For more information Prashikshana Bharathi click here
2 Day’s Spoken English Workshop
by Prashikshana Bharati @ Rashtrotthana Vidya Kendra, Thanisandra
Bengaluru, Dec 15-16: Prashikshana Bharati, a wing of Rashtrotthana Parishat organised a 2 Day’s Spoken English Workshop for the teachers of Govt. Schools at Rashtrottana Vidya Kendra, Thanisandra.
Sri T S. Basavaraj ji, Convener of Prashikshana Bharati inaugurated the occasion and said “Today’s education system lacks values. Hence, majority of the graduates are heading in criminal and antisocial path. We should implement values in ourselves in order to make life more meaningful. To reach greater heights in life self-confidence is the key factor. In this direction, the New Education Policy of 2021 helps for holistic development in children”.
During the second session, Smt. Revathi Gopinath, Member, State Curriculum Schools Committee, spoke about the concept of ‘Panchamuki Shikshana’ and explained its importance to the teachers in the physical, intellectual, emotional and spiritual growth of students which transforms them as human resource and useful asset to the motherland.
During the 3rd session, Sri Udaya Chandra, Resource Person explained the importance of spoken English through various activities.
On December 16, Resource Person Sri Uday Chandra exclaimed that “A person should carefully listen to the aspects of a language and should create a pro-English environment around him/ her”. The teachers also made a demonstration about the importance of language.
Smt. Jyothi Gudi, Member of Prashikshana Bharati Project Committee was present in the valedictory and wished for further ventures of the institution and for the bright future of students.
21 teachers were the beneficiaries of the workshop.
——————
2 ದಿನಗಳ ಆಂಗ್ಲಭಾಷಾ ಸಂವಹನ ಕಾರ್ಯಕ್ರಮ
ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಥಣಿಸಂದ್ರದಲ್ಲಿ, ಪ್ರಶಿಕ್ಷಣ ಭಾರತಿಯ ವತಿಯಿಂದ
ಬೆಂಗಳೂರು, ಡಿಸೆಂಬರ್ 15-16: ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಥಣಿಸಂದ್ರ ಶಾಲೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಅಡಿಯಲ್ಲಿ ಬರುವ ಪ್ರಶಿಕ್ಷಣ ಭಾರತಿಯ ಪ್ರಕಲ್ಪದ ವತಿಯಿಂದ ಸರ್ಕಾರಿ ಶಾಲಾ ಶಿಕ್ಷಕರಿಗೆ ಎರಡು ದಿನಗಳ ಕಾಲ ಆಂಗ್ಲ ಭಾಷೆಯ ಸಂವಹನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಪ್ರಶಿಕ್ಷಣ ಭಾರತಿ ಪ್ರಕಲ್ಪದ ಸಂಚಾಲಕರಾದ ಶ್ರೀ ಟಿ. ಎಸ್. ಬಸವರಾಜ್ ಜೀಯವರು ಉದ್ಘಾಟಿಸಿದರು. ಅವರು ಮಾತನಾಡುತ್ತಾ ಮೌಲ್ಯಗಳನ್ನು ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ. ಜೀವನದಲ್ಲಿ ಯಶ ಗಳಿಸಲು ಆತ್ಮವಿಶ್ವಾಸ, ಪರಮಾತ್ಮನಲ್ಲಿ ನಂಬಿಕೆ ಇರಬೇಕು ಎಂದು ಹೇಳಿದರು. ಇಂದು ಅಪರಾಧ ಚಟುವಟಿಕೆಯಲ್ಲಿ ತೊಡಗಿರುವವರು ಶೇಕಡ 80 ಭಾಗ ಪದವಿ ಪಡೆದವರು ಇದ್ದಾರೆ. ಇದನ್ನು ಗಮನಿಸಿದಾಗ ಶಿಕ್ಷಣದ ವ್ಯವಸ್ಥೆಯಲ್ಲಿ ಮೌಲ್ಯಗಳ ಕೊರತೆ ಎದ್ದು ಕಾಣುತ್ತದೆ. ಶಿಕ್ಷಕರುಗಳಲ್ಲಿರುವ ಮಾಲ್ಯಗಳನ್ನು ವಿದ್ಯಾರ್ಥಿ ನೋಡಿ ಅನುಕರಿಸುವುಕ್ಕೆ ಗುರುರಾಜ ಕರ್ಜಗಿಯವರ ನೈಜ ಘಟನೆಯನ್ನು ಹೇಳಿದಾಗ ಅದು ಎಲ್ಲರಿಗೂ ಮನಕಲಕಿತು. ಹಾಗಾಗಿ ಮೆಕಾಲೆ ಶಿಕ್ಷಣ ಪದ್ಧತಿಯಿಂದ ಹೊರಬಂದು 2020ರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡರೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳಣಿಗೆಗೆ ಸಹಾಯಕವಾಗುತ್ತದೆ ಎಂದರು.
ಎರಡನೆಯ ಅವಧಿಯಲ್ಲಿ ರಾಜ್ಯ ಪಠ್ಯಕ್ರಮ ಶಾಲೆಗಳ ಕ್ರಿಯಾ ಸಮಿತಿಯ ಸದಸ್ಯೆಯಾದ ಶ್ರೀಮತಿ ರೇವತಿ ಮಾತಾಜಿಯವರು ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಬರುವ ಪಂಚಮುಖಿ ಶಿಕ್ಷಣದ ಪರಿಕಲ್ಪನೆಯನ್ನು ಶಿಕ್ಷಕರಿಗೆ ಮನದಟ್ಟುಮಾಡಿಸಿದರು. ಮಕ್ಕಳ ಶಾರೀರಿಕ, ಬೌದ್ಧಿಕ, ಮಾನಸಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ವಿಕಾಸಗಳ ಮೂಲಕ ವ್ಯಕ್ತಿ ನಿರ್ಮಾಣ, ತನ್ಮೂಲಕ ಸುಸಂಪನ್ನ ರಾಷ್ಟ್ರನಿರ್ಮಾಣದ ಕಡೆಗೆ ಅವರನ್ನು ತಯಾರು ಮಾಡಬಹುದು ಎಂದು ಹೇಳಿದರು.
ಮೂರನೆಯ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಉದಯ ಚಂದ್ರ ಜೀಯವರು ಸ್ಪೋಕನ್ ಇಂಗ್ಲಿಷ್ ಬಗ್ಗೆ ಹಲವು ಚಟುವಟಿಕೆಗಳ ಮೂಲಕ ಮನದಟ್ಟು ಮಾಡಿಸಿದರು.
ಡಿಸೆಂಬರ್ 16ರಂದು ಶ್ರೀ ಉದಯ ಚಂದ್ರ ಜೀಯವರು ವ್ಯಕ್ತಿಯು ಭಾಷೆಗೆ ಸಂಬಂಧಿಸಿದ ವಿಷಂಯ ಗಳನ್ನು ಶೇಕಡ 80 ಭಾಗ ಆಲಿಸಬೇಕು. 20 ಭಾಗ ಮಾತನಾಡಬೇಕು. ಶಿಕ್ಷಕ ನಿತ್ಯ ವಿದ್ಯಾರ್ಥಿಯಂತೆ ಕಲಿಕೆಯಲ್ಲಿ ತೊಡಗಿರಬೇಕು. ಕುಟುಂಬದಲ್ಲಿ, ಸುತ್ತಮುತ್ತ ಪರಿಸರದಲ್ಲಿ ಇಂಗ್ಲಿಷ್ ಕಲಿಯುವ ವಾತಾವರಣವನ್ನು ಸೃಷ್ಟಿಮಾಡಿಕೊಳ್ಳಬೇಕು. ಸೈಕೋ ಮೆಟ್ರಿಕ್ ಟೆಸ್ಟ್ ಇದರ ಬಗ್ಗೆ ಶಿಕ್ಷಕರನ್ನು ಚಟು ಟಿಕೆಯಲ್ಲಿ ಭಾಗವಹಿಸಲು ಪ್ರೇರಣೆ ನೀಡಲಾಯಿತು. ಇದರಲ್ಲಿ ಶಿಕ್ಷಕರು ತುಂಬ ಸಕ್ರಿಯವಾಗಿ ಪಾಲ್ಗೊಂಡರು. ಭಾಷೆಗೆ ಸಂಬಂಧಿಸಿದ ಮಾಹಿತಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ಪ್ರಸ್ತುತಪಡಿಸಿದರು.
ಇಂದಿನ ಸಮಾರೋಪ ಸಮಾರಂಭದಲ್ಲಿ ಪ್ರಶಿಕ್ಷಣ ಭಾರತಿ ಪ್ರಕಲ್ಪ ಸಮಿತಿಯ ಸದಸ್ಯೆಯಾದ ಶ್ರೀಮತಿ ಜ್ಯೋತಿ ಗುಡಿಯವರು ಬೆಂಗಳೂರಿನ ಥಣಿಸಂದ್ರದಲ್ಲಿ ನಡೆಯುತ್ತಿರುವ ಈ ಕಲ್ಪದ ಮೊದಲ ರೂವಾರಿಗಳು ನೀವು. ನೀವು ಹಲವು ಚಟು ಟಿಕೆಗಳಲ್ಲಿ ಸಕ್ರಿಯವಾಗಿ ಹಾಗೂ ಸಕಾರಾತ್ಮಕವಾಗಿ ತೊಡಗಿಸಿಕೊಂಡಿದ್ದನ್ನು ನೋಡಿ ಈ ಪ್ರಶಿಕ್ಷಣದ ಅಗತ್ಯತೆ ಇದೆ ಎನಿಸಿದೆ. ಡಿ.ಎಡ್., ಬಿ.ಎಡ್. ಆದ ನಂತರ ನನ್ನ ಜೀವನ ಸುಭದ್ರವಾಗಿದೆ. ಇನ್ನು ಏನು ಕಲಿಯೋಣ? ಇನ್ನೇನಿದ್ದರೂ ಮಕ್ಕಳಿಗೆ ಕಲಿಸೋದೇ ಎನ್ನದೇ ನಿಮ್ಮ ನಿರಂತರ ಕಲಿಕೆ ನನ್ನಲ್ಲಿ ಮೆಚ್ಚುಗೆಯನ್ನು ಉಂಟುಮಾಡಿದೆ. ಇದು ಹೀಗೆಯೇ ಮುಂದುವರೆಯಲಿ ಎಂದು ಆಶಿಸಿದರು.
21 ಮಂದಿ ಶಿಕ್ಷಕರು ಪ್ರಶಿಕ್ಷಣದ ಪ್ರಯೋಜನವನ್ನು ಪಡೆದರು. ಈ ಪ್ರಕಲ್ಪದಲ್ಲಿ ಶಾಲೆಯ ಬಾತ್ಮೀದಾರರಾದ ಶ್ರೀ ಮಹೇಶಯ್ಯ ಗುರೂಜಿಯವರು ಉಪಸ್ಥಿತರಿದ್ದರು. ಶಾಲೆಯ ಯೋಗ ವಿಭಾಗದ ಹಾಗೂ ಸೇವಾ ಪ್ರಕಲ್ಪದ ಮುಖ್ಯಸ್ಥರೂ ಆದ ಶ್ರೀ ಮಂಜುನಾಥ್ ಗುರೂಜಿಯವರು ಅತಿಥಿಗಳ ಸ್ವಾಗತವನ್ನು ಕೋರಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕಲ್ಲೇಶ ಗುರೂಜಿಯವರು ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಸಂಗೀತ ಶಿಕ್ಷಕರಾದ ಶಿ ಭಾರ್ಗವ್ ಗುರೂಜಿಯವರು ವಂದನಾರ್ಪಣೆಯನ್ನು ಅರ್ಪಿಸುವುದರ ಮೂಲಕ ಶಾಂತಿ ಮಂತ್ರದೊಂದಿಗೆ ಸಭೆ ಮುಕ್ತಾಯವಾಯಿತು.
For more information Prashikshana Bharathi click here