Call Us Now
+91 94482 84602
Email Us
info@rashtrotthana.org

Workshop on National Education Policy 2020 in Davangere

Davangere, Dec 11: Workshop on National Education Policy 2020 held herein Rashtrotthana School. Workshop organized by Davangere District Private School Managing Committees Association in association with Prashikshana Bharati, a project of Rashtrotthana Prarishat.
Workshop went successful with the participation of Secretaries, Head Masters and Senior Teachers of the Schools of Davangere District. Around 250 people were participated.
Workshop Inaugurated by the Registrar of Davangere University, Smt. Gayathri Devaraj, Resource Person of DSERT Syllabus Committee, Smt. Parvati Bhat and Tahsildar, Sri B N Girish.ದಾವಣಗೆರೆಯಲ್ಲಿ ರಾಷ್ಟ್ರೀಯ ಶಿಕ್ಷಣನೀತಿ 2020 ಕಾರ್ಯಾಗಾರ
ದಾವಣಗೆರೆ, ಡಿ. 11: ಇಲ್ಲಿನ ರಾಷ್ಟ್ರೋತ್ಥಾನ ಶಾಲೆಯಲ್ಲಿ ದಾವಣಗೆರೆ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ವತಿಯಿಂದ ರಾಷ್ಟ್ರೀಯ ಶಿಕ್ಷಣನೀತಿ ಕುರಿತಾದ ಕಾರ್ಯಾಗಾರ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿರುವ ರಾಷ್ಟ್ರೋತ್ಥಾನ ಪರಿಷತ್ತಿನ ಯೋಜನೆಯಾಗಿರುವ ಪ್ರಶಿಕ್ಷಣ ಭಾರತಿ ಶಿಕ್ಷಕರ ಪ್ರಶಿಕ್ಷಣ ಪ್ರಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ದಾವಣಗೆರೆ ಜಿಲ್ಲೆಯ ಎಲ್ಲ ತಾಲೂಕುಗಳ ಶಾಲೆಯ ಕಾರ್ಯದರ್ಶಿಗಳು, ಮುಖ್ಯೋಪಾಧ್ಯಾಯರು ಹಾಗೂ ಹಿರಿಯ ಶಿಕ್ಷಕರನ್ನು ಒಳಗೊಂಡಂತೆ ಸುಮಾರು 250ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಈ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.
ಈ ಕಾರ್ಯಕ್ರಮವನ್ನು ದಾವಣಗೆರೆ ವಿ.ವಿ. ಕುಲಸಚಿವರಾದ ಶ್ರೀಮತಿ ಗಾಯಿತ್ರಿ ದೇವರಾಜ್ ಉದ್ಘಾಟಿಸಿದರು. DSERT ಪಠ್ಯಕ್ರಮ ರಚನಾ ಸಮಿತಿಯ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಪಾರ್ವತಿ ಭಟ್, ತಹಸಿಲ್ದಾರರಾದ ಶ್ರೀ ಬಿ. ಎನ್. ಗಿರೀಶ್, ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ದಾವಣಗೆರೆ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಸಹ ಕಾರ್ಯದರ್ಶಿಯಾದ ಶ್ರೀ ಪ್ರಸನ್ನ ಅತ್ತಿಗೆರೆ ಇವರು ಎಲ್ಲರನ್ನೂ ಸ್ವಾಗತಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಭಾಗವಾದ ಶಿಕ್ಷಕರು ಹೆಚ್ಚುವರಿ ತಯಾರಿಗೆ ಸನ್ನದ್ಧರಾಗಬೇಕು, ಪ್ರಯೋಗಶೀಲತೆಗೆ ಒಳಗೊಳ್ಳಬೇಕು, ಎಂದು ದಾವಣಗೆರೆ ವಿ. ವಿ. ಕುಲಸಚಿವರಾದ ಶ್ರೀಮತಿ ಗಾಯಿತ್ರಿ ದೇವರಾಜ್ ತಿಳಿಸಿದರು.
ಮಕ್ಕಳ ಕೇಂದ್ರಿತ ಶಿಕ್ಷಣಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಒತ್ತು ನೀಡುತ್ತಿದೆ. ಪ್ರತಿ ಮಗುವಿಗೆ ಒಂದು ಪಠ್ಯಕ್ರಮ ರಚನೆ ಮಾಡುವಷ್ಟರ ಮಟ್ಟಿಗೆ ಶಿಕ್ಷಕರು ಸಬಲರಾಗಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಎರಡು ಕೋಟಿಗೂ ಹೆಚ್ಚು ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು, ಅವರಿಗೆ ಅನುಕೂಲವಾಗುವ, ಪ್ರಕೃತಿಗೆ ಹತ್ತಿರವಾದ ಶಿಕ್ಷಣ ನೀಡುವುದು, ಇದರ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. 34 ವರ್ಷದ ನಂತರ ರಾಷ್ಟ್ರೀಯ ಶಿಕ್ಷಣ ನೀತಿ ಬದಲಾವಣೆಗೊಂಡಿದೆ. 2 ಲಕ್ಷಕ್ಕೂ ಹೆಚ್ಚು ಶಿಕ್ಷಣ ಆಸಕ್ತರು ಕರಡು ನೀತಿಯ ಸಾಧಕ-ಬಾಧಕಗಳ ಬಗ್ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ತಹಸಿಲ್ದಾರ್ ಶ್ರೀ ಬಿ. ಎನ್. ಗಿರೀಶ್ ಮಾತನಾಡಿ ವಿದೇಶಗಳಲ್ಲಿ ಪ್ಯಾಕೇಜ್ ಲೆಕ್ಕದ ಸಂಬಳದ ಸೀತಕ್ ಇರುವ ಬಹುತೇಕ ವಿದ್ಯಾವಂತರು ತಮ್ಮ ಪಾಲಕರನ್ನು ವೃದ್ಧಾಶ್ರಮದಲ್ಲಿ ಇರಿಸಿದ್ದಾರೆ. ಹೆತ್ತವರ ಆರೋಗ್ಯ ಸಮಸ್ಯೆಗೆ ಸ್ಪಂದಿಸಲು ಮಾನವೀಯತೆ ಮರೆಯುತ್ತಿದ್ದಾರೆ. ಮಕ್ಕಳನ್ನು ಬೆಳೆಸುವ ಕ್ರಮದಲ್ಲಿ ಎಚ್ಚರವಹಿಸಬೇಕು ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತುವ ಕೆಲಸಗಳನ್ನು ಖಾಸಗಿ ಶಾಲೆಗಳು ಮಾಡಬೇಕು ಎಂದು ತಿಳಿಸಿದರು.
ಮೊದಲನೇ ಅವಧಿಯನ್ನು DSERTಯ ಪಠ್ಯಕ್ರಮ ರಚನಾ ಸಮಿತಿಯ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಪಾರ್ವತಿ ಭಟ್ ರವರು ಉಪನ್ಯಾಸ ನೀಡಿದರು. ದೇಶದಲ್ಲಿ ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿದೆ. ಇದರಲ್ಲಿ ವಿವಿಧ ಕಾರಣಕ್ಕೆ ಮೊದಲ ಬಾರಿಗೆ ಎಲ್ಲ ಸ್ತರದಲ್ಲಿ ಅತ್ಯಂತ ಹೆಚ್ಚು ಚರ್ಚೆಯಾಗುತ್ತಿದೆ ಎಂದು ವಿಶ್ಲೇಷಿಸಿದರು. ಕಾಲಕಾಲಕ್ಕೆ ಆಗುವ ಬದಲಾವಣೆಗಳ ಅನುಭವ ಮಕ್ಕಳಿಗೆ ನೀಡಬೇಕು. 60 ಪುಟಗಳ ರಾಷ್ಟ್ರೀಯ ಶಿಕ್ಷಣ ನೀತಿಯ ಪುಸ್ತಕದಲ್ಲಿ ಮೊದಲ ಮೂರು ಅಧ್ಯಾಯಗಳಲ್ಲಿ ಬುನಾದಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಒಟ್ಟು 27 ಅಧ್ಯಾಯ ಪ್ರಾಥಮಿಕ ಹಾಗೂ 14 ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಶಿಕ್ಷಣದಿಂದ ಸಮಗ್ರ ಶಿಕ್ಷಣ ಪರಿಕಲ್ಪನೆ ಬಂದಿದೆ ಎಂದು ಅವರು ತಿಳಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಮಕ್ಕಳಿಗೆ ಕೌಶಲ್ಯಾಧಾರಿತ ಶಿಕ್ಷಣ, ಜ್ಞಾನಾಧಾರಿತ ಸಮಾಜವನ್ನು ನಿರ್ಮಾಣ ಮಾಡುವುದು, ಜೀವನದ ಅನುಭವದೊಂದಿಗೆ ಶಿಕ್ಷಣವನ್ನು ನೀಡುವುದು ಮತ್ತು ಎಲ್ಲ ಪರಿಕಲ್ಪನೆಗಳನ್ನು ಮಾತೃಭಾಷಾ ಶಿಕ್ಷಣದಲ್ಲಿ ನೀಡುವುದು ಎಂದು ತಿಳಿಸಿದರು.
ಎರಡನೇ ಅವಧಿಯನ್ನು ಶ್ರೀಮತಿ ರೇವತಿ ಮಾತಾಜಿ, ರಾಷ್ಟ್ರೋತ್ಥಾನ ಪರಿಷತ್ ಯೋಜನೆಯಾದ ಪ್ರಶಿಕ್ಷಣ ಭಾರತಿ ಪ್ರಕಲ್ಪದ ಪ್ರಮುಖರಾದ ಇವರು, ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾದ ಪ್ರಶಿಕ್ಷಣ ಭಾರತೀಯ ಕುರಿತು ಮಾತನಾಡಿ, ಈ ಯೋಜನೆಯು ಎಲ್ಲ ಖಾಸಗಿ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ತರಬೇತಿಯನ್ನು ನೀಡುವ ಯೋಜನೆಯಾಗಿದ್ದು, ಇದರಲ್ಲಿ ಭಾಷೆಯ ಕುರಿತಾದ ಕೌಶಲ್ಯಗಳು, ತಂತ್ರಜ್ಞಾನ, ಯೋಗ ಶಿಕ್ಷಣ, ಭಾರತೀಯ ಗಣಿತ ಶಾಸ್ತ್ರ ಮತ್ತು ವೈಜ್ಞಾನಿಕ ತಿಳುವಳಿಕೆ, ಒಟ್ಟಾರೆಯಾಗಿ ಶಿಕ್ಷಣದಲ್ಲಿ ಭಾರತೀಯತೆ ಕುರಿತಾಗಿ ಒಳಗೊಂಡಿದೆ ಎಂದು ವಿವರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ಶ್ರೀ ಬಿ. ಎಂ. ಉಮಾಪತಿ, ಕಾರ್ಯಧ್ಯಕ್ಷ ಶ್ರೀ ಕೆ. ಸಿ. ಲಿಂಗರಾಜ್, ಪ್ರಧಾನ ಕಾರ್ಯದರ್ಶಿ ಶ್ರೀ ಸಿ. ರಾಮಮೂರ್ತಿ, ನಿರ್ದೇಶಕರಾದ ಶ್ರೀ ಎಚ್. ಜಯಣ್ಣ, ಶ್ರೀಮತಿ ಸಹನಾ ರವಿ, ಸಹ ಕಾರ್ಯದರ್ಶಿ ಶ್ರೀ ಕೆ. ಎಸ್. ಮಂಜುನಾಥ್ ಅಗಡಿ, ಶ್ರೀ ಪ್ರಸನ್ನ ಅತ್ತಿಗೆರೆ, ಸಂಚಾಲಕ ಶ್ರೀ ಕೆ. ಎಸ್. ಪ್ರಭುಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಒಟ್ಟಾರೆ ಕಾರ್ಯಕ್ರಮವನ್ನು ಮಂಜಣ್ಣನವರು ನಿರೂಪಿಸಿದರು.