Call Us Now
+91 94482 84602
Email Us
info@rashtrotthana.org

Distinctive Spectrum of Activities at Rashtrotthana Yoga Centres

The Rashtrotthana Yogic Sciences and Research Institute began in the year 1972, it aims at the physical, mental, social and intellectual well-being of an individual. The centre which organises a unique spectrum of activities, workshops, seminars for the health and well-being of the society has recently added 5 new yoga centres to its service initiatives.

Personality Development Camp for Children

The Rashtrotthana Yogic Sciences and Research Institute has started a camp for the personality development of children at Basavanagudi.

Blood Donation Camps

Rashtrotthana Yogic Sciences and Research Institute (RYSRI) organised a blood donation camp at Rashtrotthana Yoga Centre, Kempegowda Nagar on February 13th. The camp was inaugurated by Sunil Puranik, President, Karnataka Chalanachitra Academy.

On February 20th, organised the blood donation camps at Jayanagar and Sadhashiva Nagar in association with Samartha Bharata. Dr. Giridhara Kaje of Prashanthi Ayurvedic Centre inaugurated the camp at Jayanagar. Multilingual film actor, Sri Prakash Belavadi inaugurated the camp at Sadashivanagar. 203 people at Jayanagar and 106 people at Sadashiva Nagar participated in the noble act of donating blood.

Training Session for Yoga Teachers

The Rashtrotthana Yogic Sciences and Research Institute organised a one day workshop and training session for all the yoga instructors of the institution on February 27 at Sadashiva Nagar Yoga Centre. 85 yoga instructors were beneficiaries of the session.

Bhagavad Gita Comprehensive Lecture Series

The Rashtrotthana Yogic Sciences and Research Institute organised a Bhagavad Gita lecture series at Rashtrotthana Yoga Centre, Sunkenahalli. Scholar and Orator from Uttaradhi Mutt, Dr. Bhimsen Acharya was the resource person for the lecture series.

Inauguration of Acupressure Treatment Centre

Acupressure treatment centre was inaugurated at Rashtrotthana Yoga Centre, Sunkenahalli on February 28. Sri Narayana Rao R Maanay, secretary of BNM Educational Institutions inaugurated the centre.

Sri Hariprasad D A, Acupressure, Yoga Consultant and Head Physical Education Dept. BNM Institute of Technology, Bengaluru is the therapist and addresses the issues related to arthritis, cervical spondylosis, slip disc, varicose vein, frozen shoulder, tennis elbow, gastrointestinal disorders, asthma, heart related problems, ENT and eye related issues, sinusitis, headaches.

Inauguration of New Yoga Centres

New Yoga Centres were inaugurated at J.G.R.V. Campus (Rammurthy Nagar), Vijaya Bharathi Vidyalaya (Girinagar), Vidyarthi Shikshana Seva Trust (Nagarabhavi), Rashtrotthana Vidyalaya (Davanagere) and Koramangala (Bengaluru) on 3rd March, 7th March, 10th March, 14th and 16th March respectively with the aim of enlightening the society in physical, mental, intellectual and social dimensions through the medium of yoga.

Series of Lectures on Health and Well-being

A lecture on ‘Balanced diet for summer season’ was held at Sadashiva Nagar Yoga Centre on 27th February, 2022. Resource Person Dr. Sapna Rai educated the listeners about the vital diet chart suitable for the summer season in view of maintaining good health.

A lecture on the topic, ‘How well do you know the functions of a human heart?’ was held at Kundalahalli Yoga centre on 5th March, 2022. Dr. Darshan Krishnappa enlightened the gathering regarding maintaining the healthy functioning of the human heart.

A lecture was held on the topic, ‘premenopausal and menopausal state’ at Keshavashilpa Yoga Centre, Kempegowda Nagar on 12th March. Gynaecologist Dr. Asha Vijaya created awareness about the problems faced by women community during menopause and corresponding precautions and remedies to it.

More details of Rashtrotthana Yogic Sciences and Research Institute:
https://rashtrotthana.org/service-projects/yoga-centers/

ರಾಷ್ಟ್ರೋತ್ಥಾನ ಯೋಗಕೇಂದ್ರದ ವಿಶೇಷ ಚಟುವಟಿಕೆಗಳು

1972ರಲ್ಲಿ ಆರಂಭವಾದ ರಾಷ್ಟ್ರೋತ್ಥಾನ ಯೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯು ದೈಹಿಕ, ಮಾನಸಿಕ, ಬೌದ್ಧಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಗೆ ಆಸಕ್ತರನ್ನು ಉತ್ತೇಜಿಸುತ್ತದೆ. ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ವಿನೂತನ ಕಾರ್ಯಾಗಾರ, ಚಟುವಟಿಕೆಗಳನ್ನು ಆಯೋಜಿಸುವ ಯೋಗ ಕೇಂದ್ರವು ಇತ್ತೀಚೆಗೆ ನೂತನ ಯೋಗ ಕೇಂದ್ರಗಳನ್ನು ಪ್ರಾರಂಭಿಸುವ ಮೂಲಕ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ.

ಮಕ್ಕಳಿಗಾಗಿ ವ್ಯಕ್ತಿತ್ವ ವಿಕಸನ ಶಿಬಿರ

ಫೆಬ್ರವರಿ 6ರಿಂದ ಬಸವನಗುಡಿಯಲ್ಲಿರುವ ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕೇಂದ್ರದಲ್ಲಿ ಮಕ್ಕಳಿಗಾಗಿ ವ್ಯಕ್ತಿತ್ವ ವಿಕಸನ ಶಿಬಿರವನ್ನು ಪ್ರಾರಂಭಿಸಲಾಯಿತು.

ರಕ್ತದಾನ ಶಿಬಿರಗಳ ಆಯೋಜನೆ

ಫೆಬ್ರವರಿ 13ರಂದು ಕಂಪೇಗೌಡನಗರದ ಕೇಶವಶಿಲ್ಪ ಯೋಗಕೇಂದ್ರದಲ್ಲಿ ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಶ್ರೀ ಸುನೀಲ್ ಪುರಾಣಿಕ್ ಅವರು ಉದ್ಘಾಟಿಸಿದರು.

ಫೆಬ್ರವರಿ 20ರಂದು ಸಮರ್ಥ ಭಾರತದ ಸಹಯೋಗದಲ್ಲಿ ಜಯನಗರ ಹಾಗೂ ಸದಾಶಿವನಗರದ ಕೇಂದ್ರಗಳಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಜಯನಗರದ ಶಿಬಿರವನ್ನು ಪ್ರಶಾಂತಿ ಆಯುರ್ವೇದಿಕ್ ಸೆಂಟರಿನ ಡಾ. ಗಿರಿಧರ ಕಜೆಯವರು ಹಾಗೂ ಸದಾಶಿವನಗರದ ಶಿಬಿರವನ್ನು ಪಂಚಭಾಷಾ ನಟರಾದ ಶ್ರೀ ಪ್ರಕಾಶ ಬೆಳವಾಡಿಯವರು ಉದ್ಘಾಟಿಸಿದರು. ಜಯನಗರದಲ್ಲಿ 203 ಹಾಗೂ ಸದಾಶಿವನಗರದಲ್ಲಿ 106 ಮಂದಿ ರಕ್ತದಾನಿಗಳು ರಕ್ತದಾನ ಮಾಡಿದರು.

ಯೋಗ ಶಿಕ್ಷಕರಿಗೆ ಪ್ರಶಿಕ್ಷಣವರ್ಗ

ಫೆಬ್ರವರಿ 27ರಂದು ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ಎಲ್ಲ ಯೋಗ ಶಿಕ್ಷಕರಿಗೆ ಒ೦ದು ದಿನದ ಯೋಗ ಪ್ರಶಿಕ್ಷಣವರ್ಗವನ್ನು ರಾಷ್ಟ್ರೋತ್ಥಾನದ ಸದಾಶಿವನಗರ ಯೋಗಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರಶಿಕ್ಷಣವರ್ಗದಲ್ಲಿ 85 ಶಿಕ್ಷಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಭಗವದ್ಗೀತಾ ಉಪನ್ಯಾಸ ಸರಣಿಯ ಉದ್ಘಾಟನೆ

ಫೆಬ್ರವರಿ 26ರಂದು ಭಗವದ್ಗೀತಾ ಉಪನ್ಯಾಸ ಸರಣಿಯ ಉದ್ಘಾಟನೆಯನ್ನು ಸುಂಕೇನಹಳ್ಳಿಯ ರಾಷ್ಟ್ರೋತ್ಥಾನ ಯೋಗಕೇಂದ್ರದಲ್ಲಿ ಮಾಡಲಾಯಿತು. ವಿದ್ವಾಂಸರೂ ಹಾಗೂ ಉತ್ತರಾದಿ ಮಠದ ಪ್ರವಚನಕಾರರೂ ಆದ ಡಾ. ಭೀಮಸೇನ ಆಚಾರ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಆಕ್ಯುಪ್ರೆಷರ್ ಚಿಕಿತ್ಸಾಕೇಂದ್ರದ ಉದ್ಘಾಟನೆ

ಫೆಬ್ರವರಿ 28 ರಂದು ಸುಂಕೇನಹಳ್ಳಿಯ ರಾಷ್ಟ್ರೋತ್ಥಾನ ಯೋಗಕೇಂದ್ರದಲ್ಲಿ ಆಕ್ಯುಪ್ರೆಷರ್ ಚಿಕಿತ್ಸಾ ಕೇಂದ್ರವನ್ನು ಬಿ.ಎನ್.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ನಾರಾಯಣರಾವ್ ಆರ್. ಮಾನೆ ಉದ್ಘಾಟಿಸಿದರು.

ಬಿ. ಎನ್. ಎಂ. ತಾಂತ್ರಿಕ ವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರು ಹಾಗೂ ಆಕ್ಯುಪ್ರೆಷರ್ ಮತ್ತು ಯೋಗ ಸಲಹೆಗಾರರಾದ ಶ್ರೀ ಹರಿಪ್ರಸಾದ್ ಡಿ. ಎ. ಆಕ್ಯುಪ್ರೆಷರ್ ಕೇಂದ್ರದಲ್ಲಿ ಚಿಕಿತ್ಸಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಚಿಕಿತ್ಸಾ ಕೇಂದ್ರವು ಸಂಧಿವಾತ, ಸರ್ವೈಕಲ್ ಸ್ಪಾಂಡಿಲೋಸಿಸ್, ಸ್ಲಿಪ್ ಡಿಸ್ಕ್, ವೆರಿಕೋಸಿನ್, ಟೆನ್ನಿಸ್ ಎಲ್ಬೊ, ಜಠರ ಮತ್ತು ಕರುಳಿನ ಅಸ್ವಸ್ಥತೆಗಳು, ಅಸ್ತಮಾ ಮತ್ತು ಹೃದಯ ಸಂಬಂಧಿ ಸಮಸ್ಯೆಗಳು, ಇ.ಎನ್.ಟಿ. ಸೈನಟಿಸ್, ತಲೆನೋವು ಇತ್ಯಾದಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಿದೆ.

ನೂತನ ಯೋಗಕೇಂದ್ರಗಳ ಉದ್ಘಾಟನೆ

ಮಾರ್ಚ್ 3ರಂದು ಬೆಂಗಳೂರಿನ ರಾಮಮೂರ್ತಿ ನಗರದ ಜೆ. ಜಿ. ಆರ್. ವಿ. ಶಾಲೆಯಲ್ಲಿ, ಮಾರ್ಚ್ 7ರಂದು ಗಿರಿನಗರದ ವಿಜಯ ಭಾರತಿ ವಿದ್ಯಾಲಯದಲ್ಲಿ, ಮಾರ್ಚ್ 10ರಂದು ನಾಗರಭಾವಿಯ ವಿದ್ಯಾರ್ಥಿ ಶಿಕ್ಷಣ ಸೇವಾ ಟ್ರಸ್ಟ್ ನಲ್ಲಿ, ಮಾರ್ಚ್ 14ರಂದು ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ, ಮಾರ್ಚ್ 16ರಂದು ಬೆಂಗಳೂರಿನ ಕೋರಮಂಗಲದಲ್ಲಿ ನೂತನ ಯೋಗಕೇಂದ್ರಗಳನ್ನು ಉದ್ಘಾಟಿಸಲಾಯಿತು.

ಯೋಗಕೇಂದ್ರದಲ್ಲಿ ವಿಶೇಷ ಉಪನ್ಯಾಸ

ಫೆಬ್ರವರಿ 27 ರಂದು ಸದಾಶಿವನಗರದ ಯೋಗಕೇಂದ್ರದಲ್ಲಿ ‘ಬೇಸಿಗೆ ಕಾಲಕ್ಕೆ ಸಮತೋಲಿತ ಆಹಾರ’ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿತ್ತು. ಡಾ. ಸಪ್ನಾ ರೈ ಅವರು ಬೇಸಿಗೆ ಕಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೇವಿಸಬೇಕಾದ ಸಮತೋಲಿತ ಆಹಾರದ ಬಗ್ಗೆ ವಿಸ್ತೃತವಾಗಿ ವಿವರಿಸಿದರು.

2022ರ ಮಾರ್ಚ್ 5ರಂದು ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳುವ ಬಗ್ಗೆ ಕುಂದಲಹಳ್ಳಿಯ ಯೋಗ ಕೆಂದ್ರದಲ್ಲಿ ವಿಶೇಷ ಉಪನ್ಯಾಸ ನಡೆಯಿತು. ಡಾ. ದರ್ಶನ್ ಕೃಷ್ಣಪ್ಪ ಅವರು ಉಪನ್ಯಾಸ ನೀಡಿದರು. ಮಾರ್ಚ್ 12ರಂದು ಕೆಂಪೇಗೌಡನಗರದಲ್ಲಿರುವ ಕೇಶವಶಿಲ್ಪ ಯೋಗಕೇಂದ್ರದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಆಶಾ ವಿಜಯ‍ ‘ಮಹಿಳೆಯರಲ್ಲಿ ಮುಟ್ಟು ನಿಲ್ಲುವ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳು ಹಾಗೂ ಪರಿಹಾರಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ಹೆಚ್ಚಿನ ವಿವರಗಳು:
https://rashtrotthana.org/service-projects/yoga-centers/