Bengaluru, Nov 17: The New Building of 25th Rashtrotthana Yoga Centre was inaugurated herein Vijaynagar (Near Maruti Mandir). Activities like Yoga, Dance, Music, Karate, Acupressure Therapy, Counselling Centre, Bala Samskara Kendra, Samskrita Bala Kendra will be started soon in this new four-storey building.
On this occasion Mrs. Shobha Bhat and Mr. Vishwanath Bhat, who donated the space for the building of the Yoga Centre and Sri N Dinesh Hegde, General Secretary of Rashtrotthana Parishat were present.
In the coming days Rashrotthana Yoga will start New Centres in different parts of Bengaluru.
ಬೆಂಗಳೂರು, ನವೆಂಬರ್ 17: ರಾಷ್ಟ್ರೋತ್ಥಾನದ 25ನೇ ಯೋಗಕೇಂದ್ರದ ಹೊಸ ಕಟ್ಟಡವನ್ನು ಇಲ್ಲಿನ ವಿಜಯನಗರದಲ್ಲಿ (ಮಾರುತಿ ಮಂದಿರದ ಹತ್ತಿರ) ಉದ್ಘಾಟಿಸಲಾಯಿತು. ನಾಲ್ಕು ಅಂತಸ್ತುಗಳುಳ್ಳ ಈ ಹೊಸ ಕಟ್ಟಡದಲ್ಲಿ ಯೋಗ, ನೃತ್ಯ, ಸಂಗೀತ, ಕರಾಟೆ, ಆಕ್ಯುಪ್ರೆಶರ್ ಚಿಕಿತ್ಸೆ, ಆಪ್ತ ಸಲಹಾ ಕೇಂದ್ರ, ಬಾಲ ಸಂಸ್ಕಾರ ಕೇಂದ್ರ, ಸಂಸ್ಕೃತ ಬಾಲ ಕೇಂದ್ರ ಮುಂತಾದ ಚಟುವಟಿಕೆಗಳನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು.
ಈ ಸಂದರ್ಭದಲ್ಲಿ ಯೋಗಕೇಂದ್ರದ ಕಟ್ಟಡಕ್ಕೆ ಜಾಗವನ್ನು ದಾನವಾಗಿ ನೀಡಿದಂತಹ ಶ್ರೀಮತಿ ಶೋಭಾ ಭಟ್ ಮತ್ತು ಶ್ರೀ ವಿಶ್ವನಾಥ್ ಭಟ್ ದಂಪತಿ ಹಾಗೂ ರಾಷ್ಟ್ರೋತ್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆ ಉಪಸ್ಥಿತರಿದ್ದರು.
ಮುಂದಿನ ದಿನಗಳಲ್ಲಿ ಬೆಂಗಳೂರಿನ ಬೇರೆ ಬೇರೆ ಬಡಾವಣೆಗಳಲ್ಲಿ ರಾಷ್ಟ್ರೋತ್ಥಾನ ಯೋಗವು ಹೊಸ ಕೇಂದ್ರಗಳನ್ನು ಪ್ರಾರಂಭಿಸಲಿದೆ.
Project Info
- Category: News & Media
- Location: Vijaynagar, Bengaluru
- Completed Date: 17 Nov 2023