Call Us Now
+91 94482 84602
Email Us
info@rashtrotthana.org

Yugadi: A day to envision the path of Sanmarga

As per the Bharatiya calendar, Yugadi marks the beginning of a new year. The leaves of the spring dazzle with the message of equality and harmony among mankind as mother nature captivates herself with greenery and enchanting scenery.

Yugadi is one of the most celebrated festivals of Bharat and is earmarked as an auspicious occasion to begin the festive season in India. The festival is celebrated in various regions with unique nomenclature and customs according to its nativity.

According to Brahma Purana, the significance and history of Yugadi can be traced back to the era of Daksha Prajapati. It is believed that Prajapati created the world on the eve of Yugadi (i.e. on the first day of Chaitra Masa, Shukla Paksha) during the sunrise and anchored the chronology of the world since then. He then transferred the responsibility of nurturing the world to various Devatas.

The Smriti Kowstubha narrates that Lord Vishnu took the form of Matsya avatar to save the world during the time of Revati Nakshatra, Vishkambha Yoga on the eve of Yugadi. It is also believed that Lord Sri Rama returned to Ayodhya from Vanavasa on this day and the people of Ayodhya celebrated the death of Ravana. The Puranas also mentions that Lord Indra blessed a king called ‘Vasu’ on the eve of Yugadi with clothes and jewellery.

The ayana, ruthu, masa, paksha and tithi on which yugadi falls is accustomed to a Karma and strong intent. The Uttarayana is believed to be the day for devata’s (Agnirjyothirahushuklaha). Hence, Yugadi is considered as extremely auspicious for the worship of god. The Vasanta ruthu embellishes the world with serene beauty. The fragrance of newly blossomed flowers and the verdant green leaves enchants and purifies the soul of every person and echoes the message of harmony and unity to mankind. It revamps the world from past misdeeds and synthesises them to walk in the path of harmony, success and positive endeavour. The blooming flowers in Chaitra masa produce enormous nectar, thus the month is sacred for the worship of god.

The mixture of neem and jaggery is offered to the god on the day of Yugadi and distributed as prasadam. The neem leaves have exceptional medicinal value and are a boon against diseases. The jaggery is consumed along with neem to reduce the extreme vata caused by the neem. The message and philosophy behind consuming the bevu-bella is; one should accept the positives and negatives of life equally to run the mechanism of life in a stable and successful manner. It is also believed that the neem leaves are dearest to Prajapati and it is offered to him on Yugadi.

The celebration of Yugadi is not just embedded in traditional perspectives but also has a scientific dimension. A person should pioneer his altruistic deeds and thoughts to bear the fruits of positivity and success. On this auspicious occasion of Yugadi, every individual should pledge to walk in the path of Dharma and embrace sanmarga for the welfare of oneself and the entire universe.

ಹೊಸತನದ ಸಂದೇಶ – ಯುಗಾದಿ ವಿಶೇಷ

ಋತು, ಮಾಸ, ಪರ್ವ ಎಲ್ಲಕ್ಕೂ ಪ್ರಾರಂಭಮಂಗಲವಾದ ಯುಗಾದಿ ಭಾರತೀಯರಿಗೆ ಹೊಸವರ್ಷ. ಹೊಸ ಹೂ ತಳಿರುಗಳಿಂದ ಪ್ರಕೃತಿಯು ಹೊಸತನದ ಸಂದೇಶವನ್ನು ಸಾರುವುದು ಯುಗಾದಿಯ ವಿಶೇಷ. ಜೀವನದ ಕಹಿಸಿಹಿಗಳನ್ನು ಸಮವಾಗಿ ಭಾವಿಸಿ ಶುಭಧ್ಯೇಯದ ಪಥದಲ್ಲಿ ಸಾಗುವುದು ಹಬ್ಬದ ಆದರ್ಶ.

ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುವ ವಿಶೇಷವಾದ ಹಬ್ಬ ಯುಗಾದಿ. ಶಾಸ್ತ್ರಗಳಲ್ಲಿ ಮುಖ್ಯವೆಂದು ಪರಿಗಣಿಸಲ್ಪಟ್ಟಿರುವ ಮಹಾಪರ್ವ. ಋತು, ಮಾಸ, ಸಂವತ್ಸರ ಎಲ್ಲಕ್ಕೂ ಪ್ರಾರಂಭಮಂಗಲವಾದ ಈ ಹಬ್ಬ ಭಾರತೀಯರಿಗೆ ಹೊಸವರ್ಷದ ಆರಂಭವೂ ಹೌದು. ಹೀಗೆ ಬಹುಮುಖವಾದ ಹಬ್ಬದ ಪ್ರಾಮುಖ್ಯವನ್ನು ಹಲವು ರೀತಿಗಳಲ್ಲಿ ಗ್ರಹಿಸಬಹುದು.

ಪ್ರಜಾಪತಿಯು ಈ ದಿನ, ಅಂದರೆ ಚೈತ್ರಮಾಸದ ಶುಕ್ಲಪಕ್ಷದ ಮೊದಲ ದಿನ, ಸೂರ್ಯೋದಯದ ಸಮಯದಲ್ಲಿ ಜಗತ್ತನ್ನು ಸೃಷ್ಟಿ ಮಾಡಿ, ಕಾಲಗಣನೆಯನ್ನು ಪ್ರಾರಂಭಮಾಡಿದ. ಕಾಲದ ಅವಯವಗಳನ್ನು ದೇವತೆಗಳಿಗೆ ಕೊಟ್ಟು ಜಗತ್ತಿನ ಸೃಷ್ಟಿಯನ್ನು ಮುಂದುವರೆಸಿರಿ ಎಂದು ಆದೇಶ ನೀಡಿದ ಎಂದು ಬ್ರಹ್ಮಪುರಾಣದಲ್ಲಿ ಉಲ್ಲೇಖವಿದೆ. ಅದೇ ದಿನ ರೇವತೀನಕ್ಷತ್ರದ ವಿಷ್ಕಂಭಕಯೋಗದ ಹಗಲಿನಲ್ಲಿ ಭಗವಂತನು ಮತ್ಸ್ಯಾವತಾರ ಮಾಡಿದನು ಎಂದು ಸ್ಮೃತಿಕೌಸ್ತುಭವು ಹೇಳುತ್ತದೆ. ಇದು ಶ್ರೀರಾಮ ವನವಾಸದಿಂದ ಹಿಂದಿರುಗಿದ ದಿನ, ಅಯೋಧ್ಯೆಯ ಪ್ರಜೆಗಳು ಶ್ರೀರಾಮ ಮಾಡಿದ ರಾವಣವಧೆಯ ಕೊಂಡಾಟದ ಉತ್ಸವವನ್ನು ಪ್ರಾರಂಭಮಾಡಿದ ದಿನ ಮತ್ತು ಇಂದ್ರನು ‘ವಸು’ ಎಂಬ ರಾಜನಿಗೆ ವಸ್ತ್ರ, ಅಲಂಕಾರಗಳನ್ನು ಅನುಗ್ರಹಿಸಿದ ದಿನ ಎಂಬುದಾಗಿಯೂ ಪ್ರಸಿದ್ಧಿಯಿದೆ.

ಯುಗಾದಿಯ ಆಚರಣೆಗೆ ಆರಿಸಿಕೊಂಡಿರುವ ಅಯನ, ಋತು, ಮಾಸ, ಪಕ್ಷ, ತಿಥಿ ಎಲ್ಲವೂ ಒಂದೊಂದು ಕರ್ಮ ಮತ್ತು ಉದ್ದೇಶಗಳಿಗೆ ಸಮರ್ಥವಾಗಿ ಹೊಂದಿಕೊಂಡಿವೆ. ಉತ್ತರಾಯಣವು ‘ಅಗ್ನಿರ್ಜ್ಯೋತಿರಹಶ್ಶುಕ್ಲಃ’ ಅಂದರೆ ದೇವತೆಗಳ ಹಗಲೆಂದು ಕರೆಯಲ್ಪಟ್ಟಿದೆ. ಯುಗಾದಿಯು ದೇವತೆಗಳ ಆರಾಧನೆಗೇ ಪ್ರಧಾನವಾಗಿರುವ ಹಬ್ಬವಾಗಿರುವುದರಿಂದ ಉತ್ತರಾಯಣವನ್ನೇ ಆಚರಣೆಗೆ ತೆಗೆದುಕೊಳ್ಳಲಾಗಿದೆ. ವಸಂತಋತುವು ಪ್ರಕೃತಿಯು ಹೊಸ ಹೂ ತಳಿರುಗಳಿಂದ ಸಿಂಗರಿಸಿಕೊಂಡು, ಜಗತ್ತಿಗೆ ಹೊಸತನದ ಸಂದೇಶವನ್ನು ಸಾರುವ ಋತು. ಹಳೆಯ ಹೇವರಿಕೆಯ ಸಂಸ್ಕಾರಗಳನ್ನು ಕೊಡವಿಕೊಂಡು ಶುಭಧ್ಯೇಯ ಸಾಧನೆಯ ಮಾರ್ಗದಲ್ಲಿ ಹೊಸಹೆಜ್ಜೆಯನ್ನಿಡುವ ಸಂದೇಶವನ್ನು ವಸಂತಋತುವು ನೀಡುತ್ತದೆ. ಅಷ್ಟೇ ಅಲ್ಲದೆ ಈ ಋತುವಿನ ಸಮಶೀತೋಷ್ಣವಾದ ವಾತಾವರಣವೂ ದೇವತಾಪೂಜೆಗೆ ಬೇಕಾದ ಅರ್ಥಸಂಗ್ರಹ ಮತ್ತು ಪೂಜಾಕಾರ್ಯಕ್ಕೆ ಹಿತಕರವಾಗಿದೆ.

ಪುಷ್ಪಪಲ್ಲವಗಳು ಬಿರಿಯುವುದು ಮತ್ತು ಅವುಗಳಲ್ಲಿ ಮಧುವು ಸೃಷ್ಟಿಯಾಗುವುದು ಚೈತ್ರಮಾಸದಲ್ಲಾಗಿರುವುದರಿಂದ ಅದೇ ಮಾಸದಲ್ಲಿ ಈ ಹಬ್ಬದ ಆಚರಣೆ ಸೂಕ್ತವೆನಿಸುತ್ತದೆ. ಜಗತ್ತಿನ ಸೃಷ್ಟಿ ಮತ್ತು ಧಾರಣೆಪೋಷಣೆಗಳಿಗೆ ಕಾರಣವಾದ ಅನ್ನ ಮತ್ತು ಓಷಧಿಗಳಿಗೆ ರಾಜನಾದ ಚಂದ್ರನ ವೃದ್ಧಿಗೆ ಕಾರಣವಾಗಿರುವುದರಿಂದ ಶುಕ್ಲಪಕ್ಷ ಸೂಕ್ತವಾಗಿದೆ. ಪ್ರಥಮಾ ತಿಥಿಯು ಚಂದ್ರನ ಪ್ರಥಮ ಕಲೆಯು ಕಾಣಿಸಿಕೊಳ್ಳುವ ದಿನ. ಉಳಿದ ತಿಥಿಗಳಲ್ಲಿ ಚಂದ್ರನು ಅಪೂರ್ಣ ಅಥವಾ ಪೂರ್ಣನಾಗಿರುವುದರಿಂದ ಅವು ಚಂದ್ರನ ಕಲೆಯ ಮಧ್ಯದ ಅಥವಾ ಅಂತ್ಯದ ಸಮಯಗಳಾಗಿರುವುದರಿಂದ ಪ್ರಥಮಾ ತಿಥಿಯೇ ಪ್ರಶಸ್ತವಾಗಿದೆ. ಹೀಗೆ ಯುಗಾದಿಯನ್ನು ಕಾಲೌಚಿತ್ಯವನ್ನೂ ಗಮನದಲ್ಲಿರಿಸಿಕೊಂಡು ಆಚರಣೆ ಮಾಡಲಾಗುತ್ತದೆ.

ಯುಗಾದಿಯ ದಿವಸ ದೇವರಿಗೆ ವಿಶೇಷವಾಗಿ ಬೇವಿನ ನೈವೇದ್ಯವನ್ನು ಮಾಡುತ್ತಾರೆ. ಬೇವು ಅಸ್ಥಿಗತವಾದ ರೋಗವನ್ನೂ, ವಿಷದ ಸೋಂಕನ್ನೂ ನಿವಾರಿಸುವ ಮಹೌಷಧಿ. ಬೇವಿನೊಂದಿಗೆ ಬೆಲ್ಲವನ್ನು ಸೇವಿಸುವ ಪದ್ಧತಿಯೂ ಇದೆ. ಏಕೆಂದರೆ ಕಹಿಯಾದ ಬೇವಿನ ಎಲೆಯಲ್ಲಿ ವಾತದೋಷವಿದೆ. ಸಿಹಿಯಾದ ಬೆಲ್ಲದೊಡನೆ ಅದನ್ನು ಸೇವಿಸಿದರೆ ಆ ದೋಷವು ಶಮನಹೊಂದುತ್ತದೆ ಎಂದು ತಿಳಿಸಲಾಗಿದೆ. ಬೇವು ಬೆಲ್ಲಗಳ ಯೋಗವು ದೇಹದೊಂದಿಗೆ ಭಾವನಾತ್ಮಕವಾಗಿಯೂ ಪರಿಣಾಮಕಾರಿಯಾಗಿದೆ. ಇದು ಜೀವನದ ಕಹಿಸಿಹಿಗಳನ್ನು ಸಮವಾಗಿ ಭಾವಿಸಿ ಉತ್ತಮವಾದ ಜೀವನವನ್ನು ನಡೆಸುವ ಆದರ್ಶವನ್ನು ನೆನಪಿಗೆ ತರುತ್ತದೆ. ಯುಗಾದಿಯ ದೇವತೆಯಾದ ಪ್ರಜಾಪತಿ ಕಾಲಪುರುಷನಿಗೆ ಬೇವಿನ ಚಿಗುರೆಲೆಯು ಅತಿಪ್ರಿಯವಾದ ಭಕ್ಷ್ಯವೆಂದೂ ನಂಬಿಕೆಯಿದೆ. ಹೀಗೆ ಯುಗಾದಿಪರ್ವಕ್ಕೆ ಜ್ಞಾನಿಗಳು ವಿಧಿಸಿರುವ ದ್ರವ್ಯಕರ್ಮಗಳೆಲ್ಲವೂ ಅರ್ಥಪೂರ್ಣವಾಗಿಯೂ, ಔಚಿತ್ಯಪೂರ್ಣವಾಗಿಯೂ ಇವೆ. ಹಾಗಾಗಿ ಈ ಶುಭದಿನದಂದು ಒಳ್ಳೆಯ ಯೋಚನೆ, ಒಳ್ಳೆಯ ಕೆಲಸಗಳನ್ನು ಮಾಡಿ ಇಡೀ ವರ್ಷ ಉತ್ತಮ ಧರ್ಮ, ಕರ್ಮ ಮತ್ತು ಫಲಗಳನ್ನು ಹೊಂದುವ ಸ್ಪೂರ್ತಿ ಪಡೆಯಬೇಕು. ಇಡೀ ವರ್ಷಕ್ಕೆ ಬೇಕಾದ ಸಂವಿಧಾನವನ್ನು ವಿವೇಕಪೂರ್ಣವಾಗಿ ಹಾಕಿಕೊಂಡು ಸನ್ಮಾರ್ಗದಲ್ಲಿ ನಡೆಯುವ ಶುಭಸಂಕಲ್ಪವನ್ನು ಕೈಗೊಳ್ಳಬೇಕು.