Bengaluru, Jan 23: Uttishta Bharata, Sankalpa Bharata Foundation, Yadava Seva Samithi and other organizations conducted blood donation camps at various localities of Bengaluru on Sunday.
Sankalpa foundation organized a blood donation camp at Rashtrotthana Blood Center situated in Kempegowda Nagar. The camp went on from 10.30 am to 4.00 pm and 21 units of Blood were collected.
Youth for Seva organized a blood donation camp at Rashtrotthana Health Complex, AECS layout, Kundalahalli from 10.00 am to 2 pm and 63 units of blood was collected.
The Rashtrotthana Yogic Sciences and Research Institute organized a blood donation camp at JGRV School in Kalyan Nagar from 9.00 am to 1.00 pm and 18 units of blood were accumulated.
Yadava Seva Samiti organized the blood camp at Jnana Teja English Medium school in Mathikere from 9.30 am to 4.00 pm and an enormous amount of 70 units of blood was accrued.
The Rashtriya Swayam Sevaka Sangha, Kengeri unit, organized a camp at Sandeepani High School, Nagadevanahalli till afternoon of the day and 65 units of blood were collected.
All the blood donation camps were facilitated and coordinated by Rashtrotthana Blood Center, Kempegowda Nagar, Bengaluru.
ಬೆಂಗಳೂರಿನ ವಿವಿಧೆಡೆಗಳಲ್ಲಿ ರಕ್ತದಾನ ಶಿಬಿರಗಳು
ಬೆಂಗಳೂರು, ಜನವರಿ 23: ಉತ್ತಿಷ್ಠ ಭಾರತ, ಸಂಕಲ್ಪ ಭಾರತ ಫೌಂಡೇಷನ್, ಯಾದವ ಸೇವಾಸಮಿತಿ ಮೊದಲಾದ ಸಂಘಟನೆಗಳು ಭಾನುವಾರದಂದು ಬೆಂಗಳೂರಿನ ವಿವಿಧ ಕಡೆಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದವು.
ಕೆಂಪೇಗೌಡ ನಗರದ ಗವಿಪುರಂನಲ್ಲಿರುವ ರಾಷ್ಟ್ರೋತ್ಥಾನ ರಕ್ತಕೇಂದ್ರದಲ್ಲಿ ಸಂಕಲ್ಪ ಭಾರತ ಫೌಂಡೇಷನ್ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ಕಾರ್ಯಕ್ರಮವು ಬೆಳಿಗ್ಗೆ 10.30ಕ್ಕೆ ಆರಂಭವಾಗಿ ಸಂಜೆ 4 ಗಂಟೆಯ ವರೆಗೆ ನಡೆದು, ಒಟ್ಟು 21 ಯುನಿಟ್ ರಕ್ತ ಸಂಗ್ರಹವಾಯಿತು.
ಯೂತ್ ಫಾರ್ ಸೇವಾ ಸಂಘಟನೆಯು ಬ್ರೂಕ್ ಫೀಲ್ಡ್ ನ ಎಇಸಿಎಸ್ ಲೇಔಟಿನ ಇ-ಬ್ಲಾಕಿನಲ್ಲಿರುವ ಕುಂದಲಹಳ್ಳಿಯ ರಾಷ್ಟ್ರೋತ್ಥಾನ ಆರೋಗ್ಯ ಸಂಕೀರ್ಣದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ಬೆಳಿಗ್ಗೆ 10 ಗಂಟೆಗೆ ಆರಂಭವಾದ ಶಿಬಿರವು ಮಧ್ಯಾಹ್ನ 2 ಗಂಟೆಗೆ ಮುಗಿಯಿತು. ಅಲ್ಲಿ ಒಟ್ಟು 63 ಯುನಿಟ್ ರಕ್ತ ಸಂಗ್ರಹವಾಯಿತು.
ಕಲ್ಯಾಣನಗರದಲ್ಲಿರುವ ಜೆಜಿಆರ್ವಿ ಶಾಲೆಯಲ್ಲಿ ರಾಷ್ಟ್ರೋತ್ಥಾನ ಯೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಶಿಬಿರವನ್ನು ಆಯೋಜಿಸಿತ್ತು. ಬೆಳಿಗ್ಗೆ 9 ರಿಂದ ಮಧ್ಯಾಹ‍್ನ 1 ಗಂಟೆಯವರೆಗೆ ನಡೆದ ಶಿಬಿರದಲ್ಲಿ ಒಟ್ಟು 18 ಯುನಿಟ್ ನಷ್ಟು ರಕ್ತ ಸಂಗ್ರಹವಾಯಿತು.
ಮತ್ತಿಕೆರೆ ಮುಖ್ಯರಸ್ತೆಯಲ್ಲಿರುವ ಜ್ಞಾನ ತೇಜ ಆಂಗ್ಲ ಶಾಲೆಯಲ್ಲಿ ಯಾದವ ಸೇವಾ ಸಮಿತಿಯಿಂದ ಶಿಬಿರದ ಆಯೋಜನೆಯಾಗಿತ್ತು. ಬೆಳಿಗ್ಗೆ 9:30ರಿಂದ ಸಂಜೆ 4ರ ವರೆಗೆ ಒಟ್ಟು 70 ಯುನಿಟ್ ನಷ್ಟು ರಕ್ತ ಸಂಗ್ರಹಿಸಲಾಯಿತು.
ಕೆಂಗೇರಿ ನಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಆಯೋಜಿಸಿದ್ದ ರಕ್ತದಾನ ಶಿಬಿರವು ನಾಗದೇವನಹಳ್ಳಿಯ ಸಾಂದೀಪನೀ ಪ್ರೌಢಶಾಲೆಯಲ್ಲಿ ನಡೆಯಿತು. ಮಧ್ಯಾಹ್ನದವರೆಗೂ ನಡೆದ ಶಿಬಿರದಲ್ಲಿ ಒಟ್ಟು 65 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಈ ಎಲ್ಲ ಶಿಬಿರಗಳಿಗೆ ಬೆಂಗಳೂರಿನ ಕೆಂಪೇಗೌಡನಗರದ ರಾಷ್ಟ್ರೋತ್ಥಾನ ರಕ್ತ ಕೇಂದ್ರವು ಸಹಾಯ, ಸಹಕಾರ ನೀಡಿತು.