Call Us Now
+91 94482 84602
Email Us
info@rashtrotthana.org

Sept: Training Program for Prashikshana Bharati Teachers

ಸೆಪ್ಟೆಂಬರ್: ಪ್ರಶಿಕ್ಷಣ ಭಾರತಿ ಶಿಕ್ಷಕರ ತರಬೇತಿ ಕಾರ್ಯಾಗಾರ
ರಾಷ್ಟ್ರೋತ್ಥಾನ ಪರಿಷತ್ ಹಾಗೂ ಪ್ರಶಿಕ್ಷಣ ಭಾರತಿಯ ಸಂಯೋಗದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಿಕ್ಷಕರ ತರಬೇತಿ ಕಾರ್ಯಾಗಾರಗಳು ನಡೆದವು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಕೆ.ಆರ್.ಎಸ್‍. ಇಂಗ್ಲೀಷ್ ಮೀಡಿಯಂ ಶಾಲೆ, ರಾಯಚೂರು ಜಿಲ್ಲೆಯ ಮಸ್ಕಿ ನಗರದ ನರಸನಗೌಡ ಶಾಲೆ, ತುಮಕೂರು ಜಿಲ್ಲೆಯ ಶ್ರೀ ಚಾಣಕ್ಯ ಪಬ್ಲಿಕ್ ಸ್ಕೂಲ್, ಹಾವೇರಿಯ ರಾಣೆಬೆನ್ನೂರು ತಾಲೂಕಿನ ರೋಟ್ರಿ ಶಾಲೆ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಶಿಕ್ಷಣ ವರ್ಗಗಳು ಸಾಂಗವಾಗಿ ನಡೆದವು.
ಇನ್ನು ತುಮಕೂರಿನಲ್ಲಿ ಶ್ರೀ ಸಿದ್ದಗಂಗಾ ಮಠಾಧಿಪತಿಗಳಾದ ಪ್ರಣವ ಸ್ವರೂಪಿ ಶ್ರೀ ಶ್ರೀ ಸಿದ್ದಲಿಂಗ ಸ್ವಾಮೀಜಿಯವರಿಂದ ರಾಷ್ಟ್ರತಪಸ್ವಿ ಶ್ರೀಗುರೂಜಿಯವರ ಪುಸ್ತಕ ಲೋಕಾರ್ಪಣೆ ನೆರವೇರಿತು.
ಹಾಗೆಯೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನೆಪಿಗಾಗಿ ಯಾದಗಿರಿಯ ಹುಣಸಿಗಿ ತಾಲೂಕಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ ಹಾಗೂ ಬೆಂಗಳೂರು ಪ್ರಶಿಕ್ಷಣ ಭಾರತಿಯ ವತಿಯಿಂದ ರಾಷ್ಟ್ರೋತ್ಥಾನ ಸಾಹಿತ್ಯ ಪ್ರಸಾರ ಪುಸ್ತಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.

https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #PrashikshanaBharati #TeachersWorkshop #RashtrotthanaPrashikshanaBharati #SiddhagangaMath