಹಾರಾಷ್ಟ್ರದ ನಾಸಿಕ ಸಮೀಪದ ಭಾಗೂರು ಎಂಬಲ್ಲಿ ಜನಿಸಿದರು. ವಿದ್ಯಾರ್ಥಿಯಾಗಿದ್ದಾಗ ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿದ್ದ ಅವರು ಅನಂತರ ತಿಲಕರ ಸ್ವರಾಜ್ಯ ಪಕ್ಷದ ಸದಸ್ಯರಾದರು. ಲಂಡನ್ನಿನಲ್ಲಿದ್ದಾಗ ‘ಸ್ವತಂತ್ರ ಭಾರತ ಸಮಾಜ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. 1908ರಲ್ಲಿ ‘ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ-1857’ ಎಂಬ ಪುಸ್ತಕವನ್ನು ಬರೆದಾಗ ಬ್ರಿಟಿಷ್ ಸರಕಾರ ತಕ್ಷಣವೇ ಭಾರತ ಮತ್ತು ಬ್ರಿಟನ್ನುಗಳಲ್ಲಿ ಅದರ ಪ್ರಕಾಶನವನ್ನು ನಿರ್ಬಂಧಿಸಿತು. ಆದರೆ ಭಿಕಾಜಿ ಕಾಮಾ ಹಾಲೆಂಡಿನಲ್ಲಿ ಅದನ್ನು ಗುಪ್ತವಾಗಿ ಪ್ರಕಾಶಿಸಿ, ಅನಂತರ ಅದು ಭಾರತೀಯ ಕ್ರಾಂತಿಕಾರಿಗಳಿಗೆ ತಲುಪಿ ಹೋರಾಟಕ್ಕೆ ಹೊಸ ಶಕ್ತಿಯನ್ನೂ, ಸ್ಪೂರ್ತಿಯನ್ನೂ ನೀಡಿತು.
ಆಗಿನ್ನೂ 27ರ ತರುಣನಾಗಿದ್ದ ಸಾವರ್ಕರ್ ಗೆ ಕೊಲೆ ಆಪಾದನೆ ಹೊರಿಸಿ ಕುಪ್ರಸಿದ್ಧ ಅಂಡಮಾನಿನ ಜೈಲಿನಲ್ಲಿ 50 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಯಿತು. 12 ಮೇ 1921ರಂದು ಸಾವರ್ಕರರನ್ನು ರತ್ನಗಿರಿ ಜೈಲಿಗೆ, ಮತ್ತೆ ಅಲ್ಲಿಂದ ಯೆರವಡಾ ಜೈಲಿಗೆ ಸಾಗಿಸಲಾಯಿತು. ರತ್ನಗಿರಿಯ ಜೈಲಿನಲ್ಲಿ ಬ್ರಿಟಿಷರ ಆ ಚಿತ್ರಹಿಂಸೆಯ ನಡುವೆಯೂ ಅವರು ‘ಹಿಂದುತ್ವ’ ಕೃತಿ ಬರೆದು ಹೋರಾಟಗಾರರಿಗೆ ಪ್ರೇರಣೆ ನೀಡಿದರು.
ಸ್ವಾತಂತ್ರ್ಯ ಹೋರಾಟದ ಆ ಸಂಕಷ್ಟದ ದಿನಗಳಲ್ಲೂ ಅವರು ಕಮಲಾ, ನನ್ನ ಜೀವಾವಧಿ ಶಿಕ್ಷೆ, ಕಾಳಾ ಪಾಣಿ, ಹಿಂದೂ ಪದಪಾದಶಾಹಿ, ಮಾಪಿಳ್ಳೆಗಳ ಬಂದ್, ಗಾಂಧೀ ಗೊಂದಲ ಮುಂತಾದ ಕೃತಿಗಳ ರಚನೆ ಮಾಡಿ ಜನಮಾನಸದಲ್ಲಿ ದೇಶಪ್ರೇಮವನ್ನು ಜಾಗೃತಗೊಳಿಸಿದರು. ಅಸ್ಪೃಶ್ಯರಿಗೆ ದೇವಾಲಯ ಪ್ರವೇಶ ನಿಷಿದ್ಧವಾಗಿದ್ದ ಆ ಕಾಲದಲ್ಲಿ ತಾನೇ ಮುಂದೆ ನಿಂತು ಅವರಿಗೆ ದೇವಾಲಯ ಪ್ರವೇಶಕ್ಕೆ ದಾರಿ ಮಾಡಿಕೊಟ್ಟು ಪತಿತ ಪಾವನ ಮಂದಿರವನ್ನು ಸ್ಥಾಪಿಸಿದರು. ಮದನಮೋಹನ ಮಾಳವೀಯರು ಸ್ಥಾಪಿಸಿದ ‘ಹಿಂದೂ ಮಹಾಸಭಾ’ ಸಂಘಟನೆಗೆ ಅಧ್ಯಕ್ಷರಾಗಿ ‘ಹಿಂದುತ್ವ’ ಪರಿಕಲ್ಪನೆಗೆ ಹೊಸ ವ್ಯಾಖ್ಯಾನವನ್ನೂ, ಬಲವನ್ನೂ ನೀಡಿದರು.
ಹೀಗೆ ತಮ್ಮ ಜೀವಿತದುದ್ದಕ್ಕೂ ಸವಾಲುಗಳಿಗೆ ಹೆದರದೆ, ಕಷ್ಟಗಳಿಂದ ಹಿಂದೆ ಸರಿಯದೆ, ಆರೋಪ-ಅವಮಾನಗಳಿಂದ ಧೃತಿಗೆಡದೆ ದೇಶಕ್ಕಾಗಿ ಬದುಕಿದ ಮಹಾನ್ ಚೇತನ ವೀರ ಸಾವರ್ಕರ್. ಆ ಸ್ಪೂರ್ತಿಯ ಕಿಡಿ ನಮ್ಮೊಳಗೂ ದೇಶಾಭಿಮಾನವನ್ನು ಜಾಗೃತಗೊಳಿಸಲಿ. ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಬಲ್ಲ ನಿಷ್ಠೆಯನ್ನೂ, ದೇಶಕ್ಕಾಗಿ ಹೋರಾಡಬಲ್ಲೆನೆಂಬ ಶಕ್ತಿಯನ್ನೂ ಉದ್ದೀಪಿಸಲಿ.

ರಾಷ್ಟ್ರೋತ್ಥಾನ ಸಾಹಿತ್ಯ ಸಾವರ್ಕರ್ ಕುರಿತು 4 ಪುಸ್ತಕಗಳನ್ನು ಪ್ರಕಟಿಸಿದೆ.
ಚಕ್ರವರ್ತಿ ಸೂಲಿಬೆಲೆ ಅವರು ರಚಿಸಿರುವ ‘ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯವೀರ ಸಾವರ್ಕರ್’.
ಕಾಲಾಪಾನಿ ಶಿಕ್ಷೆಯ ಬಗ್ಗೆ ಸಾವರ್ಕರ್ ಅವರು ಬರೆದ ಕೃತಿಯ ಅನುವಾದ ’ಕರಿನೀರ ರೌರವ’.
ಮೋಪ್ಲಾ ದಂಗೆಯ ಕುರಿತು ಸಾವರ್ಕರ್ ಬರೆದ ಕಾದಂಬರಿಯ ಕನ್ನಡಾನುವಾದ ‘ಮೋಪ್ಲಾ ಕಾಂಡ’.
ಸಾವರ್ಕರರು ‘1857-ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂಬ ಕೃತಿಯನ್ನು ಬರೆದಿದ್ದಾರೆ. ಈ ಕುರಿತು ಚಕ್ರವರ್ತಿ ಸೂಲಿಬೆಲೆ ಅವರು ಕನ್ನಡದಲ್ಲಿ ಬರೆದ ‘ಸ್ವಾತಂತ್ರ್ಯ ಮಹಾಸಂಗ್ರಾಮ-1857’.

https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishath
https://www.instagram.com/rashtrotthanaparishat/
https://twitter.com/Rashtrotthana_P

Rashtrotthana #RashtrotthanaParishat #RashtrotthanaParishatBengaluru #RashtrotthanaSahitya #VeerSavarkar #savarkar #freedomfighters #chakravartisulibe #RashtrotthanaSahityaBooks