Bengaluru, Nov 17: National Hockey Player, Dr. Sindhu Bharat inaugurated the Annual Sports Day of Rashtrotthana Vidya Kendra – Arkavathy and addressed the children with encouraging words.
ಬೆಂಗಳೂರು, ನವೆಂಬರ್ 17: ರಾಷ್ಟ್ರೀಯ ಹಾಕಿ ಆಟಗಾರ್ತಿ, ಡಾ. ಸಿಂಧು ಭರತ್ ಅವರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯ ವಾರ್ಷಿಕ ಕ್ರೀಡಾದಿನವನ್ನು ಉದ್ಘಾಟಿಸಿ, ಮಕ್ಕಳನ್ನು ಉದ್ದೇಶಿಸಿ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು.
ಡಾ. ಸಿಂಧು ಅವರು “ಕ್ರೀಡೆಯು ಮನುಷ್ಯನ ಮೂಲಭೂತ ಆಸಕ್ತಿಗಳಲ್ಲೊಂದಾಗಿದೆ. ಮಾನವನ ಉದ್ದೇಶ ಪೂರೈಕೆಗೆ ಉತ್ತಮ ಸಾಧನವಾಗಿದೆ ಎಂದು ಹೇಳಿದರು. ಕ್ರೀಡೆಗಳು ನಮ್ಮನ್ನು ಸದೃಢ ಮತ್ತು ಕ್ರಿಯಾಶೀಲರನ್ನಾಗಿಸುತ್ತವೆ. ಕ್ರೀಡೆಗಳು ಇಂದಿನ ವಿದ್ಯಾರ್ಥಿಗಳಲ್ಲಿ ವಿಶೇಷವಾಗಿ ಸ್ಪರ್ಧಾತ್ಮಕ ಮನೋಭಾವವನ್ನು ಮೂಡಿಸುವಲ್ಲಿ ಸಫಲವಾಗಿವೆ. ಮನಸ್ಸಿಗೆ ಸಂತೋಷವನ್ನು ನೀಡುವುದಲ್ಲದೇ, ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿವೆ. ಮಾನವನು ಆರೋಗ್ಯದಿಂದ ಇರಬೇಕೆಂದರೆ ಮೈಮನಗಳೆರಡರ ಬೆಳವಣಿಗೆಯೂ ಸಹ ಅಗತ್ಯವಾಗಿದೆ. ಕ್ರೀಡೆಯಿಂದ ಗೆಳೆಯರ ಜೊತೆ ಆಡುವಾಗ ಪರಸ್ಪರ ಹೊಂದಾಣಿಕೆ, ಸಹಕಾರ, ಶಿಸ್ತು, ನಿಯಮಪಾಲನೆ, ಪರಸ್ಪರ ಗೌರವ ಕೊಡುವುದು ಮುಂತಾದ ಮೌಲ್ಯಗಳ ಬೆಳವಣಿಗೆಯಾಗುತ್ತದೆ” ಎಂದು ತಿಳಿಸುತ್ತಾ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ನಂತರ 6 ರಿಂದ 10ನೆಯ ತರಗತಿಯ ವಿದ್ಯಾರ್ಥಿಗಳು ಸಾಮೂಹಿಕ ಪಥಸಂಚಲನ ಮಾಡಿದರು ಹಾಗೂ ಕ್ರೀಡಾಜ್ಯೋತಿಯನ್ನು ಬೆಳಗಿಸಲಾಯಿತು. ನಂತರ ಮುಖ್ಯ ಅತಿಥಿಗಳಿಂದ ಕ್ರೀಡೋತ್ಸವದ 100 ಮೀ, 400 ಮೀ, 600 ಮೀ ಓಟದ ಆಟಕ್ಕೆ ಚಾಲನೆ ನೀಡಲಾಯಿತು.
6 ರಿಂದ 10ನೇ ತರಗತಿಗಳ ವಿದ್ಯಾರ್ಥಿಗಳು ಓಟದ ಆಟ, ಹಗ್ಗಜಗ್ಗಾಟ, ವಾಲಿಬಾಲ್ ಆಟದಲ್ಲಿ ಪಾಲ್ಗೊಂಡರು. ರೂಟ್ಸ್ ವಿದ್ಯಾರ್ಥಿಗಳು ಕೂಡ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದರು. ಎಲ್ಲ ಪಂದ್ಯಗಳ ನಂತರದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಷ್ಟ್ರೋತ್ಥಾನ ಸಿ.ಬಿ.ಎಸ್.ಇ. ಶಾಲೆಗಳ ಆಡಳಿತಾಧಿಕಾರಿಗಳಾದ ಶ್ರೀ ಮಹೇಶ್ವರಯ್ಯ, ಕರ್ನಾಟಕ ರಾಷ್ಟ್ರೋತ್ಥಾನ ಸಿ.ಬಿ.ಎಸ್.ಇ. ಶಾಲೆಗಳ ಶೈಕ್ಷಣಿಕ ಸಂಯೋಜಕರು ಮತ್ತು ಶಾಲೆಯ ಪ್ರಧಾನಾಚಾರ್ಯರಾದ ಶ್ರೀಮತಿ ಮಂಜುಳ, ಉಪಪ್ರಧಾನಾಚಾರ್ಯರಾದ ಶ್ರೀಮತಿ ಚಂದ್ರಕಲಾವತಿ, ಶೈಕ್ಷಣಿಕ ಸಂಯೋಜಕರಾದ ಆನೆಟ್, ಶಾಲೆಯ ಎಲ್ಲ ಸಂಯೋಜಕರು, ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
https://rvkcbse.in/
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #RVK #RVKCBSE #RashtrotthanaVidyaKendra #RVKArkavathy #AnnualSportsDay
Project Info
- Category: News & Media
- Location: Arkavathy Layout, Bengaluru
- Completed Date: 17 Nov 2023