Yoga plays a vital role in nurturing a sustainable life. The purpose of celebrating yoga day will be accomplished only when each and every citizen is introduced to yoga and appropriate guidance is given to adopt a healthy lifestyle’. – Dr. Manjunath, Director, Sri Jayadeva Institute of Cardiovascular Sciences and Research Center, Bengaluru
21st June, Bengaluru: Rashtrotthana Yogic Sciences and Research Institute in association with Samartha Bharata, celebrated the International Yoga Day at Chandragupta Maurya Playgrounds in Jayanagar, Bengaluru.
Dr. C.N. Manjunath, Director, Sri Jayadeva Institute of Cardiovascular Sciences and Research Center, Bengaluru participated in the event and said that we are living a mechanical life in this modern world. We are prone to many physical and mental illnesses due to our wrong and misinterpreted lifestyle. He further added that Yoga plays a vital role in nurturing a sustainable life. The purpose of celebrating yoga day will be accomplished only when each and every citizen is introduced to yoga and appropriate guidance is given to adopt a healthy lifestyle and we should work towards reaching this goal.
Sri N. Dinesh Hegde, General Secretary of Rashtrotthana Parishat made the introductory remarks and said that Yoga is one of the important contributions of India to the world and Rashtrotthana Parishat is working to spread the message of yoga to the society from past 50 years, which is indeed a revolutionary step. He also said that it is extremely happy and a pride moment as Rashtrotthana Yoga Center has completed 50 years and is successful in bringing a transformation in people’s life and society as a whole.
Sri N. Thippeswamy, Kshetriya Karyavaha of Rashtriya SwayamSevaka Sangha and guider of the ‘Samartha Bharata’ organization addressed the gathering and said that Hon’ble Prime Minister Sri Narendra Modi has introduced yoga to the world and has rendered a global recognition to yoga. Today, India has championed the cause of spreading yoga to the world and it is a milestone that the entire world is celebrating yoga day. India is honored with the recognition of ‘Vishwaguru’ because of such unique features of it.
Yoga was performed in the event under the guidance of Sri Ningaraju, Yoga teacher at Rashtrotthana. Kum. Krupa Kumar rendered the invocation. Sri Manchal Mahesh welcomed the gathering and Smt. Usha Holla rendered the vote of thanks.
‘ಮಾನವೀಯತೆಗಾಗಿ ಯೋಗ’: ರಾಷ್ಟ್ರೋತ್ಥಾನದಿಂದ ಅರ್ಥಪೂರ್ಣ ಯೋಗ ದಿನಾಚರಣೆ
‘ಸ್ವಸ್ಥ ಜೀವನವನ್ನು ನಿರ್ಮಿಸುವಲ್ಲಿ ಯೋಗದ ಪಾತ್ರ ಅನನ್ಯವಾದದ್ದು. ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಯೋಗವನ್ನು ಪರಿಚಯಿಸಿ, ಆರೋಗ್ಯಪೂರ್ಣ ಬದುಕನ್ನು ಕಟ್ಟಿಕೊಳ್ಳಲು ನೆರವಾಗುವುದೇ ನಿಜವಾದ ಯೋಗ ದಿನದ ಆಚರಣೆ.’ – ಡಾ. ಮಂಜುನಾಥ್
ಜೂನ್ 21, ಬೆಂಗಳೂರು: ‘ಸಮರ್ಥ ಭಾರತ’ದ ಸಹಯೋಗದೊಂದಿಗೆ, ರಾಷ್ಟ್ರೋತ್ಥಾನ ಯೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ ಬೆಂಗಳೂರಿನ ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ, ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಸಿ. ಎನ್. ಮಂಜುನಾಥ್ ಮಾತನಾಡಿ, ಆಧುನಿಕ ಪ್ರಪಂಚದಲ್ಲಿ ನಾವು ಯಂತ್ರಗಳಂತೆ ಬದುಕುತ್ತಿದ್ದೇವೆ. ದೇಹ ಮತ್ತು ಮನಸ್ಸುಗಳೆರಡಕ್ಕೂ ಅನಾರೋಗ್ಯ ಉಂಟಾಗುತ್ತಿರಲು ನಮ್ಮ ಜೀವನಶೈಲಿಯೇ ಕಾರಣ. ಸ್ವಸ್ಥ ಜೀವನವನ್ನು ನಿರ್ಮಿಸುವಲ್ಲಿ ಯೋಗದ ಪಾತ್ರ ಅನನ್ಯವಾದದ್ದು. ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಯೋಗವನ್ನು ಪರಿಚಯಿಸಿ, ಆರೋಗ್ಯಪೂರ್ಣ ಬದುಕನ್ನು ಕಟ್ಟಿಕೊಳ್ಳಲು ನೆರವಾಗುವುದೇ ನಿಜವಾದ ಯೋಗ ದಿನದ ಆಚರಣೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಹೆಜ್ಜೆಯಿಡಬೇಕು ಎಂದು ಹೇಳಿದರು.
ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ, ಶ್ರೀ ನಾ. ದಿನೇಶ ಹೆಗ್ಡೆ ಪ್ರಾಸ್ತಾವಿಕ ನುಡಿಗಳನ್ನಾಡಿ ಭಾರತದ ಮಹತ್ತ್ವದ ಕೊಡುಗೆಯಾದ ಯೋಗವನ್ನು ಸಮಾಜಕ್ಕೆ ತಲುಪಿಸುವಲ್ಲಿ ರಾಷ್ಟ್ರೋತ್ಥಾನ ಪರಿಷತ್ ಕಳೆದ 50 ವರ್ಷಗಳಿಂದ ನಿರಂತರವಾಗಿ ಪ್ರಯತ್ನಿಸುತ್ತಿದೆ. ಇದು ಜನರ ಜೀವನದಲ್ಲಿ ಯೋಗವನ್ನು ಅಳವಡಿಸುವ ಧ್ಯೇಯವನ್ನು ಒಂದು ಚಳುವಳಿಯಾಗಿ ಮುನ್ನಡೆಸಿಕೊಂಡು ಬಂದಿದೆ. ರಾಷ್ಟ್ರೋತ್ಥಾನ ಯೋಗಕೇಂದ್ರಕ್ಕೆ 50 ವರ್ಷಗಳು ತುಂಬಿದ ಈ ಶುಭಸಂದರ್ಭದಲ್ಲಿ, ಜನರ ಬದುಕಿನಲ್ಲಿ ಪರಿವರ್ತನೆಯನ್ನು ತರುವಲ್ಲಿ ನಮ್ಮ ಯೋಗ ಸಂಸ್ಥೆ ಯಶಸ್ವಿಯಾಗಿದೆ ಎಂದು ತಿಳಿಸಲು ಹೆಮ್ಮೆಯಾಗುತ್ತಿದೆ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ಹಾಗೂ ಸಮರ್ಥ ಭಾರತ ಸಂಘಟನೆಯ ಗೌರವಾಧ್ಯಕ್ಷರಾದ ಶ್ರೀ ನಾ. ತಿಪ್ಪೇಸ್ವಾಮಿಯವರು ಮಾತನಾಡಿ, ಜಗತ್ತಿಗೆ ಭಾರತದ ಕೊಡುಗೆಗಳಲ್ಲಿ ಯೋಗ ಮಹತ್ತ್ವಪೂರ್ಣವಾದದ್ದು. ಮಾನ್ಯ ಪ್ರಧಾನಮಂತ್ರಿಗಳು ಯೋಗಕ್ಕೆ ಇಡೀ ವಿಶ್ವದಲ್ಲಿ ಮನ್ನಣೆ ಸಿಗುವಂತೆ ಮಾಡಿದ್ದು ನಾವೆಲ್ಲ ಹೆಮ್ಮೆ ಪಡುವಂತಹ ಸಂಗತಿ. ಇಂದು ವಿಶ್ವಾದ್ಯಂತ ಯೋಗ ದಿನ ಆಚರಣೆಯಾಗುತ್ತಿರುವುದು ಭಾರತದ ದಾಖಲೆಯೇ ಸರಿ. ಇಂಥ ವೈಶಿಷ್ಟ್ಯಪೂರ್ಣ ಕಾರ್ಯಗಳಿಂದಲೇ ಭಾರತಕ್ಕೆ ‘ವಿಶ್ವಗುರು ಭಾರತ’ ಎಂಬ ಮನ್ನಣೆ ಸಿಕ್ಕಿದೆ ಎಂದರು.
ರಾಷ್ಟ್ರೋತ್ಥಾನದ ಯೋಗಶಿಕ್ಷಕರಾದ ಶ್ರೀ ನಿಂಗರಾಜು ಅವರ ತಂಡದಿಂದ ಯೋಗ ಪ್ರದರ್ಶನ ನಡೆಯಿತು. ಕು. ಕೃಪಾ ಕುಮಾರ್ ಪ್ರಾರ್ಥಿಸಿದರು. ಶ್ರೀ ಮಂಚಲ್ ಮಹೇಶ್ ಸ್ವಾಗತಿಸಿದರು. ಶ್ರೀಮತಿ ಉಷಾ ಹೊಳ್ಳ ವಂದಿಸಿದರು.