Call Us Now
+91 94482 84602

Yoga Day celebration in Basavanagudi

21st June, Bengaluru: Rashtrotthana Yogic Sciences and Research Institute has celebrated International Yoga Day at 16 locations across Bengaluru and at Rashtrotthana Vidyalaya, Davangere.

Dr. Puneeth Kumar P. was the chief guest at Rashtrotthana Yoga center, Kamakshipalya, Bengaluru. Dr. Giridhara Upadhyaya and Sri Venkataswamy Reddy were the chief guests at Rashtrotthana Yoga center, Kundalahalli. In Rashtrotthana Yoga center, Sadashiv Nagar Dr. V.B. Arathi, President of Vibhu Academy was the chief guest. Dr. Nidhi Chaudary and Sri LakshmiNarayana Sharama arrived as the chief guests for the yoga day celebrations at Konanakunte and Gayatri Nagar Rashtrotthana Yoga centers respectively. Prof. Karunakara Reddy graced the yoga day celebrations at Rashtrotthana Yoga center, Kalyan Nagar.

H.H. Sri Sri Dharmavratananda Swamiji of Ramakrishna Mutt made his divine presence in the yoga day celebrations organized at Sri Vasavi Convention Center, Basavanagudi and Sri Rajesh Padmar, Trustee of Samartha Bharata organization was also present in the event.

ವಿವಿಧೆಡೆ ಜರುಗಿದ ರಾಷ್ಟ್ರೋತ್ಥಾನ ಯೋಗ ಕಾರ್ಯಕ್ರಮ

ಜೂನ್ 21, ಬೆಂಗಳೂರು: ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ ಬೆಂಗಳೂರಿನ 16 ಕಡೆಗಳಲ್ಲಿ ಹಾಗೂ ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.

ಬೆಂಗಳೂರಿನ ಕಾಮಾಕ್ಷಿಪಾಳ್ಯದ ರಾಷ್ಟ್ರೋತ್ಥಾನ ಯೋಗಕೇಂದ್ರದಲ್ಲಿ ಡಾ. ಪುನೀತ್ ಕುಮಾರ್ ಪಿ. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಕುಂದಲಹಳ್ಳಿಯ ರಾಷ್ಟ್ರೋತ್ಥಾನ ಯೋಗಕೇಂದ್ರದಲ್ಲಿ ಡಾ. ಗಿರಿಧರ ಉಪಾಧ್ಯಾಯ ಹಾಗೂ ಶ್ರೀ ವೆಂಕಟಸ್ವಾಮಿ ರೆಡ್ಡಿ ಹಾಗೂ ಸದಾಶಿವನಗರದ ರಾಷ್ಟ್ರೋತ್ಥಾನ ಯೋಗಕೇಂದ್ರದಲ್ಲಿ ವಿಭು ಅಕಾಡೆಮಿಯ ಅಧ್ಯಕ್ಷರಾದ ಡಾ. ವಿ. ಬಿ. ಆರತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೋಣನಕುಂಟೆ ಯೋಗಕೇಂದ್ರದಲ್ಲಿ ಡಾ. ನಿಧಿ ಚೌಧರಿ, ಗಾಯತ್ರಿನಗರ ಯೋಗಕೇಂದ್ರದಲ್ಲಿ ಶ್ರೀ ಲಕ್ಷ್ಮೀನಾರಾಯಣ ಶರ್ಮಾ, ಕಲ್ಯಾಣನಗರ ಯೋಗಕೇಂದ್ರದಲ್ಲಿ ಪ್ರೊ. ಕರುಣಾಕರ ರೈ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಚಂದಗಾಣಿಸಿದರು.

ಬಸವನಗುಡಿಯ ವಾಸವಿ ಕನ್ವೆನ್ಷನ್ ಸೆಂಟರ್ ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಠದ ಶ್ರೀ ಶ್ರೀ ಧರ್ಮವ್ರತಾನಂದ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಿದ್ದರು. ಸಮರ್ಥ ಭಾರತ ಸಂಘಟನೆಯ ಟ್ರಸ್ಟಿಗಳಾದ ಶ್ರೀ ರಾಜೇಶ್ ಪದ್ಮಾರ್ ಉಪಸ್ಥಿತರಿದ್ದರು.

Rashtrotthana #RashtrotthanaParishat #RashtrotthanaParishatBengaluru #RashtrotthanaYoga #yoga #GoldenJubilee #IDY #IDY2022 #InternationalDayofYoga #InternationalDayofYoga2022 #SamarthaBharata #YogaForHumanity