Call Us Now
+91 94482 84602
Email Us
info@rashtrotthana.org

A Reflection of Nationalism: Utthana

Utthana monthly magazine is a pride in the crown of Rashtrotthana Parishat. It is an encyclopaedia for nationalism, and a knowledge hub for Bharatiya philosophy and principles. Utthana is the brand ambassador for Bharatiya culture and tradition in Kannada journalism for decades. Every month Utthana offers its readers a wide variety of articles and awakens the masses of Karnataka towards nationalistic views.

Jan 2022 Utthana

Dharmapal is a renowned Gandhian Philosopher in post-independent India. He analysed the history of India with an Indian lens and presented it before the fellow-citizens in its true form. In the current year the country witnesses the centenary celebration of Dharmapal. On this eve, the January 2022 edition of Utthana carried a special cover story titled ‘Dharmapal: Desi Drushtiya Abhyudaya Chintana’. The article incorporates Dharmapal’s life, his prosperous way of thinking, his views and analysis about British imperialism, the fire of freedom among Indians during freedom struggle, an analysis on the evolution of Madras Panchayat Raj system etc.

Feb 2022 Utthana

Utthana magazine in its articles encircles the entire spectrum of issues and current affairs. Currently, crypto currencies have been the debating issue in the country, which was also mentioned by honourable Finance Minister during the Budget speech. So, the February 2022 edition of Utthana had its cover story titled ‘Cryptocurrency: Belavanige Mattu Chintanegalu’. The article encompassed detailed aspects related to legalising the cryptocurrency, the process behind transaction of cryptocurrency etc. The February edition also presented its readers an interesting article about repealed farm laws and the ground reality of Punjab which was the epicentre of deadlock. The magazine also has articles related to Ayurveda, Purana, personality development etc.

Mar 2022 Utthana

Veer Savarkar carved a revolutionary chapter in the history of Indian freedom struggle. He enlightened the path of Indian freedom struggle through his sharp words, unconventional dedication and sacrifice towards motherland. The March 2022 issue of Utthana has a special article on Savarkar’s life, sacrifice, discipline, outstanding personality etc. The edition also has an article which speaks about the appropriate age for the marriage of girls in the backdrop of the recently passed parliamentary bill which raises the legal age of marriage of Indian girls from 18 to 21. The magazine also has a book review column, which speaks about the recently released book ‘Ballavaru Ballante Byrappa’ authored by Dr. Vijaya. The March edition of Utthana also has articles on Tennis player Rafael Nadal, Noble scholar ‘Gamaka Ratnakara’ Dr. K.S. Narayanacharya and an interesting periodical literature (that is written in episodes) titled ‘Hattu Dikkugalu’.

Utthana is a perfect blend with unique flavours of articles which is appealing to all age groups and all sections of society, pouring an ocean of knowledge to the society every month.

Utthana electronic version – https://utthana.in/

ರಾಷ್ಟ್ರೀಯತೆಯ ಕೈಗನ್ನಡಿ ಉತ್ಥಾನ ಮಾಸಪತ್ರಿಕೆ

ರಾಷ್ಟ್ರೋತ್ಥಾನ ಪರಿಷತ್ತಿನ ಹೆಮ್ಮೆಯ ಕೊಡುಗೆ ಉತ್ಥಾನ ಮಾಸಪತ್ರಿಕೆ. ಕಳೆದ ಹಲವು ದಶಕಗಳಿಂದ ಕನ್ನಡ ಪತ್ರಿಕೋದ್ಯಮ ಜಗತ್ತಿನಲ್ಲಿ ರಾಷ್ಟ್ರೀಯತೆ, ಭಾರತೀಯ ಚಿಂತನೆ ಮತ್ತು ಸಂಸ್ಕೃತಿಯ ರಾಯಭಾರಿಯಾಗಿ ಉತ್ಥಾನ ಪತ್ರಿಕೆಯು ಕಾರ್ಯನಿರ್ವಹಿಸುತ್ತಿದೆ. ಪ್ರತೀ ತಿಂಗಳು ವಿನೂತನ ಲೇಖನಗಳೊಂದಿಗೆ, ವಿಶಿಷ್ಟ ಚಿಂತನೆಗಳೊಂದಿಗೆ ಕನ್ನಡಿಗರ ಮನಸ್ಸನ್ನು ಜಾಗೃತಗೊಳಿಸುತ್ತಿರುವ ಪತ್ರಿಕೆಯ ಕಿರು ಅವಲೋಕನ ಇಲ್ಲಿದೆ.

ಉತ್ಥಾನ – ಜನವರಿ 2022

ಧರ್ಮಪಾಲ್ ಸ್ವಾತಂತ್ರ್ಯೋತ್ತರ ಭಾರತದ ಪ್ರಬುದ್ದ ಗಾಂಧೀವಾದಿ. ಭಾರತೀಯ ಇತಿಹಾಸವನ್ನು ಹಾಗೂ ಸಮಾಜವನ್ನು ನೈಜ ಭಾರತೀಯತೆಯ ದೃಷ್ಟಿಯಿಂದ ವಿಶ್ಲೇಷಿಸಿ ಅವನ್ನು ಅದೇ ರೀತಿಯಲ್ಲಿ ಭಾರತೀಯರ ಮುಂದೆ ಪ್ರಸ್ತುತಪಡಿಸಿದ ಶ್ರೇಷ್ಠ ಸಂಶೋಧಕ. ಈ ವರ್ಷ ಧರ್ಮಪಾಲ್ ಜನ್ಮ ಶತಮಾನೋತ್ಸವ. ತನ್ನಿಮಿತ್ತ ಧರ್ಮಪಾಲ್ ಜೀವನ, ಅಭ್ಯುದಯ ಚಿಂತನೆ, ಬ್ರಿಟಿಷ್ ಆಡಳಿತದ ಬಗ್ಗೆ, ಭಾರತೀಯರ ಸ್ವಾತಂತ್ರ್ಯ ಹೋರಾಟದ ಕಿಚ್ಚಿನ ಬಗ್ಗೆ, ಮದ್ರಾಸಿನ ಪಂಚಾಯತ್ ರಾಜ್ ವ್ಯವಸ್ಥೆ ವಿಕಾಸವಾದ ಬಗ್ಗೆ ಅವರು ನಡೆಸಿದ ಉತ್ಕೃಷ್ಟ ಸಂಶೋಧನೆ ಇತ್ಯಾದಿ ಕುರಿತು ಜನವರಿ ತಿಂಗಳಲ್ಲಿ ಉತ್ಥಾನ ಪತ್ರಿಕೆಯು ‘ಧರ್ಮಪಾಲ್: ದೇಸೀ ದೃಷ್ಟಿಯ ಅಭ್ಯುದಯ ಚಿಂತನೆ’ ಎಂಬ ವಿಶೇಷಾಂಕವನ್ನು ಓದುಗರಿಗಾಗಿ ಹೊತ್ತು ತಂದಿದೆ.

ಉತ್ಥಾನ – ಫೆಬ್ರುವರಿ 2022

ಉತ್ಥಾನ ಮಾಸಪತ್ರಿಕೆಯು ಸಮಾಜದ ಎಲ್ಲಾ ಪ್ರಚಲಿತ ವಿದ್ಯಮಾನಗಳನ್ನು ವಿಶೇಷ ಲೇಖನಗಳ ರೂಪದಲ್ಲಿ ಹೊತ್ತು ತರುತ್ತದೆ. ದೇಶದ ಉದ್ದಗಲಕ್ಕೂ ಸದ್ದು ಮಾಡುತ್ತಿರುವ, ಪ್ರಸ್ತುತ ವರ್ಷದ ಬಜೆಟ್ ನಲ್ಲಿ ಉಲ್ಲೇಖವಾದ ಕ್ರಿಪ್ಟೋಕರೆನ್ಸಿಯ ವಿವರ ಫೆಬ್ರವರಿ ತಿಂಗಳ ಸಂಚಿಕೆಯಲ್ಲಿದೆ. ‘ಕ್ರಿಪ್ಟೋಕರೆನ್ಸಿ ಬೆಳವಣಿಗೆ ಮತ್ತು ನಿಯಂತ್ರಣ ಚಿಂತನೆಗಳು’ ಎಂಬ ಶೀರ್ಷಿಕೆಯ ಅಡಿಯಲ್ಲಿ ಕ್ರಿಪ್ಟೋಕರೆನ್ಸಿಯ ಮೌಲ್ಯೀಕರಣ, ವಿನಿಮಯ ಮತ್ತು ಅದರಿಂದ ತೆರಬೇಕಾದ ಸಂಭಾವನೆ ಇತ್ಯಾದಿ ಚಟುವಟಿಕೆಗಳ ಪ್ರಕ್ರಿಯೆಯ ಬಗ್ಗೆ ವಿಸ್ತೃತ ವಿಶೇಷ ಲೇಖನವನ್ನು ಓದುಗ ಸಮುದಾಯಕ್ಕೆ ನೀಡಲಾಗಿದೆ. ಇದರೊಂದಿಗೆ ಫೆಬ್ರುವರಿ ಸಂಚಿಕೆಯಲ್ಲಿ ಕೃಷಿ ಕಾಯ್ದೆಯ ಮತ್ತು ಅದರ ಹಿಂದಿನ ರಾಜಕೀಯ, ಕಾಯ್ದೆಯ ವಿರುದ್ಧದ ಹೋರಾಟದ ಅಧಿಕೇಂದ್ರವಾದ ಪಂಜಾಬಿನ ವಸ್ತುಸ್ಥಿತಿಯ ಬಗ್ಗೆಯೂ ವಿಶೇಷ ಲೇಖನವಿದೆ. ಅಲ್ಲದೇ ಆಯುರ್ವೇದ, ಪುರಾಣ, ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಲೇಖನಗಳೂ ಇವೆ.

ಉತ್ಥಾನ – ಮಾರ್ಚ್‍ 2022

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿ ಚರಿತ್ರೆಯನ್ನು ಬರೆದವರಲ್ಲಿ ವೀರ್ ಸಾವರ್ಕಾರ್ ಅಗ್ರಮಾನ್ಯರು. ತಮ್ಮ ತ್ಯಾಗ, ಸರ್ವಸ್ವಾರ್ಪಣೆ ಮತ್ತು ಚಿಂತನಸ್ಫುಟತೆಯ ಮೂಲಕ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪಥವನ್ನು ಉಜ್ವಲಗೊಳಿಸಿದವರು ಸಾವರ್ಕರ್. ಅವರ ತ್ಯಾಗ, ಶಿಸ್ತು ಮತ್ತು ಸಮರ್ಪಣಾ ಭಾವದ ಬಗ್ಗೆ ಮಾರ್ಚ್ ತಿಂಗಳ ಉತ್ಥಾನ ಪತ್ರಿಕೆ ವಿಶೇಷ ಬರೆಹವೊಂದನ್ನು ಹೊತ್ತು ತಂದಿದೆ. ಇದರೊಂದಿಗೆ ಇತ್ತೀಚೆಗೆ ಸಂಸತ್ತಿನಲ್ಲಿ ಹೆಣ್ಣುಮಕ್ಕಳ ವಿವಾಹದ ವಯೋಮಿತಯ ಕುರಿತು ಮಂಡನೆಯಾದ ಮಸೂದೆಯ ಬಗ್ಗೆ ವಿಶ್ಲೇಷಿತ ಲೇಖನವಿದೆ.

ಶ್ರೇಷ್ಠ ಸಾಹಿತಿ ಎಸ್. ಎಲ್. ಭೈರಪ್ಪನವರ ಜೀವನ, ಆದರ್ಶದ ಬಗ್ಗೆ ಡಾ. ವಿಜಯಾ ಬರೆದ ಕೃತಿ ‘ಬಲ್ಲವರು ಬಲ್ಲಂತೆ ಭೈರಪ್ಪ’ ಇತ್ತೀಚೆಗೆ ಬಿಡುಗಡೆಯಾಗಿದ್ದು, ಪುಸ್ತಕ ವಿಮರ್ಶೆಯೂ ಈ ತಿಂಗಳ ಉತ್ಥಾನದಲ್ಲಿದೆ. ಹಾಗೂ ಖ್ಯಾತ ಟೆನ್ನಿಸ್ ಆಟಗಾರ ರಫೆಲ್ ನಡಾಲ್ ಬಗ್ಗೆ ಹಾಗೂ ಶ್ರೇಷ್ಠ ವಿದ್ವಾಂಸರಾದ ‘ಗಮಕ ರತ್ನಾಕರ’ ಡಾ|| ಕೆ.ಎಸ್. ನಾರಾಯಣಾಚಾರ್ಯರ ಬಗ್ಗೆ ವಿಶೇಷ ಬರಹ, ಹತ್ತು ದಿಕ್ಕುಗಳು ಎಂಬ ಅಪರೂಪದ ಧಾರಾವಾಹಿಯನ್ನೂ ಈ ಸಂಚಿಕೆ ಒಳಗೊಂಡಿದೆ. ಉತ್ಥಾನ ಮಾಸಪತ್ರಿಕೆಯಲ್ಲಿ ಸಮಾಜದ ಎಲ್ಲ ವರ್ಗದ, ವಯೋಮಾನದವರ, ಸಾಹಿತ್ಯದ ಬೇರೆ ಬೇರೆ ಮಜಲುಗಳಲ್ಲಿ ಅಭಿರುಚಿಯಿರುವ ಎಲ್ಲರಿಗೂ ರುಚಿಸುವಂತ ವಿಭಿನ್ನ ಲೇಖನಗಳನ್ನು ಪ್ರತಿ ತಿಂಗಳು ನೀಡಲಾಗುತ್ತದೆ.

ಉತ್ಥಾನ ಅಂಜರ್ಜಾಲ ಆವೃತ್ತಿ – https://utthana.in/