Dharwad, Aug 1: Naga Pachami was celebrated by the Teachers and Students of Rashtrotthana Vidyalaya – Mummigatti. Puja was performed to the statues of Nagas prepared from clay.
ನಾಗರಪಂಚಮಿ ರಾಷ್ಟ್ರೋತ್ಥಾನ ವಿದ್ಯಾಲಯ – ಮುಮ್ಮಿಗಟ್ಟಿಯಲ್ಲಿ
ಧಾರವಾಡ, ಆಗಸ್ಟ್ 1: ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಲಯ – ಮುಮ್ಮಿಗಟ್ಟಿಯಲ್ಲಿ ನಾಗರಪಂಚಮಿಯನ್ನು ಆಚರಿಸಲಾಯಿತು. ಮಣ್ಣಿನಿಂದ ತಯಾರಿಸಲಾಗಿದ್ದ ನಾಗಮೂರ್ತಿಗಳಿಗೆ ವಿದ್ಯಾರ್ಥಿಗಳು ಪೂಜೆಯನ್ನು ಸಲ್ಲಿಸಿ, ಹಾಲನ್ನೆರೆದರು. ವಿದ್ಯಾಲಯದ ಮಾತಾಜಿಯವರಾದ ಶ್ರೀಮತಿ ಶೀವಲೀಲಾ ಕುಲಕರ್ಣಿಯವರು ಪಂಚಮಿ ಹಬ್ಬದ ಪೌರಾಣಿಕ ಹಿನ್ನಲೆ, ವಿಶೇಷತೆ ಹಾಗೂ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ವಿದ್ಯಾಲಯದ ಶ್ರೀಯುತ ಮಹಾಂತೇಶ ಮಠಪತಿ ಗುರೂಜಿ ಅವರು ಮಾತನಾಡುತ್ತಾ ನಾಗರಪಂಚಮಿ ಹಬ್ಬವನ್ನು ಏಕೆ ಆಚರಿಸುತ್ತಾರೆ ಎಂಬುದನ್ನು ತಿಳಿಸುತ್ತಾ, ನಾಗರಹಾವು ಹೊಲದಲ್ಲಿ ಬೆಳೆಯನ್ನು ನಾಶಮಾಡುವ ಕ್ರಿಮಿಕೀಟಗಳನ್ನು ತಿಂದು ರೈತರಿಗೆ ಸಹಾಯ ಮಾಡುವ ಪ್ರಾಣಿ ಎಂದು ಹೇಳಿದರು. ನಂತರ 1 ರಿಂದ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿರುವ ನಾಗಕಟ್ಟೆಗೆ ಕರೆದುಕೊಂಡು ಹೋಗಿ ಪೂಜೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾಲಯದ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishat
https://www.instagram.com/rashtrotthanaparishat/
https://twitter.com/Rashtrotthana_P