Bengaluru, Aug 2: The 9th Batch Students of Tapas were preached Sankalpa (oath) herein Tapas Building of Banashankari.
The General Secretary of Rashtrotthana, Sri N Dinesh Hegde ji, Head of Base Institute, Sri A V Shivakumar ji, Rashtrotthana Managing Committee Member & Head of Education Division, Sri Ravikumar ji, Principal of Rashtrotthana Vidyakendra – Banashankari, Sri Vasant Kumar ji, Head of Tapas – Saadhana Projects, Smt. Rukmini Mataji and Smt. Sharada Mataji graced the occasion.
IITs in India are well renowned engineering institutions and innumerable youth aspire to get into IIT. But, an aspirant’s socio-economic background should never be a barrier in this process. With this vision, Rashtrotthana Parishat started a Project, ‘Tapas’ in 2012.
Talented & meritorious boys from rural & remote parts of Karnataka who belong to underprivileged sections of society are selected to ‘Tapas’ through a multi-level selection process. The initiative, nurtures them with free PU education & IIT-JEE coaching that enables them to secure seats in the prestigious IITs, NITs & top reputed Engineering Colleges with free hostel, food, education & other essential facilities being provided.
ತಪಸ್‍ನ 9ನೇ ಬ್ಯಾಚಿನ ಮಕ್ಕಳಿಗೆ ಸಂಕಲ್ಪ ಉಪದೇಶ
ಬೆಂಗಳೂರು, ಆಗಸ್ಟ್ 2: ತಪಸ್‍ನ 9ನೇ ಬ್ಯಾಚಿನ ಮಕ್ಕಳಿಗೆ ಸಂಕಲ್ಪ ಉಪದೇಶ ಕಾರ್ಯಕ್ರಮವನ್ನು ಇಲ್ಲಿನ ಬನಶಂಕರಿಯಲ್ಲಿರುವ ತಪಸ್ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ನಾ ದಿನೇಶ್ ಹೆಗ್ಡೆ ಜೀಯವರು, ಬೇಸ್ ಸಂಸ್ಥೆಯ ಪ್ರಮುಖರಾದ ಶ್ರೀಯುತ ಎ ವಿ ಶಿವಕುಮಾರ್ ಅವರು, ರಾಷ್ಟ್ರೋತ್ಥಾನ ಪರಿಷತ್‍ನ ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಕ್ಷಣ ವಿಭಾಗದ ಸಂಯೋಜಕರಾದ ಶ್ರೀಯುತ ರವಿಕುಮಾರ್ ಜೀಯವರು, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಬನಶಂಕರಿಯ ಪ್ರಧಾನಚಾರ್ಯರಾದ ಶ್ರೀಯುತ ವಸಂತ್ ಕುಮಾರ್ ಜೀಯವರು, ತಪಸ್ – ಸಾಧನಾ ಪ್ರಕಲ್ಪಗಳ ಸಂಯೋಜಕರಾದ ಶ್ರೀಮತಿ ರುಕ್ಮಿಣಿ ಮಾತಾಜೀ ಹಾಗೂ ಹಿರಿಯರಾದ ಶ್ರೀಮತಿ ಶಾರದಾ ಮಾತಾಜೀಯವರು ಉಪಸ್ಥಿತರಿದ್ದರು. ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿಲಾಯಿತು ಹಾಗೂ ತಪಸ್ ಮಕ್ಕಳು ಸರಸ್ವತಿ ವಂದನೆ ಹೇಳಿದರು.
ನಂತರ ಹಿರಿಯರಾದ ಶ್ರೀ ಶ್ರೀಧರಮೂರ್ತಿ ಜೀ ಅತಿಥಿ ಗಳ ಪರಿಚಯ ಮಾಡಿ ಸ್ವಾಗತಿಸಿದರು. ಶ್ರೀ ವಸಂತಕುಮಾರ್ ಜೀಯವರು ಮಕ್ಕಳಿಗೆ ಮುಂದಿನ ಜೀವನದ ಬಗ್ಗೆ ತಿಳಿಸಿದರೆ, ವಿದ್ಯಾರ್ಥಿಗಳು ತಪಸ್‍ನ ಎರಡು ವರ್ಷಗಳ ಅನುಭವಗಳನ್ನು ಹಂಚಿಕೊಂಡರು. ಬೇಸ್ ಸಂಸ್ಥೆಯ ಶ್ರೀ ಎ ವಿ ಶಿವಕುಮಾರ್ ಜೀ ಮಾತನಾಡಿ ಮುಂದೆ ಮಕ್ಕಳ ಉನ್ನತ ವಿದ್ಯಾಭ್ಯಾಸದ ಬಗ್ಗೆ ಸವಿವರವಾಗಿ ತಿಳಿಸಿ, ಮಕ್ಕಳಿಗೆ ಆಶೀರ್ವಾದ ಮಾಡಿದರು.
ಶ್ರೀ ದಿನೇಶ್ ಜೀಯವರು ಸಂಕಲ್ಪ ಬೋಧನೆ ಮಾಡಿದರು ಹಾಗೂ ವಿದ್ಯಾರ್ಥಿಗಳು ಸಂಕಲ್ಪ ದೀಕ್ಷೆ ತೆಗೆದುಕೊಂಡರು. ನಂತರ ಶ್ರೀ ದಿನೇಶ್ ಜೀಯವರು ಮಾತನಾಡಿ ಮುಂದೆ ದೇಶ ಉತ್ತಮ ಪ್ರಗತಿಯತ್ತ ಸಾಗಲು ಯುವಕರ ಪಾತ್ರ ಹೇಗಿರುತ್ತದೆಯೋ ಆ ದಾರಿಯಲ್ಲಿ ನಮ್ಮ ತಪಸ್ ಮಕ್ಕಳು ಸಾಗಬೇಕು ಮತ್ತು ತಪಸ್ ಮಕ್ಕಳಿಗೆ ಹೊರಗಿನ ಪ್ರಪಂಚದಲ್ಲಿ ಹೆಚ್ಚಿನ ಜವಾಬ್ದಾರಿ ಇರಬೇಕು ಎಂದು ತಿಳಿಸಿದರು. ನಂತರ ಹಿರಿಯರನ್ನು ವಂದಿಸಿ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಯಿತು.
ತಪಸ್ ಇದು ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಮುಖ ಯೋಜನೆಗಳಲ್ಲೊಂದು. 2 ವರ್ಷಗಳ ಪಿಯುಸಿ ಶಿಕ್ಷಣ ಹಾಗೂ ತಾಂತ್ರಿಕ ಪ್ರವೇಶ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿರುವ 9ನೇ ಬ್ಯಾಚ್ ಈ ಸಾಲಿನದ್ದು. ಪ್ರತಿಭಾವಂತರಾಗಿದ್ದು, ಆರ್ಥಿಕವಾಗಿ ಹಿಂದುಳಿದಿರುವ 10ನೇ ತರಗತಿ ಪಾಸಾದ ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಿಕೊಂಡು, ಪಿಯುಸಿ ವಿದ್ಯಾಭ್ಯಾಸ ಹಾಗೂ ಸಿಇಟಿ, ಜೆಇಇ ಮೊದಲಾದ ತಾಂತ್ರಿಕ ಪ್ರವೇಶ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಿ, ಐಐಟಿ, ಎನ್‍ಐಟಿ ಮೊದಲಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಅನುವು ಮಾಡಿಕೊಡಲಾಗುತ್ತದೆ. ಶಿಕ್ಷಣ, ತರಬೇತಿಯ ಒಟ್ಟಿಗೆ ಊಟ-ವಸತಿಗಳನ್ನೂ ಉಚಿತವಾಗಿ ಒದಗಿಸಲಾಗುತ್ತದೆ.