Call Us Now
+91 94482 84602
Email Us
info@rashtrotthana.org

Series of Events in Tapas & Saadhana Prakalpa (Mar – May 2022)

Final Selection Camp for Tapas and Saadhana
Bengaluru: The final selection camp was held from March 24 to 27 at Rashtrotthana PU College, Thanisandra in order to select students for the medical and teaching coaching as per C.B.S.E. curriculum. In this camp, 68 girls participated for Saadhana and 34 boys participated for Tapas.
The final selection camp for Saadhana was held from April 17 to 22 at Rashtrotthana PU College, Thanisandra in order to select students for the ‘Saadhana’ medical and Saadhana teaching coaching for students studying in state curriculum. In this camp, 102 girls participated for Saadhana medical and 107 girls participated for Saadhana teaching.
Final selection camp was held for 6 days for the students of state curriculum in Tapas prakalpa, Banashankari from April 24 to 29. 88 students participated in the camp.
In both the camps faculties of BASE institution conducted classes and an exam was given to the students on the last day of the camp, based on which final selection was done.

40 students were ultimately selected to Saadhana and Tapas respectively. The criteria for selection was students’ academic progress, behaviour, interest, economic status etc. The result will be declared on 10th May. Selected students will gain 2 years PUC education and coaching for other competitive exams at free of cost.

Matru Sangama in Tapas Prakalpa
Bengaluru: Matru Sangama, a uniquely themed event was organized on April 14 and 15 for the mothers of Tapas students. Sri N. Dinesh Hegde, General Secretary, Rashtrotthana Parishat inaugurated the programme and introduced the activities of the Parishat to the gathering. In the event, Sri Ravikumar spoke about Samskara and Culture, Sri Satish of Kutumba Prabodhana Parivara spoke about ‘Hindu Family’, Smt. Sharadakka spoke about Health and Yoga and Dr. Suvarnini Konale spoke about How our lifestyle should be!

Smt. Chaya Prabhu gave information about, through the aid of Laghu Udyoga Bharati how women can earn a living by being at home by indulging in activities such as embroidery work, cooking, pickles and pappad manufacturing etc. Smt. Yashodha Mataji and team from the Art of Living conducted a Satsanga session on 14th April.

Saraswathi Pooja
Saraswathi Puja was celebrated for the success of 2nd PUC students who are studying under Tapas and are preparing to write exams in the current academic year. Saraswathi Puja was celebrated on 3rd May, on the auspicious occasion of Akshaya Tritiya to wish them the best for one of the milestones of their life.


2022 ಮಾರ್ಚ್ – ಮೇ: ತಪಸ್ ಮತ್ತು ಸಾಧನಾ ಪ್ರಕಲ್ಪಗಳಲ್ಲಿ ಕಾರ್ಯಕ್ರಮಗಳು

ತಪಸ್ ಮತ್ತು ಸಾಧನಾ ಪ್ರಕಲ್ಪಗಳ ಪ್ರವೇಶಕ್ಕಾಗಿ ‘ಅಂತಿಮ ಆಯ್ಕೆ ಶಿಬಿರ’ಗಳ ಆಯೋಜನೆ
ಥಣಿಸಂದ್ರದ ರಾಷ್ಟ್ರೋತ್ಥಾನ ಪಿ. ಯು. ಕಾಲೇಜಿನಲ್ಲಿ, ತಪಸ್ ಹಾಗೂ ಸಾಧನಾ ಪ್ರಕಲ್ಪದ ಸಿ. ಬಿ.ಎಸ್. ಇ. ಪಠ್ಯಕ್ರಮದ, ವೈದ್ಯಕೀಯ ಹಾಗೂ ಶಿಕ್ಷಣ ವಿಭಾಗಗಳಿಗೆ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳುವ ಸಲುವಾಗಿ 2022ರ ಮಾರ್ಚ್ 24ರಿಂದ 27ರ ವರೆಗೆ ಅಂತಿಮ ಆಯ್ಕೆ ಶಿಬಿರವನ್ನು ನಡೆಸಲಾಯಿತು. ಈ ಶಿಬಿರದಲ್ಲಿ ಸಾಧನಾಗೆ 68 ಹೆಣ್ಣುಮಕ್ಕಳು ಹಾಗೂ ತಪಸ್‌ಗೆ 34 ಗಂಡು ಮಕ್ಕಳು ಭಾಗವಹಿಸಿದ್ದರು.
ರಾಜ್ಯಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಸಾಧನಾ ಪ್ರಕಲ್ಪದಲ್ಲಿ 2022ರ ಏಪ್ರಿಲ್ 17ರಿಂದ 22ರ ವರೆಗೆ 6 ದಿನಗಳ ಅಂತಿಮ ಆಯ್ಕೆ ಶಿಬಿರವನ್ನು ನಡೆಸಲಾಯಿತು. ಈ ಶಿಬಿರವನ್ನು ಥಣಿಸಂದ್ರದ ರಾಷ್ಟ್ರೋತ್ಥಾನ ಪಿ. ಯು. ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಸಾಧನಾ ವೈದ್ಯಕೀಯ ವಿಭಾಗಕ್ಕೆ 102 ಹಾಗೂ ಸಾಧನಾ ಶಿಕ್ಷಣ ವಿಭಾಗಕ್ಕೆ 107ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ರಾಜ್ಯಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಬನಶಂಕರಿಯ ತಪಸ್ ಪ್ರಕಲ್ಪದಲ್ಲಿ 2022ರ ಏಪ್ರಿಲ್ 24ರಿಂದ 29ರ ವರೆಗೆ 6 ದಿನಗಳ ಅಂತಿಮ ಆಯ್ಕೆ ಶಿಬಿರ ನಡೆಯಿತು. ಶಿಬಿರದಲ್ಲಿ ಒಟ್ಟು 88 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಎರಡೂ ಶಿಬಿರಗಳಲ್ಲಿ ಬೇಸ್‌ನ ಉಪನ್ಯಾಸಕರು ಬೆಳಿಗ್ಗೆಯಿಂದ ಸಂಜೆಯವರೆಗೆ ಬೋಧನೆಮಾಡಿ, ಕೊನೆಯ ದಿನ ಪರೀಕ್ಷೆಯನ್ನು ಏರ್ಪಡಿಸಿ, ಮಕ್ಕಳ ಮುಂದಿನ ಹಂತದ ಆಯ್ಕೆಗೆ ಅನುವುಮಾಡಿಕೊಟ್ಟರು.

ಈ ಎಲ್ಲ ಶಿಬಿರಗಳಲ್ಲಿ ಭಾಗವಹಿಸಿದ ಮಕ್ಕಳ ಶೈಕ್ಷಣಿಕ ಮಟ್ಟ, ನಡವಳಿಕೆ, ಆಸಕ್ತಿ, ಆರ್ಥಿಕ ಪರಿಸ್ಥಿತಿ ಇವೆಲ್ಲವುಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅಂತಿಮವಾಗಿ ಪ್ರತಿ ಪ್ರಕಲ್ಪಕ್ಕೆ ತಲಾ 40 ಮಕ್ಕಳಂತೆ ಆರಿಸಲಾಯಿತು. ಈ ಫಲಿತಾಂಶವನ್ನು 2022ರ ಮೇ 10ರಂದು ಪ್ರಕಟಿಸಲಾಗುವುದು. ಆಯ್ಕೆಯಾದ ಮಕ್ಕಳು ತಪಸ್ ಹಾಗೂ ಸಾಧನಾ ಪ್ರಕಲ್ಪಗಳಲ್ಲಿ ಉಚಿತವಾಗಿ 2 ವರ್ಷಗಳ ಪಿ. ಯು. ಸಿ. ಹಾಗೂ ಪ್ರಶಿಕ್ಷಣವನ್ನು ಪಡೆಯಲಿದ್ದಾರೆ.

ತಪಸ್ ಪ್ರಕಲ್ಪದಲ್ಲಿ ಮಾತೃಸಂಗಮ
ತಪಸ್ ನಲ್ಲಿ ಓದುತ್ತಿರುವ ಮಕ್ಕಳ ತಾಯಂದಿರಿಗಾಗಿ 2022ರ ಏಪ್ರಿಲ್ 14 ಮತ್ತು 15ರಂದು ‘ಮಾತೃಸಂಗಮ’ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆಯವರು ಪರಿಷತ್ತಿನ ಪರಿಚಯ ಮಾಡಿಕೊಟ್ಟರು. ಈ ಶಿಬಿರದಲ್ಲಿ ಶ್ರೀ ರವಿಕುಮಾರ್‌ ಸಂಸ್ಕಾರ ಮತ್ತು ಸಂಸ್ಕೃತಿಯ ಬಗ್ಗೆ, ಕುಟುಂಬ ಪ್ರಬೋಧನ ಪರಿವಾರದ ಶ್ರೀ ಸತೀಶ್‌ ಹಿಂದೂ ಕುಟುಂಬದ ಬಗ್ಗೆ, ಶ್ರೀಮತಿ ಶಾರದಕ್ಕ ಆರೋಗ್ಯ ಮತ್ತು ಯೋಗದ ಬಗ್ಗೆ ಹಾಗೂ ಡಾ. ಸುವರ್ಣಿನಿ ನಮ್ಮ ಜೀವನಶೈಲಿ ಹೇಗಿರಬೇಕು ಎನ್ನುವುದರ ಬಗ್ಗೆ ಮಾಹಿತಿ ಕೊಟ್ಟರು.

ಶ್ರೀಮತಿ ಛಾಯಾ ಪ್ರಭು ಲಘು ಉದ್ಯೋಗಭಾರತಿಯ ಸಹಾಯದಿಂದ ಮಹಿಳೆಯರು ಮನೆಯಲ್ಲಿಯೇ ಇದ್ದು ಮಾಡಬಹುದಾದ ಕಸೂತಿ, ಅಡಿಗೆ ತಿಂಡಿಗಳು, ಉಪ್ಪಿನಕಾಯಿ, ಹಪ್ಪಳ ತಯಾರಿಕೆ ಇತ್ಯಾದಿ ಗೃಹಕೈಗಾರಿಕೆಗಳ ಬಗ್ಗೆ ತಿಳಿಸಿಕೊಟ್ಟರು. ‘ಆರ್ಟ್ ಆಫ್‌ ಲಿವಿಂಗ್’ನ ಶ್ರೀಮತಿ ಯಶೋಧಾ ಮಾತಾಜಿ ತಂಡದವರು ಏಪ್ರಿಲ್ 14ರ ಸಂಜೆ ಸತ್ಸಂಗ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಸರಸ್ವತಿ ಪೂಜೆ ಕಾರ್ಯಕ್ರಮ
ಈ ವರ್ಷ ದ್ವಿತೀಯ ಪಿ. ಯು. ಸಿ. ಪರೀಕ್ಷೆ ಬರೆಯುತ್ತಿರುವ ತಪಸ್‌ನ ವಿದ್ಯಾರ್ಥಿಗಳಿಗಾಗಿ ಸರಸ್ವತಿ ಪೂಜೆಯನ್ನು ಆಯೋಜಿಸಲಾಗಿತ್ತು. 2022ರ ಮೇ 3, ಅಕ್ಷಯ ತೃತೀಯಾದಂದು ಮಕ್ಕಳಿಂದ ಸರಸ್ವತಿ ಪೂಜೆ ಮಾಡಿಸಿ, ಪರೀಕ್ಷೆಗೆ ಶುಭ ಕೋರಿಲಾಯಿತು.

https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishath
https://www.instagram.com/rashtrotthanaparishat/
https://twitter.com/Rashtrotthana_P

Rashtrotthana #RashtrotthanaParishat #RashtrotthanaParishatBengaluru #Tapas #RashtrotthanaTapas #Saadhana #RashtrotthanaSaadhana #FinalSelection #MathruVandana #SaraswatiPuja