Call Us Now
+91 94482 84602
Email Us
info@rashtrotthana.org

Seva Vasati: Holistic Development Activities in Slums – Jan, 2022

Personality Development Training
The Seva Vasati Prakalpa of Rashtrotthana Parishat organised Personality Development Training for the young population at Rashtrotthana Sevadhama in the Netaji Nagar Seva Vasati, Magadi Road, Bengaluru.
On Jan 1st, the session was convened by Sri Darshan. The youths of Netaji Nagar gained the benefit of the computer training along with the regular trainees of Savedhama computer training centre.

Employment and Training Guidance for the youths
A workshop was organised to train and guide the youth population on Jan 20th at various Seva Vasati’s of Bengaluru.

Weekend Classes for 10th standard students
Weekend classes are going on at 12 locations to give coaching to class 10 students on every Saturday and Sunday.
All the 6 subjects of the state board curriculum are taught to students. Teachers with expertise deconstruct the concepts to the understanding capacity of students and teach them in the most simplified manner to make them excel in academics.
Nearly, 250 students of Government aided, Government and BBMP schools are the beneficiaries of the programme.

Diabetes Check-up Camp
The Seva Vasati Prakalpa organises diabetes check-up camp every month at the various Seva Vasati for the benefit of poor people. In the preliminary stage, the Diabitic check-up camp was organised at Janata Colony Seva Vasati, Mysore Road, VV Giri Colony Seva Vasati, Sheshadripuram, Netaji Nagar Seva Vasati, Magadi Road in the month of January.
The total beneficiaries of the camp were 126. The patients were also given medicines for a month. The doctors who accompanied for the camp were Dr. Suresh, Dr. Lalithammma and Dr. Srikanth.


ಸೇವಾವಸತಿ: ಕೊಳಗೇರಿಗಳ ಸರ್ವತೋಮುಖ ಅಭಿವೃದ್ಧಿ ಚಟುವಟಿಕೆಗೆಳು – ಜನವರಿ 2022

ವ್ಯಕ್ತಿತ್ವ ವಿಕಸನ ತರಗತಿ
ಯುವಕ ಯುವತಿಯರಲ್ಲಿ ವ್ಯಕ್ತಿತ್ವ ವಿಕಸನಗೊಳಿಸುವ ತರಗತಿಗಳನ್ನು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ನೇತಾಜಿ ನಗರದಲ್ಲಿರುವ ರಾಷ್ಟ್ರೋತ್ಥಾನ ಸೇವಾಧಾಮದಲ್ಲಿ ಸೇವಾವಸತಿ ಪ್ರಕಲ್ಪದಿಂದ ಏರ್ಪಡಿಸಲಾಗಿತ್ತು. ಪ್ರತಿ ಶನಿವಾರ ನಡೆಯಲಿರುವ ತರಗತಿಗಳನ್ನು ಜನವರಿ 1ರಂದು ವ್ಯಕ್ತಿತ್ವ ವಿಕಸನ ತರಬೇತುದಾರ ಶ್ರೀ ದರ್ಶನ್ ನಡೆಸಿಕೊಟ್ಟರು. ಸೇವಾಧಾಮದ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಯುವಕ ಯುವತಿಯರಲ್ಲದೇ ನೇತಾಜಿನಗರದ ಮತ್ತುಳಿದವರೂ ತರಬೇತಿಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ಯುವಕರಿಗೆ ತರಬೇತಿ ಮತ್ತು ಉದ್ಯೋಗ ಮಾರ್ಗದರ್ಶನ
ಬೆಂಗಳೂರಿನ ಸೇವಾ ವಸತಿಗಳ ಯುವಕ ಯುವತಿಯರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಸಲುವಾಗಿ ಜನವರಿ 20ರಂದು ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿರುವ ಐಸಿಐಸಿಐ ಅಕಾಡೆಮಿಯ ಶ್ರೀ ಕಿರಣ್ ಆಗಮಿಸಿ ಅಕಾಡೆಮಿ ಮೂಲಕ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ ನೀಡಲಾಗಿರುವ ತರಬೇತಿಗಳನ್ನು ಪರಿಚಯ ಮಾಡಿಕೊಟ್ಟರು.

10ನೇ ತರಗತಿ ವಿದ್ಯಾರ್ಥಿಗಳಿಗೆ ವಾರಾಂತ್ಯದ ತರಗತಿಗಳು
ಸೇವಾವಸತಿಗಳಲ್ಲಿರುವ 10ನೇ ತರಗತಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಬೆಂಗಳೂರಿನ 12 ಸ್ಥಳಗಳಲ್ಲಿ ಶನಿವಾರ ಮತ್ತು ಭಾನುವಾರ ತರಗತಿಗಳು ನಡೆಯುತ್ತಿವೆ.
ಎಲ್ಲ 6 ವಿಷಯಗಳನ್ನು (ಕನ್ನಡ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಇಂಗ್ಲೀಷ್ ಮತ್ತು ಹಿಂದಿ) ಬೋಧಿಸಲಾಗುತ್ತಿದೆ. ವಿಧ್ಯಾರ್ಥಿಗಳು ಉತ್ತೀರ್ಣರಾಗಲು ಅನುಕೂಲವಾಗುವ ರೀತಿ ವಿಷಯಗಳನ್ನು ನುರಿತ ಶಿಕ್ಷಕರು ಮನದಟ್ಟು ಮಾಡಿಸುತ್ತಾರೆ.
ಸರ್ಕಾರಿ, ಬಿ.ಬಿ.ಎಂ.ಪಿ ಹಾಗೂ ಅನುದಾನಿತ ಶಾಲೆಗಳ 250 ವಿದ್ಯಾರ್ಥಿಗಳು ತರಗತಿಗಳ ಪ್ರಯೋಜನ ಪಡೆಯುತ್ತಿದ್ದಾರೆ.

ಮಧುಮೇಹ ತಪಾಸಣಾ ಶಿಬಿರ
ಸೇವಾವಸತಿಗಳ ಬಡ ಜನರಿಗಾಗಿ ಪ್ರತಿ ತಿಂಗಳು ಮಧುಮೇಹ ತಪಾಸಣಾ ಶಿಬಿರ ನಡೆಸಲು ಸೇವಾವಸತಿ ಪ್ರಕಲ್ಪ ಯೋಜಿಸಿ, ಅದರಂತೆ ಮೊದಲ ಹಂತದಲ್ಲಿ ಬೆಂಗಳೂರಿನ ಮೈಸೂರು ರಸ್ತೆಯ ಜನತಾ ಕಾಲೋನಿ, ಶೇಷಾದ್ರಿಪುರಂನ ವಿ.ವಿ.ಗಿರಿ ಕಾಲೋನಿ, ಮಾಗಡಿ ರಸ್ತೆಯ ನೇತಾಜಿನಗರಗಳಲ್ಲಿ ಮಧುಮೇಹ ತಪಾಸಣಾ ಶಿಬಿರಗಳನ್ನು ನಡೆಸಲಾಯಿತು. ಜನವರಿ 27 ರಂದು ನೇತಾಜಿನಗರದಲ್ಲಿ, 28 ರಂದು ವಿ.ವಿ.ಗಿ ರಿ ಕಾಲೋನಿಯಲ್ಲಿ ಮತ್ತು 29 ರಂದು ಜನತಾ ಕಾಲೋನಿಯಲ್ಲಿ ನಡೆಸಲಾಯಿತು.
ಸೇವಾವಸತಿ ಬಡ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಡೆದ ಈ ಶಿಬಿರಗಳಲ್ಲಿ 126 ಜನರು ಪರೀಕ್ಷೆಗೆ ಒಳಪಟ್ಟರು. ಅವರ ಮಧುಮೇಹ ಮಟ್ಟದ ವರದಿ ಆಧರಿಸಿ ತಜ್ಞ ವೈದ್ಯರು ಚಿಕಿತ್ಸೆ ನೀಡಿದರು. ರೋಗಿಗಳಿಗೆ ತಿಂಗಳಿಗೆ ಆಗುವಷ್ಟು ಔಷಧಿ ನೀಡಲಾಯಿತು.
ನೇತಾಜಿ ನಗರದಲ್ಲಿ ಡಾ|| ಸುರೇಶ್, ವಿ.ವಿ. ಗಿರಿ ಕಾಲೋನಿಯಲ್ಲಿ ಡಾ|| ಲಲಿತಮ್ಮ ಮತ್ತು ಜನತಾ ಕಾಲೋನಿಯಲ್ಲಿ ಡಾ|| ಶ್ರೀಕಾಂತ್ ರೋಗಿಗಳನ್ನು ಪರೀಕ್ಷಿಸಿ ಉಪಚರಿಸಿದರು.

https://www.facebook.com/rashtrotthanaparishath/
https://rashtrotthana.org/
https://www.sahityabooks.com/

Rashtrotthana #RashtrotthanaParishat #AnudinaChintana #RashtrotthanaSahitya #Yoga #RashtrotthanaYoga #SevaVasathi #SevaBasthi #HolisticDevelopmentofSlums #SlumDevelopmentBengaluru #RashtrotthanaSevaVasathi #RashtrotthanaSevaBasthi #PersonalityDevelopmentTraining #EmploymentGuidance #10thSurePass #10thSurePassCoaching #10thCoaching #DiabetesCheckup #DiabetesFreeCheckup