Call Us Now
+91 94482 84602
Email Us
info@rashtrotthana.org

Tapas Alumni Meeting in Bengaluru

Bengaluru: Recently, Tapas Alumni Meeting was conducted in Tapas Centre Banashnkari. Totally, 99 Students of 2014 to 2020 Batches participated.

President of Rashtrotthana Parishat, Sri M P Kumarji and General Secretary, Sri N Dinesh Hegde graced the occasion.

ತಪಸ್ ಹಿರಿಯ ವಿದ್ಯಾರ್ಥಿಗಳ ಸಹಮಿಲನ
ಬೆಂಗಳೂರು: ಇತ್ತೀಚೆಗೆ ತಪಸ್ಸಿನ ಹಿರಿಯ ವಿದ್ಯಾರ್ಥಿಗಳ ಸಹಮಿಲನ ಕಾರ್ಯಕ್ರಮವನ್ನು ಬನಶಂಕರಿಯ ತಪಸ್ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ 2014ರಿಂದ 2020ರ ವರೆಗೆ ಅಧ್ಯಯನ ಮಾಡಿದ ಹಿರಿಯ ವಿದ್ಯಾರ್ಥಿಗಳಲ್ಲಿ 99 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರಾಷ್ಟ್ರೋತ್ಥಾನ ಪರಿಷತ್‍ನ ಅಧ್ಯಕ್ಷರಾದ ಶ್ರೀ ಎಂ. ಪಿ. ಕುಮಾರ್ ಜೀ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆಯವರು ಉಪಸ್ಥಿತರಿದ್ದರು.
ಶ್ರೀ ಎಂ. ಪಿ. ಕುಮಾರ್ ಜೀ ಅವರು ಮಾತನಾಡಿ, ವಿದ್ಯಾರ್ಥಿಗಳ ಯಶಸ್ಸೇ ನಮ್ಮ ಮುಖ್ಯ ಉದ್ದೇಶ. ಆ ನಿಟ್ಟಿನಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರವು ಸದಾ ಅವರ ಬೆಳವಣಿಗೆಗೆ ಮುನ್ನುಡಿಯಾಗಿರುತ್ತದೆ ಎಂದು ತಿಳಿಸಿದರು.
ಶ್ರೀ ನಾ ದಿನೇಶ್ ಹೆಗ್ಡೆ ಜೀ ಅವರು ವಿದ್ಯಾರ್ಥಿಗಳ ಜೊತೆ ಸಂವಾದವನ್ನು ನಡೆಸಿ, ಅವರ ಮುಂದಿನ ಜೀವನವನ್ನು ರೂಪಿಸಿಕೊಳ್ಳಲು ಬೇಕಾದ ಸಲಹೆ ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಪಸ್ ಹಿರಿಯ ವಿದ್ಯಾರ್ಥಿಗಳು ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕುತ್ತಾ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರಲ್ಲದೇ, ತಪಸ್‍ನ ಶಿಕ್ಷಣ ವ್ಯವಸ್ಥೆಯ ಪ್ರಭಾವ ರಾಜ್ಯದಲ್ಲಿ ಯಾವ ಮಟ್ಟದಲ್ಲಿ ಹೆಮ್ಮರವಾಗಿ ಬೆಳೆದಿದೆ ಎಂಬುದನ್ನೂ ಸ್ಮರಿಸಿಕೊಂಡರು.
ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಶಿಕ್ಷಣ ವಿಭಾಗದ ಸಂಯೋಜಕರಾಗಿರುವ ಶ್ರೀ ರವಿ ಜೀ, ಬನಶಂಕರಿ ರಾಷ್ಟ್ರೋತ್ಥಾನ ವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ವಸಂತ್ ಕುಮಾರ್ ಜೀ, ತಪಸ್ ಮತ್ತು ಸಾಧನಾ ಪ್ರಕಲ್ಪಗಳ ಸಂಯೋಜಕರಾಗಿರುವ ಶ್ರೀಮತಿ ರುಕ್ಮಿಣಿ ಮಾತಾಜೀ ಹಾಗೂ ಅನೇಕ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishat/
https://www.instagram.com/rashtrotthanaparishat/
https://twitter.com/Rashtrotthana_P

Rashtrotthana #RashtrotthanaParishat #Tapas #RashtrotthnaTapas #TapasAlumniMeet #AlumniMeet