For more details about Tapas Project click here
For more details about Saadhana Project click here
Bengaluru, Dec 25: The most highly impactful and socially transformative initiative of Rashtrotthana Parishat, ‘Tapas’ and ‘Saadhana’ is a gateway for higher education and career building for students who hail from rural Karnataka and belong to the underprivileged section of the society.
The first round of the entrance exams for Tapas and Saadhana aspirants were conducted on 25th December 2021 for the academic year 2022-24 in 52 centres across the Karnataka State. Applications were received in incredible numbers which is a testimony for marginalised community students’ aspiration and strong willingness to get admissions in reputed engineering and medical institutions of the country.
Remarkable Response from underrepresented Students’ Community:
Tapas: 4987 Students appeared for Entrance Exam | 873 Students selected in 1st Round
Saadhana Medical: 6552 Students appeared for Entrance Exam | 900 Students selected in 1st Round
Saadhana Education: 1202 Students appeared for Entrance Exam | 335 Students selected in 1st Round
The 2nd Round of the Selection Process will be held on 26th January, 2022. More information about the upcoming round of examination will be updated on the official website on 20th January, 2022.
ತಪಸ್ ಮತ್ತು ಸಾಧನಾ ಪ್ರವೇಶ ಪರೀಕ್ಷೆ – ಡಿಸೆಂಬರ್ 2021
ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ನನಸು ಮಾಡುವ ಉದ್ದೇಶದಿಂದ ರಾಷ್ಟ್ರೋತ್ಥಾನ ಪರಿಷತ್ ‘ತಪಸ್’ ಮತ್ತು ‘ಸಾಧನಾ’ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತೀ ವರ್ಷ ಆಯ್ದ ಪ್ರತಿಭಾವಂತ ಗಂಡು ಮಕ್ಕಳಿಗೆ ‘ತಪಸ್’ ಮತ್ತು ಹೆಣ್ಣು ಮಕ್ಕಳಿಗೆ ‘ಸಾಧನಾ’ ಪ್ರಕಲ್ಪದ ಅಡಿಯಲ್ಲಿ ಉಚಿತ ಊಟ, ವಸತಿಯೊಂದಿಗೆ ಉನ್ನತ ಶಿಕ್ಷಣಕ್ಕೆ ಅವಶ್ಯಕವಾದ ತರಬೇತಿಯನ್ನು ನೀಡಲಾಗುತ್ತದೆ. 2022-24ನೇ ಸಾಲಿನ ಮೊದಲ ಸುತ್ತಿನ ತಪಸ್ ಮತ್ತು ಸಾಧನಾ ಪ್ರವೇಶ ಪರೀಕ್ಷೆಗಳು 2021ರ ಡಿಸೆಂಬರ್ 25ರಂದು ಕರ್ನಾಟಕ ರಾಜ್ಯಾದ್ಯಂತ ಒಟ್ಟು 52 ಕೇಂದ್ರಗಳಲ್ಲಿ ನಡೆಯಿತು.
ವಿದ್ಯಾರ್ಥಿ ಸಮುದಾಯದಿಂದ ಅಭೂತಪೂರ್ವ ಪ್ರತಿಕ್ರೆಯೆ!
‘ಸಾಧನಾ’ ಮತ್ತು ‘ತಪಸ್ಸ್’ನ ಪ್ರವೇಶ ಪರೀಕ್ಷೆಗಳಿಗೆ ರಾಜ್ಯದ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಂದ ಅತ್ಯುತ್ತಮ ಪ್ರತಿಕ್ರಿಯೆ ಬಂದಿದೆ. ಪ್ರವೇಶ ಪರೀಕ್ಷೆ ಬರೆದವರ ಅಂಕಿ ಅಂಶಗಳು ಉನ್ನತ ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳಿಗಿರುವ ಆಸಕ್ತಿ ಮತ್ತು ಉತ್ಸಾಹಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ತಪಸ್: 4987 – ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿಗಳು | 873 – 1ನೇ ಸುತ್ತಿನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು
ಸಾಧನಾ – ವೈದ್ಯಕೀಯ: 6552 – ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿನಿಯರು | 900 – 1ನೇ ಸುತ್ತಿನಲ್ಲಿ ಆಯ್ಕೆಯಾದ ವಿದ್ಯಾರ್ಥಿನಿಯರು
ಸಾಧನಾ – ಶಿಕ್ಷಣ: 1202 – ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿನಿಯರು | 335 – 1ನೇ ಸುತ್ತಿನಲ್ಲಿ ಆಯ್ಕೆಯಾದ ವಿದ್ಯಾರ್ಥಿನಿಯರು
2022ರ ಜನವರಿ 26ರಂದು ಎರಡನೇ ಸುತ್ತಿನ ಪರೀಕ್ಷೆಯು ಜರುಗಲಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಜನವರಿ 20ರಂದು ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಿಸಲಾಗುವುದು.
For more details about Tapas Project click here
For more details about Saadhana Project click here