
5 ಜಿಲ್ಲೆಗಳಲ್ಲಿ ನಿರಂತರ ಪ್ರಶಿಕ್ಷಣ ಶಾಲೆಗಳ ತರಬೇತಿ ಕಾರ್ಯಾಗಾರ: ಪ್ರಶಿಕ್ಷಣ ಭಾರತಿಯಿಂದ
ಮಂಡ್ಯ ಜಿಲ್ಲೆ: 20-08-22 ಹಾಗೂ 21-08-22ರಂದು ಮಂಡ್ಯದ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಪ್ರಾದೇಶಿಕ ಕೇಂದ್ರದಲ್ಲಿ ಪ್ರಶಿಕ್ಷಣಭಾರತಿಯಿಂದ ಆತ್ರೇಯ ವಿದ್ಯಾಸಂಸ್ಥೆ ಹಾಗೂ ಶ್ರೀ ಕಾಲಭೈರವ ವಿದ್ಯಾಸಂಸ್ಥೆ ಶಾಲೆಗಳ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಾಗಾರದಲ್ಲಿ ಡಾ. ನಂದಿನಿಯವರು NEP-2020 ಮತ್ತು ಪಂಚಮುಖಿ ಶಿಕ್ಷಣ ಅನುಷ್ಠಾನ, ಶ್ರೀಯುತ ಬಸವರಾಜ ಗುರೂಜಿಯವರು ಶಿಕ್ಷಣದಲ್ಲಿ ಭಾರತೀಯತೆ, ವಿದ್ಯಾಭಾರತಿಯ ಮಂಡ್ಯದ ಉಪಾಧ್ಯಕ್ಷರಾದ ಶ್ರೀಪತಿಯವರು ಆದರ್ಶ ಶಿಕ್ಷಕ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಬಗ್ಗೆ ಮಾತನಾಡಿದರು. ಕಾರ್ಯಾಗಾರದಲ್ಲಿ ಒಟ್ಟು 27 ಶಿಕ್ಷಕರು ಉಪಸ್ಥಿತರಿದ್ದರು.
ಧಾರವಾಡ ಜಿಲ್ಲೆ: 27-8-22ರಂದು ಧಾರವಾಡದ ಗರಗದಲ್ಲಿ ಮಕ್ಕಳ ತೋಟ ಹಾಗೂ ಜಯಕೀರ್ತಿ ಶಾಲೆಯ ಶಿಕ್ಷಕರಿಗೆ ಕಾರ್ಯಗಾರವನ್ನು ಆಯೋಜಿಸಲಾಗಿಗತ್ತು. ಕಾರ್ಯಾಗಾರದಲ್ಲಿ ಶ್ರೀ ವಿನಾಯಕ್ ಭಟ್, ಶಾಲೆಯ ಮುಖ್ಯೋಪಾಧ್ಯಾಯರಾದ ಕೀರ್ತಿವತಿ, ಶಿಕ್ಷಕರಾದ ಮಂಜುಳಾ, ಸಂಗೀತಾ, ಜಯಕೀರ್ತಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಬಸವರಾಜ ಕಮ್ಮಾರ ಮಾತನಾಡಿದರು. ಕಾರ್ಯಾಗಾರದಲ್ಲಿ ಮಗುವಿನ ಸರ್ವಾಂಗೀಣ ವಿಕಾಸ, ತರಗತಿ ನಿರ್ವಹಣೆ, ಪಂಚಮುಖಿ ಶಿಕ್ಷಣ ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದರು. ಒಟ್ಟು 32 ಶಿಕ್ಷಕರು ಉಪಸ್ಥಿತರಿದ್ದರು.
ಬಳ್ಳಾರಿ ಜಿಲ್ಲೆ: 27-8-22 ಹಾಗೂ 28-8-22ರಂದು ಬಳ್ಳಾರಿಯ ಶ್ರೀಗುರುದೇವ ಶಾಲೆ ಹಾಗೂ ಮದರ್ ತೆರೇಸಾ ಶಾಲೆಯ ಶಿಕ್ಷಕರಿಗಾಗಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು. ಪ್ರತಿಕ್ಷಣ ಭಾರತೀಯ ಸಂಚಾಲಕರಾದ ಶ್ರೀ ಬಸವರಾಜ ಅವರು, DSERTಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಪಾರ್ವತಿಭಟ್, ಶ್ರೀ ಗೋಪಿಯವರು, ಶಿಕ್ಷಕಿಯಾದ ಶ್ರೀಮತಿ ಪಂಕಜ ಅವರು ಹಲವಾರು ಶೈಕ್ಷಣಿಕ ಹಾಗೂ ರಾಷ್ಟ್ರದ ವಿಷಯಗಳ ಬಗ್ಗೆ ಮಾತನಾಡಿದರು. ಒಟ್ಟು 40 ಶಿಕ್ಷಕರು ಉಪಸ್ಥಿತರಿದ್ದರು.
ವಿಜಯಪುರ ಜಿಲ್ಲೆ: 27-8-22 ಹಾಗೂ 28-8-22ರಂದು ವಿಜಯಪುರದ ಬಸವನ ಬಾಗೇವಾಡಿಯಲ್ಲಿ ನೇತಾಜಿ ಪ್ರೌಢಶಾಲೆ, ಅಮೋಘ ಪ್ರಾಥಮಿಕ ಶಾಲೆ, ಜ್ಞಾನಭಾರತಿ ಶಾಲೆ ಹಾಗೂ ನಿವೇದಿತಾ ಶಾಲೆಯ ಶಿಕ್ಷಕರಿಗಾಗಿ ನಿರಂತರ ಪ್ರಶಿಕ್ಷಣ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಶ್ರೀ ಬಾಳುಸಾಹೇಬ ಬಕ್ಷಿ, ಶ್ರೀ ಸಂಗಮೇಶ ಪೂಜಾರಿ, ಶ್ರೀ ರಾಜಶೇಖರ ಪಾಟೀಲ, ಶ್ರೀ ಲಕ್ಷ್ಮಣ ಕುಲಕರ್ಣಿ, ಶ್ರೀಮತಿ ಪ್ರತಿಭಾ ಪಾಟೀಲ, ಶ್ರೀ ಅಶೋಕ ಹಂಚಲಿ, ಶ್ರೀಮತಿ ಸುಮಾ ಬೊಳರೆಡ್ಡಿ ಮುಂತಾದವರು ಶೈಕ್ಷಣಿಕ ಹಾಗೂ ದೇಶದ ಕುರಿತು ಮಾತನಾಡಿದರು. ಒಟ್ಟು 52 ಮಂದಿ ಉಪಸ್ಥಿತರಿದ್ದರು.
ಬಾಲಕೋಟೆ ಜಿಲ್ಲೆ: 10-9-22 ಹಾಗೂ 11-9-22ರಂದು ಬಾಗಲಕೋಟೆಯ ಮುಧೋಳ ತಾಲೂಕಿನ ಮಿರ್ಜಿಯಲ್ಲಿ ಮಾತೃಶ್ರೀ ಶಾಲೆ, ಶ್ರೀ ಕರೆಮ್ಮದೇವಿ ಮಾಡರ್ನ್ ಶಾಲೆ ಹಾಗೂ ಶ್ರೀಗುರು ಬಸವ ಶಾಲೆಯ ಶಿಕ್ಷಕರಿಗಾಗಿ 2 ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಾಗಾರದಲ್ಲಿ ಶ್ರೀ ಟಿ. ಎಸ್. ಬಸವರಾಜ್, ಶ್ರೀ ಅವಿನಾಶ್ ಹಿರೇಮಠ್, ಶ್ರೀ ಗಿರೀಶ್ ಮನಗೂಳಿ, ಶ್ರೀ ಮೋಹನ್ ದೇಶಪಾಂಡೆ, ಶ್ರೀ ದುಂಡಯ್ಯ ಹಿರೇಮಠ, ಶ್ರೀ ಪರಶುರಾಮ ನಿಂಗಣ್ಣನವರ್, ಶ್ರೀ ಲಕ್ಷ್ಮಣ ಬೀಳಗಿ, ಶ್ರೀ ರವಿಕಂಗಳ ಅವರು ಶೈಕ್ಷಣಿಕ ವಿಸ್ತಾರ, ಪದ್ಧತಿ ಹಾಗೂ ದೇಶದ ಅಭಿವೃದ್ದಿಯ ಕುರಿತು ಮಾತನಾಡಿದರು. ಒಟ್ಟು 28 ಜನ ಶಿಕ್ಷಕರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #PrashikshanaBharati #TeachersWorkshop #RashtrotthanaPrashikshanaBharati