Call Us Now
+91 94482 84602
Email Us
info@rashtrotthana.org

YouTube Channel ‘Rashtrotthana’ launched

Greetings & Wishes of Yugadi!

On the auspicious day of Yugadi, Sri M P Kumar, President of Rashrotthana Parishat, Bengaluru, launched the YouTube Channel ‘Rashtrotthana’ – https://www.youtube.com/channel/UCccixFI_2_JydCPQWBCYpPQ

Channel, ‘Rashtrotthana’ wishes to recall the rich cultural heritage, deep routed scientific temper and philosophical strength of the Sanatana Samskruti (eternal culture) and to address the present day challenges.

ಯುಗಾದಿಯ ಹಾರ್ದಿಕ ಶುಭಾಶಯಗಳು!

ಶುಭಕೃತ್ ಯುಗಾದಿಯ ಈ ಶುಭಸಂದರ್ಭದಲ್ಲಿ ರಾಷ್ಟ್ರೋತ್ಥಾನ ಪರಿಷತ್ತು, ಬೆಂಗಳೂರು, ಇದರ ಅಧ್ಯಕ್ಷರಾದ ಶ್ರೀ ಎಂ.ಪಿ. ಕುಮಾರ್ ಅವರು ’ರಾಷ್ಟ್ರೋತ್ಥಾನ’ ಯೂಟ್ಯೂಬ್ ಚಾನೆಲ್ಲನ್ನು – https://www.youtube.com/channel/UCccixFI_2_JydCPQWBCYpPQ ಲೋಕಮುಖಗೊಳಿಸಿದರು.

‘Rashtrotthana’ YouTube ಚಾನೆಲ್, ಇದು ರಾಷ್ಟ್ರೋತ್ಥಾನ ಪರಿಷತ್ತು, ಬೆಂಗಳೂರು, ಇದರ ಹೊಸ ಉಪಕ್ರಮ. ಸೇವಾಭಾವವನ್ನು ಇನ್ನಷ್ಟು ಸದೃಢಗೊಳಿಸಲು, ತನ್ಮೂಲಕ ಆತ್ಮೋನ್ನತಿಯನ್ನು ಹೊಂದಲು, ವಿಚಾರ-ವಿವೇಕದ ಪಾತ್ರ ದೊಡ್ಡದು. ಆ ನಿಟ್ಟಿನಲ್ಲಿ, ಸನಾತನ ಸಂಸ್ಕೃತಿಯ ಹೂರಣವನ್ನು ನಮ್ಮ ಬುದ್ಧಿಭಾವಗಳಲ್ಲಿ ಮರುಪೂರಣ ಮಾಡಿಕೊಳ್ಳುವ ಒಂದು ಮಹದಾಸೆಯನ್ನು ಇಟ್ಟುಕೊಂಡಿದೆ, ‘Rashtrotthana’ YouTube ಚಾನೆಲ್. ಹುಟ್ಟಿನಿಂದ ಪ್ರಾರಂಭಿಸಿ, ಜೀವನದ ಚರಮವನ್ನು ತಲುಪುವವರೆಗೂ ಭಿನ್ನ-ವಿಭಿನ್ನ ಸವಾಲುಗಳು ಎದುರಾಗುತ್ತವೆ. ಆ ಸವಾಲುಗಳನ್ನು ಎದುರಿಸಲು ಜ್ಞಾನ-ವಿಜ್ಞಾನ ಪ್ರಣೀತ ಉಪಾಯಗಳೂ ಹಲವು ಇವೆ. ಅವುಗಳ ಬಗೆಗೆ ನಾಡಿನ ಹೆಸರಾಂತ ವಿದ್ವಾಂಸರಿಂದ ಚಿಂತನ – ಮಂಥನ ನಮ್ಮ ಈ ‘Rashtrotthana’ YouTube ಚಾನೆಲ್ಲಿನಲ್ಲಿ ನಡೆಯಲಿದೆ. ಹಳೆಬೇರು ಹೊಸಚಿಗುರಿನಿಂದ ಪ್ರಾರಂಭವಾಗುವ ಸರಣಿ ಕಥಾ ಭಾರತಿಯ ಮಜಲನ್ನು ದಾಟಿ ಮುಂದೆ ಸಾಗಲಿದೆ.

https://rashtrotthana.org/
YouTube: https://www.youtube.com/channel/UCccixFI_2_JydCPQWBCYpPQ
FaceBook: https://www.facebook.com/rashtrotthanaparishath
Instagram: https://www.instagram.com/rashtrotthanaparishat/
Twitter: https://twitter.com/Rashtrotthana_P

Rashtrotthana #RashtrotthanaParishat #RashtrotthanaParishatBengaluru #RashtrotthanaYouTube #RashtrotthanaChannel #RashtrotthanaYouTubeLaunch #RashrotthanaLaunchByMPKumar