Call Us Now
+91 94482 84602
Email Us
info@rashtrotthana.org

Dedication of a Well-equipped Bus at Rashtrotthana Blood Centre – Hubballi

Hubballi, Feb 16: The Infosys Foundation contributed, a well-equipped bus to Sha Damji Jadavji Chheda Memorial Rashtrotthana Blood Bank at Hubballi dedicated for the service. The bus granted by the foundation for the purpose of timely and efficient blood collection from the donors of various regions was dedicated in the divine presence of Ma. Ni. Pra. Jagadguru Sri Rajayogindra Mahaswamiji.
Sri Mangesha G Bhende, Mentor of Rashtrotthana Blood Bank, Sri Veerendra Cheda, Philanthropist and Donor of Rashtrotthana Blood Bank building, Sri B C Shahapurakara, Chief of Infosys Foundation, Sri Narendra G, Sri Shridhara Nadiger, Sri Nandakumar, Sri Kiran Gudadhakeri, Sri Shridhara Joshi and others were present at the event.
Blood donation camp was organised at the newly dedicated bus. Sri Raghavendra Renake donated blood for the 100th time. Sri Kiran Gada and Sri Vinod Patta donated the blood for 55th and 51st time respectively. The donors who donated blood in record number of times and became an integral part of constructing a healthy society were felicitated and honoured by the dignitaries.


ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತ ಕೇಂದ್ರದಲ್ಲಿ ಸುಸಜ್ಜಿತ ಬಸ್ ಲೋಕಾರ್ಪಣೆ
ಹುಬ್ಬಳ್ಳಿ, ಫೆಬ್ರವರಿ 16: ಇನ್ಫೋಸಿಸ್ ಪ್ರತಿಷ್ಠಾನದವರು ಹುಬ್ಬಳ್ಳಿಯ ಶಾ ದಾಮಜೀ ಜಾದವಜೀ ಛೆಡಾ ಮೆಮೋರಿಯಲ್ ರಾಷ್ಟ್ರೋತ್ಥಾನ ರಕ್ತ ಕೇಂದ್ರಕ್ಕೆ ಕೊಡುಗೆಯಾಗಿ ನೀಡಿದ ಸುಸಜ್ಜಿತ ಬಸ್ಸನ್ನು ಲೋಕಾರ್ಪಣೆ ಮಾಡಲಾಯಿತು. ತ್ವರಿತ ಹಾಗೂ ಸಮರ್ಪಕ ರೀತಿಯಲ್ಲಿ ರಕ್ತ ಸಂಗ್ರಹಣೆ ಮಾಡುವ ಉದ್ದೇಶದಿಂದ ಕೊಡುಗೆಯಾಗಿ ನೀಡಲಾದ ಬಸ್ಸನ್ನು ಹುಬ್ಬಳ್ಳಿಯ ಮೂರು ಸಾವಿರ ಮಠದ ಮ.ನಿ.ಪ್ರ. ಜಗದ್ಗುರು ಶ್ರೀ ರಾಜಯೋಗೀಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖರು ಮತ್ತು ರಕ್ತ ಕೇಂದ್ರದ ಮಾರ್ಗದರ್ಶರಾದ ಶ್ರೀ ಮಂಗೇಶ ಜಿ. ಭೆಂಡೆ, ರಾಷ್ಟ್ರೋತ್ಥಾನ ರಕ್ತ ಕೇಂದ್ರ ಕಟ್ಟಡದ ದಾನಿಗಳು ಮತ್ತು ಸಮಾಜ ಸೇವಕರಾದ ಶ್ರೀ ವೀರೇಂದ್ರ ಛೆಡಾ, ಇನ್ಫೋಸಿಸ್ ಪ್ರತಿಷ್ಠಾನದ ಪ್ರಮುಖರಾದ ಶ್ರೀ ಬಿ.ಸಿ. ಶಹಾಪುರಕರ, ಶ್ರೀ ನರೇಂದ್ರ ಜಿ, ಶ್ರೀ ಶ್ರೀಧರ ನಾಡಿಗೇರ್, ಶ್ರೀ ನಂದಕುಮಾರ, ಶ್ರೀ ಕಿರಣ ಗುಡ್ಡದಕೇರಿ, ಶ್ರೀ ಶ್ರೀಧರ ಜೋಷಿ ಮತ್ತಿತರು ಉಪಸ್ಥಿತರಿದ್ದರು.
ನೂತನವಾಗಿ ಲೋಕಾರ್ಪಣೆಯಾದ ಬಸ್ಸಿನಲ್ಲಿ ಏರ್ಪಡಿಸಲಾದ ರಕ್ತದಾನ ಶಿಬಿರದಲ್ಲಿ ಶ್ರೀ ರಾಘವೇಂದ್ರ ರೇಣಕೆ 100ನೇ ಬಾರಿ ರಕ್ತ ಮಾಡಿದರು. ಶ್ರೀ ಕಿರಣ ಗಡ 55ನೇ ಬಾರಿ ಬಾರಿ ಹಾಗೂ ಶ್ರೀ ವಿನೋದ್ ಪಟ್ಟಾ 51ನೇ ಬಾರಿ ರಕ್ತದಾನ ಮಾಡಿದರು. ಈ ರೀತಿ ದಾಖಲೆಯ ಪ್ರಮಾಣದಲ್ಲಿ ರಕ್ತದಾನ ಮಾಡಿ ಆರೋಗ್ಯಕರ ಸಮಾಜ ನಿರ್ಮಾದಲ್ಲಿ ಕೈಜೋಡಿಸಿದವರಿಗೆ ಗಣ್ಯರು ಸನ್ಮಾನ ಮಾಡಿ ಗೌರವಿಸಿದರು.
http://bloodcentrehubli.rashtrotthana.org/

https://www.facebook.com/rashtrotthanaparishath/
https://rashtrotthana.org/

Rashtrotthana #RashtrotthanaParishat #RashtrotthanaBloodCentre #RashtrotthanaBloodCentreHubli #RBCH #BusDedication #InfosysFoundation #moorusaviramath #hubli #RajayogindraMahaswamiji