Call Us Now
+91 94482 84602
Email Us
info@rashtrotthana.org

Yoga Day Programs by Rashtrotthana flagged off by Dr. Devi Prasad Shetty

Bengaluru, June 11: Herein Jayanagar Rashtrotthana Yoga Centre, the Chairman and Founder of Narayana Health flagged of the Yogathon and all the programs organised in the occasion of International Day of Yoga. Along with the Golden Jubilee Celebration of Rashtrotthana Yoga also planned. In the event organised by Rashtrotthana Yogic Sciences and Research Institute, the General Secretary of Rashtrotthana, Sri N Dinesh Hegde also addressed audience and Yoga enthusiasts made the Yogathon successful.

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸರಣಿ ಕಾರ್ಯಕ್ರಮಗಳಿಗೆ ಚಾಲನೆ: ಡಾ. ದೇವಿ ಪ್ರಸಾದ್ ಶೆಟ್ಟಿಯವರಿಂದ
ಬೆಂಗಳೂರು, ಜೂನ್ 11 ಜೂನ್: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ‘ಯೋಗಕ್ಕಾಗಿ ನಡಿಗೆ’ ಕಾರ್ಯಕ್ರಮವು ಜಯನಗರದ ರಾಷ್ಟ್ರೋತ್ಥಾನ ಯೋಗಕೇಂದ್ರ, ಅಜಿತಸ್ಮೃತಿಯಲ್ಲಿ ನಡೆಯಿತು. ರಾಷ್ಟ್ರೋತ್ಥಾನ ಪರಿಷತ್ತಿನ ಯೋಗ ಪ್ರಕಲ್ಪಕ್ಕೆ 50 ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ನಾರಾಯಣ ಹೃದಯಾಲಯದ ಸ್ಥಾಪಕರಾದ ಪದ್ಮಭೂಷಣ ಡಾ. ದೇವಿ ಪ್ರಸಾದ್ ಶೆಟ್ಟಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ದಿನೇಶ್ ಹೆಗ್ಡೆ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹರಾದ ಶ್ರೀ ನಾ. ತಿಪ್ಪೇಸ್ವಾಮಿಯವರು ಉಪಸ್ಥಿತರಿದ್ದರು.
ಡಾ. ದೇವಿ ಪ್ರಸಾದ್ ಶೆಟ್ಟಿಯವರು ಮಾತನಾಡಿ, ಮನುಷ್ಯನ ಜೀವನದಲ್ಲಿ ಯೋಗದ ಪಾತ್ರ ಅತ್ಯಂತ ಮಹತ್ತ್ವದ್ದು. ನಮ್ಮ ಬದುಕಿನಲ್ಲಿ ವಿವಿಧ ರೀತಿಯ ಚಟುವಟಿಕೆಗಳನ್ನು ಮಾಡುತ್ತೇವೆ. ಆದರೆ ಬದುಕಿನ ಕೊನೆಯ 30 ವರ್ಷಗಳಲ್ಲಿ ದೈಹಿಕ ಮತ್ತು ಮಾನಸಿಕವಾಗಿ ವಿವಿಧ ಸಮಸ್ಯೆಗಳನ್ನು ಎದುರಿಸುತ್ತೇವೆ. ಇಂಥ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಿಂದೆ ಬಿದ್ದಿರುವುದರಿಂದ ನಮ್ಮ ಆಯಸ್ಸನ್ನು 60 ವರ್ಷಗಳಿಗೆ ಸೀಮಿತಗೊಳಿಸಿದ್ದೇವೆ. ಆದರೆ ಯೋಗ ನಮ್ಮ ಆಯಸ್ಸನ್ನೂ, ಆರೋಗ್ಯವನ್ನೂ ವೃದ್ಧಿಸಿ ಸುಖಕರ ಜೀವನವನ್ನು ಕಲ್ಪಿಸುತ್ತದೆ. ಯೋಗವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು 100 ವರ್ಷಗಳ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಶ್ರೀ ನಾ. ದಿನೇಶ್ ಹೆಗ್ಡೆಯವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪರಿಶ್ರಮದಿಂದ ಯೋಗ ಇಡೀ ಜಗತ್ತಿಗೆ ಪರಿಚಿತವಾಗಿದೆ. ಯೋಗ ಎಂದರೆ ಸರ್ವತೋಮುಖ ಬೆಳವಣಿಗೆ ಎಂದು ಅರ್ಥ. ಮನುಷ್ಯನ ಬದುಕಿನ ವಿಕಾಸಕ್ಕೆ ಯೋಗ ಅತ್ಯಗತ್ಯ. ಯೋಗವನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಳವಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ರಾಷ್ಟ್ರೋತ್ಥಾನ ಯೋಗಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಸ್ವಸ್ಥ – ಸುಸ್ಥಿರ ಸಮಾಜನಿರ್ಮಾಣದ ಧ್ಯೇಯದೊಂದಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ಶ್ರೀ ಅಜಿತ್ ಕುಮಾರ್ ಅವರು 1972ರಲ್ಲಿ ರಾಷ್ಟ್ರೋತ್ಥಾನ ಯೋಗಕೇಂದ್ರವನ್ನು ಪ್ರಾರಂಭಿಸಿದರು. ಇದೀಗ 50 ವರ್ಷಗಳನ್ನು ಪೂರೈಸುತ್ತಿರುವ ಯೋಗಕೇಂದ್ರದ ಚಟುವಟಿಕೆಗಳು ಇನ್ನೂ ಹೆಚ್ಚಿನ ಜನರಿಗೆ ತಲುಪಲಿ, ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ ಎಂದರು.
ಶ್ರೀ ದಿನೇಶ್ ಹೆಗ್ಡೆಯವರು ಅತಿಥಿಗಳಾದ ಡಾ. ದೇವಿ ಪ್ರಸಾದ್ ಶೆಟ್ಟಿಯವರಿಗೆ ಗೌರವ ಸಮರ್ಪಣೆ ಮಾಡಿದರು. ಶ್ರೀ ಮಂಚಲ್ ಮಹೇಶ್ ಅವರು ಅತಿಥಿ ಪರಿಚಯ ಮಾಡಿದರು. ಕುಮಾರಿ ನಿತ್ಯಾ ನಾಗಜೋಷಳ ಪ್ರಾರ್ಥಿಸಿದರು. ಉಷಾ ಹೊಳ್ಳ ವಂದಿಸಿದರು.