Agnivesha Ayurveda Anushthana

Bengaluru, Dec 17: Agnivesha Ayurveda Anushthana* conducted 31st Dhanwantari Jayanti and the National Seminar on Mamsavaha Sroto Vikaras and its Chikitsa herein Keshava Shilpa Auditorium, Rashtrothana Parishat, KG Nagar.

Agnivesha Vaidyaratna Award 2023 was given to Renowned Dr. Ravishankar Pervaje who practices Shudha Ayurveda in emergency conditions in Puttur.

Principal of Taranath Govt. Ayurveda Medical College, Bellary, Dr. Syeda Fatima; Founder President of Agnivesha Ayurveda Anushthana, Dr. Anantharaman; Present President of Anushthana, Dr. Samarth Rao; Dr. Santosh Patil, Dr. Ravishankar Pervaje and many more dignitaries graced the Inaugural Ceremony.

The program started with Dhanwantari Homa which was performed by Dr Manjunath Joshi and wife. Dr. Anantharaman explained the importance of Dhanwantari Homa and about lord Dhanwantari.

*Agnivesha Ayurveda Anushthana is an activity of Rashtrotthana Arogya Seva Kendra, started to encourage Ayurveda Doctors to practice Ayurveda.

ಬೆಂಗಳೂರು, ಡಿಸೆಂಬರ್ 17: ಅಗ್ನಿವೇಶ ಆಯುರ್ವೇದ ಅನುಷ್ಠಾನವು* 31ನೇ ಧನ್ವಂತರಿ ಜಯಂತಿ ಹಾಗೂ ತನ್ನಿಮಿತ್ತ ರಾಷ್ಟ್ರೀಯ ವಿಚಾರಸಂಕಿರಣ – ಮಾಂಸವಹ ಸ್ರೋತೋ ವಿಕಾರಗಳು ಹಾಗೂ ಅದಕ್ಕೆ ಚಿಕಿತ್ಸೆಯನ್ನು ಇಲ್ಲಿನ ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್, ಕೆಂಪೇಗೌಡನಗರ, ಇಲ್ಲಿ ಆಯೋಜಿಸಿತ್ತು.

ಪುತ್ತೂರಿನಲ್ಲಿ ತುರ್ತುಚಿಕಿತ್ಸೆಯಲ್ಲಿ ಶುದ್ಧ ಆಯುರ್ವೇದ ಸೇವೆಯನ್ನು ಒದಗಿಸುತ್ತಿರುವ ಖ್ಯಾತ ವೈದ್ಯರಾದ ಡಾ. ರವಿಶಂಕರ್ ಪೆರ್ವಾಜೆ ಅವರಿಗೆ ಅಗ್ನಿವೇಶ ವೈದ್ಯರತ್ನ ಪ್ರಶಸ್ತಿ 2023ನ್ನು ನೀಡಿ, ಗೌರವಿಸಲಾಯಿತು.

ಡಾ. ಸಯೀದಾ ಫಾತಿಮಾ, ಪ್ರಾಂಶುಪಾಲರು, ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯ ಕಾಲೇಜು, ಬಳ್ಳಾರಿ; ಡಾ. ಅನಂತರಾಮನ್, ಸ್ಥಾಪಕ ಅಧ್ಯಕ್ಷರು, ಅಗ್ನಿವೇಶ ಆಯುರ್ವೇದ ಅನುಷ್ಠಾನ; ಡಾ. ಸಮರ್ಥ ರಾವ್, ಅನುಷ‍್ಠಾನದ ಹಾಲಿ ಅಧ್ಯಕ್ಷರು; ಡಾ. ಸಂತೋಷ್ ಪಾಟೀಲ್, ಡಾ. ರವಿಶಂಕರ್ ಪೆರ್ವಾಜೆ ಮೊದಲಾ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಧನ್ವಂತರಿ ಹೋಮದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಡಾ. ಮಂಜುನಾಥ ಜೋಶಿ ದಂಪತಿ ಹೋಮವನ್ನು ನೆರವೇರಿಸಿದರು. ಡಾ. ಅನಂತರಾಮನ್ ಅವರು ಧನ್ವಂತರಿ ಹೋಮದ ಮಹತ್ವ ಹಾಗೂ ಧನ್ವಂತರಿಯ ಬಗೆಗೆ ತಿಳಿಸಿಕೊಟ್ಟರು.

*ಅಗ್ನಿವೇಶ ಆಯುರ್ವೇದ ಅನುಷ್ಠಾನ ಇದು ರಾಷ್ಟ್ರೋತ್ಥಾನ ಆರೋಗ್ಯ ಸೇವಾ ಕೇಂದ್ರದ ಒಂದು ಚಟುವಟಿಕೆ, ಆಯುರ್ವೇದ ವೈದ್ಯರು ಆಯುರ್ವೇದ ಚಿಕಿತ್ಸೆ ನೀಡಲು ಪ್ರೋತ್ಸಾಹಿಸುವ ಸಲುವಾಗಿ ಪ್ರಾರಂಭವಾಯಿತು.

https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #Agnivesha #Ayurveda #AgniveshaAyurvedaAnushthana #NationalSeminar

 

Project Info

  • Category: News & Media
  • Location: K G Nagar ,Bengaluru
  • Completed Date: 17 Dec 2023