Call Us Now
+91 94482 84602

Prashikshana Bharati Training Workshop for Govt School Teachers @ Rashtrotthana Vidyakendra – Thanisandra

Bengaluru, July 27-28: A 2-day Training Workshop for Govt School Teachers was organised by Prashkishna Bharati herein Rashtrotthana Vidyakendra – Thanisandra.

The workshop was inaugurated by Sri N Dinesh Hegde, General Secretary of Rashtrotthana Parishat. About 57 Teachers actively participated in the workshop.

ಸರ್ಕಾರಿ ಶಾಲಾ ಶಿಕ್ಷಕರಿಗೆ ಪ್ರಶಿಕ್ಷಣಭಾರತಿ ತರಬೇತಿ ಕಾರ್ಯಾಗಾರ – ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಥಣಿಸಂದ್ರದಲ್ಲಿ
ಬೆಂಗಳೂರು, ಜುಲೈ 27-28: ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಥಣಿಸಂದ್ರದಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರಿಗಾಗಿ ಪ್ರಶಿಕ್ಷಣಭಾರತಿ ವತಿಯಿಂದ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ರಾಷ್ಟ್ರೋತ್ಥಾನ ಪರಿಷತ್ ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ನಾ. ದಿನೇಶ್ ಹೆಗ್ಡೆಯವರು ಉದ್ಘಾಟಿಸಿ, ಪ್ರಸ್ತುತ ಸಮಾಜದಲ್ಲಿ ಉತ್ತಮ ಮೌಲ್ಯಗಳು ಹಾಳಾಗುತ್ತಿರುವ ಸಂದರ್ಭದಲ್ಲಿ ಪ್ರಶಿಕ್ಷಣಭಾರತಿಯು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುತ್ತಿದೆ. ಶಿಕ್ಷಣದಲ್ಲಿ ಭಾರತೀಯತೆಯನ್ನು ತರುವ ಉದ್ದೇಶದಿಂದ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ, ಶಿಕ್ಷಕರು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಬೇಕು ಎಂದು ನುಡಿದರು.
ಎರಡು ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಶಿಕ್ಷಣದ ಪರಿಕಲ್ಪನೆ, ಶಿಕ್ಷಣದಲ್ಲಿ ಭಾರತೀಯತೆ, ಪಂಚಮುಖಿ ಶಿಕ್ಷಣ, ಪಂಚಮುಖಿ ಶಿಕ್ಷಣದ ಅನುಷ್ಠಾನ, ಆರೋಗ್ಯ ಶಿಕ್ಷಣ, ಹದಿಯರೆಯದ ಮಕ್ಕಳ ನಿರ್ವಹಣೆ, ಸಮರ್ಥ ಶಿಕ್ಷಕ ಹಾಗೂ ಸ್ವಾತಂತ್ರ್ಯ @75 ವಿಷಯಗಳ ಕುರಿತಾಗಿ ಅವಧಿಗಳನ್ನು ಜೋಡಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಶಿಕ್ಷಣಭಾರತಿಯ ಪ್ರಾಂತ ಸಂಚಾಲಕರಾದ ಶ್ರೀಯುತ ಟಿ. ಎಸ್. ಬಸವರಾಜ, ವಿದೇಶಗಳಲ್ಲಿ ಹಾಗೂ ಬೆಂಗಳೂರಿನ ನ್ಯಾಷನಲ್ ಕಾಲೇಜ್, ಕುಮರನ್ಸ್ ಕಾಲೇಜಿನಲ್ಲಿ ಇಂಗ್ಲೀಷ್ ಭಾಷಾ HODಯಾಗಿ ಜವಾಬ್ದಾರಿ ನಿರ್ವಹಿಸಿ ಈಗ ಪ್ರಸ್ತುತ ಪ್ರಶಿಕ್ಷಣಭಾರತಿಯೊಂದಿಗೆ ಜೋಡಿಸಿಕೊಂಡಿರುವ ಶ್ರೀಮತಿ ರಂಜನಿ ದತ್ತ, ವಿದ್ಯಾಭಾರತಿಯ ದಕ್ಷಿಣ ಮಧ್ಯಕ್ಷೇತ್ರದ ಸಹ ಕಾರ್ಯದರ್ಶಿನಿ ಹಾಗೂ ಬಾಲಿಕ ಶಿಕ್ಷಣದ ಪ್ರಮುಖ್ ಆಗಿರುವ ಡಾ. ನಂದಿನಿ ಲಕ್ಷ್ಮಿಕಾಂತ, ಥಣಿಸಂದ್ರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಪ್ರಾಂಶುಪಾಲರಾದ ಶ್ರೀಮತಿ ಎಸ್. ಮಂಜುಳಾ, ಬೆಂಗಳೂರಿನ ರಾಷ್ಟ್ರೋತ್ಥಾನದ CBSE ಶಾಲೆಗಳ ಸಂಚಾಲಕರಾದ ಶ್ರೀ ಮಹೇಶ್ವರಯ್ಯ ಹಾಗೂ ಪ್ರಶಿಕ್ಷಣ ಭಾರತಿಯ ಶಿಬಿರ ಸಂಯೋಜಕಿ ಶ್ರೀಮತಿ ರಾಧಾ ಎಚ್ ಉಪಸ್ಥಿತರಿದ್ದು, ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಪ್ರಶಿಕ್ಷಣ ಭಾರತಿಯ ಬೆಂಗಳೂರಿನ ಸಂಚಾಲಕರಾದ ಹಾಗೂ ಥಣಿಸಂದ್ರ ಶಾಲೆಯ ಯೋಗಾಚಾರ್ಯರಾದ ಶ್ರೀಯುತ ಮಂಜುನಾಥ್ ಮತ್ತು ಥಣಿಸಂದ್ರ ಶಾಲೆಯ ಕನ್ನಡ ಭಾಷಾ HOD ಆಗಿರುವ ಶ್ರೀ ಕಲ್ಲೇಶಪ್ಪ ಅವರು ಕಾರ್ಯಾಗಾರವನ್ನು ಆಯೋಜಿಸಿದ್ದರು.
ಕಾರ್ಯಾಗಾರದಲ್ಲಿ ಒಟ್ಟು 57 ಮಂದಿ ಸರ್ಕಾರಿ ಶಿಕ್ಷಕರು ಭಾಗವಹಿಸಿದ್ದರು. ಕಾರ್ಯಾಗಾರದ ಉಪಯುಕ್ತತೆ ಕುರಿತಾಗಿ ಮಾತನಾಡತ್ತಾ, ಕಾರ್ಯಾಗಾರದಲ್ಲಿ ನೀಡಿದ ಶಿಕ್ಷಣ, ಸಲಹೆ ಹಾಗೂ ಮಾಡಿಸಿದ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುತ್ತೇವೆ ಹಾಗೂ ಕಾರ್ಯಾಗಾರ ಬಹಳ ಪ್ರಯೋಜನಕಾರಿಯಾಗಿತ್ತು ಎಂದು ಭಾಗವಹಿಸಿದ ಶಿಕ್ಷಕರು ತಮ್ಮ ಅಭಿಪ್ರಾಯವನ್ನು ತಿಳಿಸಿದರು.

https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishat
https://www.instagram.com/rashtrotthanaparishat/
https://twitter.com/Rashtrotthana_P

Rashtrotthana #RashtrotthanaParishat #PrashikshanaBharati #TrainingWorkshop #GovtSchoolTeachers