• August 14, 2024
  • RP
  • 0

A. Na. Kru. Award – 2022 to Nadoja Dr. S R Ramaswamy

Bengaluru, May 19: A. Na. Kru. Award – 2022 conferred to Nadoja Dr. S R Ramaswamy, Ex-President of Rashtrotthana Parishat and Hon. Editor-in-Chief of Rashtrotthana Sahitya.

ಬೆಂಗಳೂರು, ಮೇ 19: ರಾಷ್ಟ್ರೋತ್ಥಾನ ಪರಿಷತ್‍ನ ನಿಕಟಪೂರ್ವ ಅಧ್ಯಕ್ಷರು ಹಾಗೂ ರಾಷ್ಟ್ರೋತ್ಥಾನ ಸಾಹಿತ್ಯದ ಗೌರವ ಪ್ರಧಾನ ಸಂಪಾದಕರಾದ ನಾಡೋಜ ಡಾ. ಎಸ್. ಆರ್. ರಾಮಸ್ವಾಮಿಯವರಿಗೆ 2022ನೇ ಸಾಲಿನ ಅ.ನ.ಕೃ. ಪ್ರಶಸ್ತಿ ಪ್ರದಾನ ಮಾಡಲಾಯಿತು.

Award Ceremony was held herein HN Multimedia Auditorium, National College, Basavanagudi, by A. Na. Kru. Pratishthana.

ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅ.ನ.ಕೃ. ಪ್ರತಿಷ್ಠಾನದ ವತಿಯಿಂದ ಬಸವನಗುಡಿಯ ನ್ಯಾಶನಲ್ ಕಾಲೇಜ್‌ನ ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

Shatavadhani Dr. R. Ganesh and Prajavani Editor, Sri Ravindra Bhat Ainakai presented the award.

ಶತಾವಧಾನಿ ಡಾ. ಆರ್. ಗಣೇಶ್ ಅವರು ಎಸ್. ಆರ್. ರಾಮಸ್ವಾಮಿಯವರಿಗೆ ಅಭಿನಂದನೆ ಸಲ್ಲಿಸಿದರು ಹಾಗೂ ಪ್ರಜಾವಾಣಿ ಸಂಪಾದಕರಾದ ಶ್ರೀ ರವೀಂದ್ರ ಭಟ್ ಐನಕೈ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಡಾ. ಆರ್. ಗಣೇಶ್ ಅವರು ಹೇಳಿದ್ದು ಹೀಗೆ… ರಾಮಸ್ವಾಮಿಯವರು ಬ್ರಹ್ಮ ಪುರಸೊತ್ತಿದ್ದಾಗ ಎಲ್ಲರನ್ನೂ ಕೇಳಿ ಒಳ್ಳೊಳ್ಳೆಯ ಅಂಶಗಳನ್ನೆಲ್ಲ ಕಲೆಹಾಕಿ ಹುಟ್ಟಿಸಿರಬೇಕು. ಡಿಗ್ರಿ ಪಡೆಯದ ನಿಜವಾದ ಡಿಗ್ರಿವಂತರಾದ ಅವರು ಡಿವಿಜಿಯವರ ಕಣ್ಣು, ಕಿವಿ, ಕೈಯಾಗಿದ್ದವರು. ರಾಮಸ್ವಾಮಿಯವರು ಒಮ್ಮೆ ಮಾಡಿದ ಜೋಕನ್ನು ಇನ್ನೊಮ್ಮೆ ಮಾಡುವದಿಲ್ಲ. ಒಂದು ವಾರ ಮೊದಲೇ ಜನಿಸಿದ ಇವರು ಇಮ್ಮೆಚ್ಯೂರ್ಡ್‍ ಬೇಬಿಯಾದರೂ ಬಾರ್ನ್ ಮೆಚ್ಯೂರ್ಡ್. ಎರಡು ಶತಮಾನಗಳ ಕೊಂಡಿಯಾದ ರಾಮಸ್ವಾಮಿವರು ಸಾರ್ವಜನಿಕ ಜೀವನದ ಅವಧೂತ.

ಡಾ. ಎಸ್. ಆರ್. ರಾಮಸ್ವಾಮಿಯವರು… ಅ.ನ.ಕೃ ಅವರು ಮೇಲ್ನೋಟಕ್ಕೆ ಕಾದಂಬರಿ ಸಾರ್ವಭೌಮರೆನಿಸಿದರೂ ಅವರದು ಬಹುಮುಖ ಪ್ರತಿಭೆ. ಕನ್ನಡ ಭಾಷೆಯನ್ನು ಕೇಂದ್ರವಾಗಿಟ್ಟು ನಡೆಸಿದ ಹೋರಾಟದ ಜೊತೆಗೆ ಕನ್ನಡ ಜನರಲ್ಲಿ ಓದುವ ಅಭಿರುಚಿಯನ್ನು ಬೆಳೆಸಿದರು. ಕಾದಂಬರಿಯ ಮಾಧ್ಯಮದ ಮೂಲಕ ಅದನ್ನು ಸಾಧಿಸಿದರು. ಉದಯೋನ್ಮುಖ ಬರಹಗಾರರನ್ನು ಬೆಳೆಸಿದರು. ಅವರು ಸುಸಂಸ್ಕೃತರು ಉನ್ನತ ಸಂಸ್ಕೃತಿಯ ಮೂರ್ತರೂಪರಾಗಿದ್ದರು. ವ್ಯಕ್ತಿಸಂಪರ್ಕಕ್ಕೆ ಬೆಲೆ ಕೊಡುತ್ತಿದ್ದವರು. ಅವರ ಗ್ರಂಥ ರಚನೆಯಲ್ಲಿ ನೆರವಾಗುತ್ತಿದ್ದ ನನಗೆ ಅವರಿಂದ ಸಿಕ್ಕ ಪ್ರೀತಿ ವಾತ್ಸಲ್ಯ ಅಪಾರ. ಅಂತಹವರ ಹೆಸರಿನ ಪ್ರಶಸ್ತಿ ನನಗೆ ದೊರಕುತ್ತಿರುವುದು ಅಪಾರ ಸಂತೋಷ.

ಶ್ರೀ ರವೀಂದ್ರ ಭಟ್‍ ಐನಕೈ ಅವರ ಮಾತುಗಳು… ತಂತ್ರಜ್ಞಾನದ ಪರಿಣಾಮವಾಗಿ ನಮ್ಮ ಮನೆಯಲ್ಲೇ ನಾವಿಂದು ದಡ್ಡರಾಗುತ್ತಿದ್ದೇವೆ. ನಾವು ಮೊಬೈಲ್‌ನಲ್ಲಿ ಕೆಲವಷ್ಟೇ ತಿಳಿದಿದ್ದು, ಉಳಿದದ್ದಕ್ಕೆ ಮಕ್ಕಳನ್ನು ಮೊಮ್ಮಕ್ಕಳನ್ನು ಅವಲಂಬಿಸಬೇಕಾಗಿದ್ದು, ಅವರು ನಮ್ಮನ್ನು ದಡ್ಡರೆಂದು ಭಾವಿಸುವಂತಾಗಿದೆ. ಇದರ ಪರಿಣಾಮವೆಂದರೆ ನಾವು ಅನಕೃ ಕೃತಿ ಓದಿ, ಶಿವರಾಮ ಕಾರಂತರ ಕೃತಿ ಓದಿ ಎಂದು ಅವರಿಗೆ ಹೇಳಿದರೆ ಮಕ್ಕಳು ಇವರೇ ಇಷ್ಟು ದಡ್ಡರು, ಇನ್ನು ಅವರೆಲ್ಲ ಅದೆಷ್ಟು ದಡ್ಡರಿರಬೇಕು ಎಂದು ಭಾವಿಸಿದರೂ ತಪ್ಪಲ್ಲ. ಈಗೀಗ ನೋಡುವುದು ಹೆಚ್ಚಾಗಿದೆ, ಪತ್ರಕರ್ತರೂ ಸಹ ಕೇಳಿಸಿಕೊಳ್ಳುವುದು ಕಡಿಮೆಯಾಗಿದೆ. ಇಂತಹ ಸನ್ನಿವೇಶದಲ್ಲಿ ಓದುವ ಹವ್ಯಾಸವನ್ನು ಹೇಗೆ ಬೆಳೆಸುವುದು ಎನ್ನುವುದೇ ನಮ್ಮ ಮುಂದಿರುವ ಬಹು ದೊಡ್ಡ ಸವಾಲು.

https://rashtrotthana.org/

#Rashtrotthana #RashtrotthanaParishat #RashtrotthanaSahitya #SRRamaswamy #SRR #anakruaward

Leave a Reply

Your email address will not be published. Required fields are marked *