Rashtrotthana Parishat in order to nurture a value-based, harmonious society has ventured into various social media platforms. The Rashtrotthana Facebook and Instagram Pages continuously update information with respect to Bharatiya culture, tradition, Sanatana Dharma, patriotism etc.

The invention of the Internet has earmarked a new era in mass communication. It revolutionised the concept of ‘Global Village’ and has created an integrated platform to share information and boost the knowledge base of the human ecosystem.
Acknowledging the requirements of the 21st century, Rashtrotthana Parishat, with an aim of channelizing the flow of useful information into human society and thereby nurturing a value-based, harmonious society has ventured into various social media platforms.
The Rashtrotthana Facebook and Instagram Pages continuously update information with respect to Bharatiya culture, tradition, Sanatana Dharma, patriotism etc. It also highlights the major activities of the Parishat, recent developments in its various service projects etc.
The Rashtrotthana Website consistently updates the society about its projects, breakthrough initiatives, landmark developments and unifies the society in its noble endeavours.
The Rashtrotthana Parishat has taken a giant leap in constructing a healthy and sustainable society with the aid of modern technology by rendering numerous valuable information under the umbrella of social media and websites.
To be persistently updated on Organisation’s activities, to nourish one’s knowledge hub and to join hands in the noble cause of the organisation, follow the Parishat’s social media pages.
Website: https://rashtrotthana.org/
YouTube: https://www.youtube.com/channel/UCccixFI_2_JydCPQWBCYpPQ
FaceBook: https://www.facebook.com/rashtrotthanaparishath
Instagram: https://www.instagram.com/rashtrotthanaparishat/
Twitter: https://twitter.com/Rashtrotthana_P
—
ಸಾಮಾಜಿಕ ಜಾಲತಾಣಗಳ ಮೂಲಕ ಸುಸ್ಥಿರ ಸಮಾಜನಿರ್ಮಾಣ
ಅಂತರ್ಜಾಲದ ಆವಿಷ್ಕಾರವು ಮಾಧ್ಯಮ ಜಗತ್ತಿನಲ್ಲಿ ಹೊಸ ಯುಗವನ್ನೇ ಸೃಷ್ಠಿಮಾಡಿದೆ. ದೇಶ-ವಿದೇಶಗಳಲ್ಲಿ ನಡೆಯುತ್ತಿರುವ ಘಟನೆಗಳೂ ಇಂದು ಅಂಗೈತುದಿಯಲ್ಲಿ ಲಭ್ಯವಾಗುತ್ತಿರುವುದಕ್ಕೆ ಅಂತರ್ಜಾಲದ ಕ್ರಾಂತಿಯೇ ಕಾರಣ ಎನ್ನಬಹುದು. ಸಮೂಹ ಸಂವಹನದಲ್ಲಂತೂ ಅಂತರ್ಜಾಲ ಕಲ್ಪಿಸಿದ ಅವಕಾಶ ಮತ್ತು ಸೌಲಭ್ಯಗಳು ಅಷ್ಟಿಷ್ಟಲ್ಲ. 21ನೇ ಶತಮಾನದಲ್ಲಿ ‘ಗ್ಲೋಬಲ್ ವಿಲೇಜ್’ ಪರಿಕಲ್ಪನೆಯನ್ನು ಸಾಕಾರಗೊಳಿಸಿ ಅತಿ ವೇಗವಾದ ಮಾಹಿತಿ ವಿನಿಮಯ, ಸುದ್ದಿ, ಸಂವಹನ, ಚರ್ಚಾವೇದಿಕೆಗಳ ಮೂಲಕ ಇಡೀ ಜಗತ್ತನ್ನು ಬೆಸೆಯುವುದರಲ್ಲಿ ಅಂತರ್ಜಾಲ ಮಹತ್ತ್ವದ ಪಾತ್ರ ವಹಿಸಿದೆ. ಮನುಷ್ಯನ ಜ್ಞಾನವೃದ್ಧಿಗೂ ಸಹಕಾರಿಯಾಗಬಲ್ಲ ಅನೇಕ ಸಂಗತಿಗಳನ್ನೂ ಸಮಾಜಕ್ಕೆ ತಲುಪಿಸುವಲ್ಲಿ ಅಂತರ್ಜಾಲ ವೇದಿಕೆಗಳು ಯಶಸ್ವಿಯಾಗಿವೆ.
ಆಧುನಿಕ ಜಗತ್ತಿನ ಅಗತ್ಯಗಳನ್ನು ಅರಿತಿರುವ ರಾಷ್ಟ್ರೋತ್ಥಾನ ಪರಿಷತ್ ಸ್ವಸ್ಥ ಮತ್ತು ಸುಸ್ಥಿರ ಸಮಾಜ ನಿರ್ಮಾಣದ ಗುರಿಯನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಅನೇಕ ಉಪಯುಕ್ತ ಸಂಗತಿಗಳನ್ನು ಜನತೆಗೆ ತಲುಪಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ರಾಷ್ಟ್ರೋತ್ಥಾನ Facebook ಮತ್ತು Instagram ಪುಟಗಳ ಮೂಲಕ ಮೌಲ್ಯಾಧಾರಿತ ಸಮಾಜ ನಿರ್ಮಾಣಕ್ಕೆ ಪೂರಕವಾದ ಭಾರತೀಯ ಸಂಸ್ಕೃತಿ, ಸಂಪ್ರದಾಯ, ಸನಾತನ ಧರ್ಮ, ದೇಶಭಕ್ತಿ ಇತ್ಯಾದಿ ವಿಷಯಗಳನ್ನು ನಿರಂತರವಾಗಿ ಜನಮಾನಸಕ್ಕೆ ತಲುಪಿಸಲಾಗುತ್ತಿದೆ. ಅದರೊಟ್ಟಿಗೆ ರಾಷ್ಟ್ರೋತ್ಥಾನ ಪರಿಷತ್ ನ ಪ್ರಮುಖ ಚಟುವಟಿಕೆಗಳು, ವಿವಿಧ ಸೇವಾಯೋಜನೆಗಳ ಇತ್ತೀಚಿನ ಬೆಳವಣಿಗೆಗಳ ಬಗ್ಗೆಯೂ ತಿಳಿಸಲಾಗುತ್ತದೆ.
ರಾಷ್ಟ್ರೋತ್ಥಾನ ವೆಬ್ಸೈಟ್ ನ ಮೂಲಕ ಸಂಸ್ಥೆಯ ವಿವಿಧ ಯೋಜನೆಗಳು, ಪ್ರಕಲ್ಪಗಳ ಕಾರ್ಯಚಟುವಟಿಕೆಗಳು ಮತ್ತು ಪ್ರಗತಿಯ ಉಪಕ್ರಮಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ನೀಡಲಾಗುತ್ತದೆ. ಸ್ವಸ್ಥ ಮತ್ತು ಸುಸ್ಥಿರ ಸಮಾಜ ನಿರ್ಮಾಣದ ಮಹೋದ್ದೇಶದಿಂದ ಹೆಜ್ಜೆಯಿಟ್ಟಿರುವ ರಾಷ್ಟ್ರೋತ್ಥಾನ ಪರಿಷತ್ ನ ಕಾರ್ಯಚಟುವಟಿಕೆಗಳ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಲಾಗುತ್ತದೆ. ರಾಷ್ಟ್ರೋತ್ಥಾನದ ಈ ಉದಾತ್ತ ಧ್ಯೇಯದೊಂದಿಗೆ ಕೈಜೋಡಿಸಲು, ಮೌಲ್ಯಯುತ ಸಮಾಜ ನಿರ್ಮಾಣದ ರೂವಾರಿಗಳಾಗಲು ರಾಷ್ಟ್ರೋತ್ಥಾನ ಪರಿಷತ್ ನ ಸಾಮಾಜಿಕ ಜಾಲತಾಣ ಪುಟಗಳನ್ನು ಫಾಲೋ ಮಾಡಿ.
Website: https://rashtrotthana.org/
YouTube: https://www.youtube.com/channel/UCccixFI_2_JydCPQWBCYpPQ
FaceBook: https://www.facebook.com/rashtrotthanaparishath
Instagram: https://www.instagram.com/rashtrotthanaparishat/
Twitter: https://twitter.com/Rashtrotthana_P